ಕೊರೊನಾ ಸೋಂಕು ಕಾಣಿಸಿಕೊಂಡರೆ ಬ್ರೇನ್ಗೂ ಹೆಚ್ಚು ಕಾಟ ಕೊಡಲಿದೆಯಂತೆ. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸೋಂಕು ಕಾಣಿಸಿಕೊಂಡ ಆರಂಭದಲ್ಲೇ ಬ್ರೇನ್ನಲ್ಲಿ ಸ್ಟ್ರೋಕ್ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತೆ ಅಂತಾ ಸಂಶೋಧನೆಯೊಂದು ಹೇಳಿದೆ. ಸೋಂಕಿನ ಪ್ರಮಾಣ ಹೆಚ್ಚಾದಲ್ಲಿ ಮಾತ್ರ ಸ್ಟ್ರೋಕ್ ಹೊಡೆಯುವ ಸಾಧ್ಯತೆ ಹೆಚ್ಚು ಅಂತಾ ಹೇಳಲಾಗಿದೆ. ಒಂದು ವೇಳೆ ಗುಣಮುಖರಾದರೂ ಬ್ರೇನ್ಗೆ ಡ್ಯಾಮೇಜ್ ಆಗಲಿದೆ.
ಕೊರೊನಾ ‘ವಿಶ್ವ’ರೂಪ
ಕೊರೊನಾದಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಪ್ರಪಂಚದಲ್ಲಿ ವಿಶ್ವದಲ್ಲಿ 96 ಲಕ್ಷ 97 ಸಾವಿರದ 224 ಜನರಿಗೆ ಕೊರೊನಾ ತಗುಲಿದೆ. ಕೊರೊನಾಗೆ ಒಟ್ಟು 4 ಲಕ್ಷ 90 ಸಾವಿರದ 910 ಜನ ಬಲಿಯಾಗಿದ್ದಾರೆ. ಸೋಂಕಿನಿಂದ ಈವರೆಗೂ 50 ಲಕ್ಷದ 41 ಸಾವಿರದ 82 ಜನರು ಗುಣಮುಖರಾದ್ರೆ, 52,50,695 ಮಂದಿ ಪ್ರಸ್ತುತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ರೆಜಿಲ್ನಲ್ಲಿ ಲಾಕ್ಡೌನ್ ಲಿಫ್ಟ್
ಕೊರೊನಾ ಸೋಂಕಿನಿಂದಾಗಿ ಬ್ರೆಜಿಲ್ ತಲ್ಲಣಿಸಿ ಹೋಗಿದೆ. ಈಗಾಗಲೇ ಸೋಂಕಿತರ ಸಂಖ್ಯೆ 12,33,147ಕ್ಕೆ ಏರಿಕೆಯಾಗಿದೆ. ಇದ್ರ ಮಧ್ಯೆಯೂ ಬ್ರೆಜಿಲ್ನಲ್ಲಿ ಲಾಕ್ಡೌನ್ ಲಿಫ್ಟ್ ಮಾಡಲಾಗಿದೆ. ಹೀಗಾಗಿ, ಸಾರ್ವಜನಿಕ ಸಾರಿಗೆ ಸಂಚಾರ ಆರಂಭಗೊಂಡಿದೆ. ಕ್ವಾರಂಟೂನ್ ಮಾಡುತ್ತಿದ್ದ ನಿಯಮಗಳನ್ನೂ ಸಡಿಲ ಮಾಡಿದ್ದು, ಜನರು ಗುಂಪು ಗುಂಪಾಗಿ ಓಡಾಟ ನಡೆಸ್ತಿದ್ರು.
ಸಹಜ ಸ್ಥಿತಿಗೆ ಮೆಕ್ಸಿಕೋ
ಕೊರೊನಾ ಸೋಂಕು ಮೆಕ್ಸಿಕೋದಲ್ಲೂ ಅಟ್ಟಹಾಸ ಮೆರೆಯುತ್ತಿದೆ. ದೇಶದಲ್ಲಿ ಈವರೆಗೂ 11,338 ಜನರಿಗೆ ಸೋಂಕು ತಗುಲಿದ್ರೆ, 217 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇದ್ರ ಮಧ್ಯೆಯೂ ಕೆಫೆ ಮತ್ತು ರೆಸ್ಟೋರೆಂಟ್ಗಳನ್ನ ತೆರೆಯಲು ಅವಕಾಶ ನೀಡಲಾಗಿದೆ. ಲಾಕ್ಡೌನ್ ಸಡಿಲಿಕೆ ಬಳಿಕ ರಬಾಟ್ನಲ್ಲಿ ಜನ ಜೀವನ ಯಥಾ ಸ್ಥಿತಿಗೆ ಬಂದಿದೆ.
