ಸಹೋದರನ ಆಹಾರ ತಿಂದು ತಪ್ಪಿನ ಅರಿವಾದೊಡನೆ ತಬ್ಬಿಕೊಂಡು ಕ್ಷಮೆ ಕೇಳಿದ ನಾಯಿ
ವಾಷಿಂಗ್ಟನ್: ಮೂಕ ಪ್ರಾಣಿಗಳು ಅವುಗಳಿಗೆ ಮಾತು ಬರೋಲ್ಲ, ಅವಕ್ಕೆ ಏನೂ ಅರ್ಥ ಆಗೋದಿಲ್ಲ ಅಂದ್ಕೊಂಡಿದ್ರೆ ಅದು ತಪ್ಪು ಅನ್ನುವಂತಿದೆ ಅಮೆರಿಕದ ವಾಷಿಂಗ್ಟನ್ನಲ್ಲಿ ನಡೆದ ಘಟನೆ. ಹೌದು, ಅಮೆರಿಕದ ವಾಷಿಂಗ್ಟನ್ನ ವಾಟ್ಸನ್ ಎನ್ನೋ ನಾಯಿ ತನ್ನ ಪಾಲಿನ ಆಹಾರ ತಿಂದಿದ್ದಲ್ಲದೇ, ತನ್ನ ಸಹೋದರ ಕಿಕೋನ ಆಹಾರವನ್ನೂ ತಿಂದಿದೆ. ಹೀಗಾಗಿ ಕಿಕೋ ಖಾಲಿ ಹೊಟ್ಟೆಯಲ್ಲಿ ಸಪ್ಪೆಮೋರೆ ಹಾಕ್ಕೊಂಡಿದೆ. ಇದನ್ನು ಗಮನಿಸಿದ ಯಜಮಾನತಿ ವಾಟ್ಸನ್‌ಗೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಆಗ ಸಪ್ಪೆಮೋರೆ ಹಾಕಿಕೊಂಡ ವಾಟ್ಸನ್ ತಪ್ಪಾಯಿತು, ಕ್ಷಮಿಸು ಬ್ರದರ್ ಅಂತಾ ಕಿಕೋನನ್ನು ಅಪ್ಪಿಕೊಂಡು […]
ವಾಷಿಂಗ್ಟನ್: ಮೂಕ ಪ್ರಾಣಿಗಳು ಅವುಗಳಿಗೆ ಮಾತು ಬರೋಲ್ಲ, ಅವಕ್ಕೆ ಏನೂ ಅರ್ಥ ಆಗೋದಿಲ್ಲ ಅಂದ್ಕೊಂಡಿದ್ರೆ ಅದು ತಪ್ಪು ಅನ್ನುವಂತಿದೆ ಅಮೆರಿಕದ ವಾಷಿಂಗ್ಟನ್ನಲ್ಲಿ ನಡೆದ ಘಟನೆ.
ಹೌದು, ಅಮೆರಿಕದ ವಾಷಿಂಗ್ಟನ್ನ ವಾಟ್ಸನ್ ಎನ್ನೋ ನಾಯಿ ತನ್ನ ಪಾಲಿನ ಆಹಾರ ತಿಂದಿದ್ದಲ್ಲದೇ, ತನ್ನ ಸಹೋದರ ಕಿಕೋನ ಆಹಾರವನ್ನೂ ತಿಂದಿದೆ. ಹೀಗಾಗಿ ಕಿಕೋ ಖಾಲಿ ಹೊಟ್ಟೆಯಲ್ಲಿ ಸಪ್ಪೆಮೋರೆ ಹಾಕ್ಕೊಂಡಿದೆ. ಇದನ್ನು ಗಮನಿಸಿದ ಯಜಮಾನತಿ ವಾಟ್ಸನ್‌ಗೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಆಗ ಸಪ್ಪೆಮೋರೆ ಹಾಕಿಕೊಂಡ ವಾಟ್ಸನ್ ತಪ್ಪಾಯಿತು, ಕ್ಷಮಿಸು ಬ್ರದರ್ ಅಂತಾ ಕಿಕೋನನ್ನು ಅಪ್ಪಿಕೊಂಡು ಕ್ಷಮೆ ಕೇಳಿದೆ.
ಈ ವಿಡಿಯೋವನ್ನ ಯಜಮಾನತಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾಳೆ. ಮಾಡಿದ ತಪ್ಪಿನ ಅರಿವಾದ ತಕ್ಷಣವೇ ಕ್ಷಮೆ ಕೇಳಿದ ಮುಗ್ದ ಪ್ರಾಣಿಯ ಈ ವಿಡಿಯೋ, ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಲಿವುಡ್ ನಟಿ ರಿಚಾ ಚಡ್ಡಾ ಸೇರಿದಂತೆ ಅಸಂಖ್ಯಾತ ನೆಟ್ಟಿಗರು ಮುಗ್ದ ನಾಯಿಗೆ ಮನಸೋತಿದ್ದಾರೆ. ಎಂಥಾ ಕಲ್ಲು ಹೃದಯದವರಾಗಿದ್ರೂ, ಮನಸ್ಸು ಕರಗುವುದರಲ್ಲಿ ಅನುಮಾನವೇ ಇಲ್ಲ.
a dogs way of saying sorry(https://t.co/RwX1UbWUwc) pic.twitter.com/kmfy5qBdGO
— Humor And Animals (@humorandanimals) June 24, 2020
Published On - 8:07 pm, Thu, 25 June 20