ಚೀನಾಕ್ಕೆ ಮತ್ತೊಂದು ಪೆಟ್ಟು: ಕೀನ್ಯಾದ ಭಾರೀ ಮೊತ್ತದ ಗುತ್ತಿಗೆ ರದ್ದು!
ನೈರೋಬಿ: ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರ ಚೀನಾಗೆ ಭಾರಿ ಪೆಟ್ಟು ನೀಡಿತ್ತು. ಅದೇನೆಂದರೆ ಚೀನಾದ ಮೂರು ಕಂಪನಿಗಳೊಂದಿಗೆ 5 ಸಾವಿರ ಕೋಟಿ ರೂ. ಯೋಜನೆಯನ್ನು ಉದ್ಧವ್ ಠಾಕ್ರೆ ಸರ್ಕಾರ ಕೈಬಿಟ್ಟಿದೆ. ಇದೀಗ ಕೀನ್ಯಾ ದೇಶದಲ್ಲಿ ಕೈಗೊಂಡಿರುವ ಚೀನಾದ ರೈಲ್ವೆ ಯೋಜನೆಯು ಕಾನೂನು ಬಾಹಿರ ಎಂದು ಘೋಷಿಸಿದೆ. ಹೌದು, ಪುಟ್ಟ ದೇಶ ಕೀನ್ಯಾದಲ್ಲಿ ಚೀನಾವು ಬರೋಬ್ಬರಿ 3.2 ಬಿಲಿಯನ್ ಡಾಲರ್ ಮೊತ್ತದ ರೈಲ್ವೆ ಯೋಜನೆಯನ್ನು ಕೈಗೊಂಡಿತ್ತು. ಅದರಂತೆ ಕೀನ್ಯಾದಲ್ಲಿ ರೈಲು ಹಳಿ ಹಾಗೂ ರೈಲುಗಳ ನಿರ್ಮಾಣಕ್ಕೆ ಚೀನಾ ಮುಂದಾಗಿತ್ತು. ಆದ್ರೆ, […]
ನೈರೋಬಿ: ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರ ಚೀನಾಗೆ ಭಾರಿ ಪೆಟ್ಟು ನೀಡಿತ್ತು. ಅದೇನೆಂದರೆ ಚೀನಾದ ಮೂರು ಕಂಪನಿಗಳೊಂದಿಗೆ 5 ಸಾವಿರ ಕೋಟಿ ರೂ. ಯೋಜನೆಯನ್ನು ಉದ್ಧವ್ ಠಾಕ್ರೆ ಸರ್ಕಾರ ಕೈಬಿಟ್ಟಿದೆ. ಇದೀಗ ಕೀನ್ಯಾ ದೇಶದಲ್ಲಿ ಕೈಗೊಂಡಿರುವ ಚೀನಾದ ರೈಲ್ವೆ ಯೋಜನೆಯು ಕಾನೂನು ಬಾಹಿರ ಎಂದು ಘೋಷಿಸಿದೆ.
ಹೌದು, ಪುಟ್ಟ ದೇಶ ಕೀನ್ಯಾದಲ್ಲಿ ಚೀನಾವು ಬರೋಬ್ಬರಿ 3.2 ಬಿಲಿಯನ್ ಡಾಲರ್ ಮೊತ್ತದ ರೈಲ್ವೆ ಯೋಜನೆಯನ್ನು ಕೈಗೊಂಡಿತ್ತು. ಅದರಂತೆ ಕೀನ್ಯಾದಲ್ಲಿ ರೈಲು ಹಳಿ ಹಾಗೂ ರೈಲುಗಳ ನಿರ್ಮಾಣಕ್ಕೆ ಚೀನಾ ಮುಂದಾಗಿತ್ತು. ಆದ್ರೆ, ಈ ಯೋಜನೆ ಕಾನೂನು ಬಾಹಿರ ಎಂದು ಕೀನ್ಯಾ ನ್ಯಾಯಾಲಯ ಹೇಳಿದೆ.
ಚೀನಾದ ರಸ್ತೆ ಹಾಗೂ ಸೇತುವೆ ನಿರ್ಮಾಣ ನಿಗಮ (CRBC) ಯೋಜನೆಗೆ ಕೂಡಲೆ ತಡೆ ನೀಡುವಂತೆ ಕೀನ್ಯಾ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.