WHO ಕಳವಳ
ಜಗತ್ತಿನಾದ್ಯಂತ ಕೊರೊನಾ ವೈರಸ್ ಅಬ್ಬರಿಸುತ್ತಲೇ ಇದೆ. ಕ್ಷಣ ಕ್ಷಣಕ್ಕೂ ಸೋಂಕಿತರ ಪಟ್ಟಿ ಗಗನಕ್ಕೇರುತ್ತಿದೆ. ಹೆಚ್ಚು ಮುಂಜಾಗ್ರತೆ ಮತ್ತು ಕಾಳಜಿ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ವೈರಸ್ ಈಗಲೂ ಅತಿ ವೇಗವಾಗಿ ಹರಡುತ್ತಿರುವುದರಿಂದ, ಮತ್ತಷ್ಟು ಜನರಿಗೆ ಸೋಂಕು ಹಬ್ಬುವ ಸಾಧ್ಯತೆ ಇದೆ ಅಂತಾ ಜಿನೇವಾದಲ್ಲಿ ಟೆಡ್ರೋಸ್ ಹೇಳಿದ್ದಾರೆ.
ICU ಹೆಚ್ಚಳ
ಎಲ್ ಸಲ್ವಾಡಾರ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿನಿಂದಾಗಿ 126 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇದ್ರ ಮಧ್ಯೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಐಸಿಯುಗಳ ಕೊರತೆ ಕಾಡ್ತಿತ್ತು. ಇದ್ರಿಂದ ಎಚ್ಚೆತ್ತ ಸರ್ಕಾರ ಸ್ಯಾನ್ ಸಲ್ವಾಡಾರ್ನ ಆಸ್ಪತ್ರೆಗಳಲ್ಲಿ ಐಸಿಯುಗಳ ಸಂಖ್ಯೆ ಹೆಚ್ಚಿಸಲಾಗಿದೆ. ಮುನ್ನೆಚ್ಚರಿಕೆಯಿಂದಾಗಿ ವಿಶೇಷ ವಾರ್ಡ್ಗಳನ್ನ ನಿರ್ಮಿಸಿ, ಅವುಗಳನ್ನೆಲ್ಲಾ ಐಸಿಯು ಸೆಂಟರ್ಗಳನ್ನಾಗಿಸಲಾಗಿದೆ.
ಕೊರೊನಾ ‘ಜಗ’
ಕೊರೊನಾ ವೈರಸ್ ಜಗತ್ತಿನ ಒಂದೇ ಒಂದು ದೇಶವನ್ನೂ ಬಿಡದಂತೆ ವಕ್ಕರಿಸಿಕೊಳ್ತಿದೆ. ವೈರಸ್ನಿಂದಾಗಿ ಭೂಮಿಯಲ್ಲಿ ಯಾವ ರೀತಿ ಪರಿಣಾಮ ಬೀರಿದೆ ಅನ್ನೋದನ್ನ ನಾಸಾ ಸಂಸ್ಥೆ ಸ್ಯಾಟಲೈಟ್ ವಿಡಿಯೋವನ್ನ ರಿಲೀಸ್ ಮಾಡಿದೆ. ಇದ್ರಲ್ಲಿ ವೈರಸ್ನಿಂದಾಗಿ ಯಾವ್ಯಾವ ದೇಶದ ಮೇಲೆ ಎಷ್ಟೆಷ್ಟು ಪರಿಣಾಮ ಬೀರಿದೆ ಅನ್ನೋದನ್ನ ಡಾಟಾ ಮೂಲಕ ತಿಳಿಸಿದೆ.
ಬೀಜಿಂಗ್ನಲ್ಲಿ ಸೋಂಕಿನ ಭೀತಿ
ಚೀನಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಅಂತಾ ಹೇಳುತ್ತಿದ್ದರೂ, ರಾಜಧಾನಿ ಬೀಜಿಂಗ್ನಲ್ಲಿ ಮಾತ್ರ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ. ಇಂದು ಮತ್ತೆ 13 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸಾಮೂಹಿಕ ಕೊರೊನಾ ಟೆಸ್ಟಿಂಗ್ ವೇಳೆಯೇ ಸೋಂಕು ಬಂದಿರೋದು ಆಘಾತಕ್ಕೆ ಕಾರಣವಾಗಿದೆ. ವಿದೇಶದಿಂದ ಚೀನಾಗೆ ಬಂದ ಇಬ್ಬರಿಗೂ ಸೋಂಕು ಹಬ್ಬಿರೋದಾಗಿ ಚೀನಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹೇಳಿದೆ.
ನಿರ್ಬಂಧ ಹಿಂಪಡೆದ ಐರ್ಲೆಂಡ್
ಕೊರೊನಾ ಸೋಂಕಿನಿಂದಾಗಿ ಐರ್ಲೆಂಡ್ನಲ್ಲಿ ಪ್ರವಾಸಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅನ್ಯ ದೇಶಗಳಿಂದ ಐರ್ಲೆಂಡ್ಗೆ ಬರುವವಂತಿರಲಿಲ್ಲ. ಆದ್ರೆ, ಜೂನ್ 9 ರಿಂದ ಐರ್ಲೆಂಡ್ನಲ್ಲಿ ವಿದೇಶಿ ಪ್ರವಾಸಿಗರೂ ಸಹ ಆಗಮಿಸಬಹುದಾಗಿದೆ. ಐರ್ಲೆಂಡ್ನಲ್ಲಿ ಈವರೆಗೂ 25,405 ಜನರಿಗೆ ಸೋಂಕು ತಗುಲಿದ್ರೆ, 1,407 ಜನರು ಸೋಂಕಿಗೆ ಬಲಿಯಾಗಿದ್ದಾರೆ. 23,364 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.