AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಾಯಕಾರಿ ಆಗಬಹುದು.. ಕೈಗೆ ಸಿಕ್ಕಿದ ಮಾಸ್ಕ್​ ಧರಿಸುವ ಮುನ್ನ ಒಮ್ಮೆ ಯೋಚಿಸಿ!

ಮಾಸ್ಕ್​ ಧರಿಸಿದಾಗ ಉಸಿರಾಟ ಪ್ರಕ್ರಿಯೆಯಲ್ಲೂ ಕೆಲ ಬದಲಾವಣೆ ಆಗುತ್ತದೆ. ಗಾಳಿಯು ನೇರವಾಗಿ ಮೂಗು ಮತ್ತು ಬಾಯಿಯನ್ನು ಪ್ರವೆಶಿಸದೇ ಮಾಸ್ಕ್​ ಮೂಲಕ ಸುತ್ತಲಿಂದ ಒಳಹೊಗ್ಗುತ್ತದೆ. ಈ ಸಂದರ್ಭದಲ್ಲಿ ಮಾಸ್ಕ್​ ಕೆಲ ಕಣಗಳನ್ನು ತಡೆಗಟ್ಟಿದರೂ ಸಣ್ಣ ಕಣಗಳು ಒಳ ನುಸುಳುತ್ತವೆ.

ಅಪಾಯಕಾರಿ ಆಗಬಹುದು.. ಕೈಗೆ ಸಿಕ್ಕಿದ ಮಾಸ್ಕ್​ ಧರಿಸುವ ಮುನ್ನ ಒಮ್ಮೆ ಯೋಚಿಸಿ!
ಸಾಂದರ್ಭಿಕ ಚಿತ್ರ
Skanda
|

Updated on:Dec 16, 2020 | 11:54 AM

Share

ಕೊವಿಡ್​ ಶುರವಾದ ಮೇಲೆ ಮಾಸ್ಕ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕೊರೊನಾ ವೈರಸ್​ ಭಯಕ್ಕೆ ಅಲ್ಲದಿದ್ದರೂ ದಂಡ ಕಟ್ಟುವ ಭಯಕ್ಕಾದರೂ ಜನ ಮಾಸ್ಕ್​ ಧರಿಸುತ್ತಿದ್ದಾರೆ. ಆದರೆ, ಎಷ್ಟೋ ಜನ ಮಾಸ್ಕ್ ಬಗ್ಗೆ ಉಡಾಫೆ ತೋರಿಸಿ ತಮಗರಿವಿಲ್ಲದಂತೆಯೇ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ ಎಂದು ಅಮೆರಿಕಾದ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ನಾಮಕಾವಸ್ತೆಗೆ ಎಂಬಂತೆ ಮಾಸ್ಕ್​ ಧರಿಸುವ ಹೆಚ್ಚಿನ ಮಂದಿ ಅದರ ಸ್ವಚ್ಛತೆಯ ಕುರಿತು ಕಾಳಜಿಯನ್ನೇ ವಹಿಸುತ್ತಿಲ್ಲ. ಬಹುತೇಕರು ಒಮ್ಮೆ ಧರಿಸಿದ ಮಾಸ್ಕನ್ನೇ ತಿರುಗಾಮುರುಗಾ ಮಾಡಿ ಧರಿಸುತ್ತಾರೆ. ಆದರೆ, ಹೀಗೆ ಬಳಕೆ ಮಾಡಿದ ಮಾಸ್ಕ್​ ಧರಿಸುವುದು ಹಾಗೆಯೇ ಓಡಾಡುವುದಕ್ಕಿಂತಲೂ ಅಪಾಯಕಾರಿ ಎನ್ನುವುದು ತಜ್ಞರ ಅಭಿಪ್ರಾಯ.

ಜನರು ಮಾಸ್ಕ್​ ಕೊಳ್ಳುವಾಗ ಅದರ ಗುಣಾವಗಳ ಕುರಿತು ಅವಲೋಕಿಸುತ್ತಿಲ್ಲ. ಮಾಸ್ಕ್​ಗಳಲ್ಲಿ ಹಲವು ವಿಧವಿದ್ದು ಕೆಲವಷ್ಟು ಮಾಸ್ಕ್​ಗಳು ಅತಿಸಣ್ಣ ಕಣಗಳನ್ನು ತಡೆದು ನಿಲ್ಲಿಸಲಾರವು. ಅಂತಹ ಮಾಸ್ಕ್​ಗಳನ್ನು ಪುನರ್​ಬಳಕೆ ಮಾಡಿದಷ್ಟೂ ಅಪಾಯ ಹೆಚ್ಚುತ್ತಲೇ ಇರುತ್ತದೆ. 3 ಪದರದ ಹೊಸಾ ಸರ್ಜಿಕಲ್​ ಮಾಸ್ಕ್​ ಶೇ.65ರಷ್ಟು ಪರಿಣಾಮಕಾರಿ ಆಗಿದ್ದರೆ ಬಳಕೆಯ ನಂತರ ಅದು ಶೇ.25ರಷ್ಟು ಮಾತ್ರ ಪರಿಣಾಮಕಾರಿ. ಇಂತಹ ಮಾಸ್ಕ್​ಗಳನ್ನು ಜನರು ಮತ್ತೆ ಮತ್ತೆ ಬಳಸುವುದರಿಂದ ಅದು ಮತ್ತಷ್ಟು ಅಪಾಯ ತಂದೊಡ್ಡಲಿದೆ ಎಂದು ಅಮೆರಿಕಾದ ತಜ್ಞರು ತಿಳಿಸಿದ್ದಾರೆ.

ಮಾಸ್ಕ್​ ಧರಿಸಿದಾಗ ಉಸಿರಾಟ ಪ್ರಕ್ರಿಯೆಯಲ್ಲೂ ಕೆಲ ಬದಲಾವಣೆ ಆಗುತ್ತದೆ. ಗಾಳಿಯು ನೇರವಾಗಿ ಮೂಗು ಮತ್ತು ಬಾಯಿಯನ್ನು ಪ್ರವೆಶಿಸದೇ ಮಾಸ್ಕ್​ ಮೂಲಕ ಸುತ್ತಲಿಂದ ಒಳಹೊಗ್ಗುತ್ತದೆ. ಈ ಸಂದರ್ಭದಲ್ಲಿ ಮಾಸ್ಕ್​ ಕೆಲ ಕಣಗಳನ್ನು ತಡೆಗಟ್ಟಿದರೂ ಸಣ್ಣ ಕಣಗಳು ಒಳ ನುಸುಳುತ್ತವೆ.

ಆದ್ದರಿಂದ ಮಾಸ್ಕ್​ ಕುರಿತು ಜನಸಾಮಾನ್ಯರು ನಿರ್ಲಕ್ಷ್ಯ ತೋರಿಸುವುದು ಆಘಾತಕಾರಿ. ಆರೋಗ್ಯ ಸಿಬ್ಬಂದಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಜನರಲ್ಲಿ ಅರಿವು ಮೂಡಿಸಬೇಕಿದೆ. ಕೊರೊನಾ ತಡೆಗಟ್ಟಲು ನಿರ್ದಿಷ್ಟವಾಗಿ ಯಾವ ರೀತಿಯ ಮಾಸ್ಕ್ ಬಳಸಬೇಕು ಎಂದು ಹೇಳಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಸ್ಕ್ ಖರೀದಿಸಿ ಹಣ ನೀಡದೆ ವಂಚಿಸಿದವರ ವಿರುದ್ಧ ದೂರು

Published On - 11:54 am, Wed, 16 December 20