ಕೊರೊನಾ ವೈರಸ್ ನಿರ್ಬಂಧದಿಂದಾಗಿ ತಿಂಗಳುಗಳವರೆಗೆ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಯುರೋಪಿನ ಅತಿದೊಡ್ಡ ವೇಶ್ಯಾಗೃಹಗಳಲ್ಲಿ ಒಂದಾದ ಪಾಶ್ಚಾ ವೇಶ್ಯಾಗೃಹವೊಂದು ದಿವಾಳಿತನ ಕೋರಿ ಅರ್ಜಿ ಸಲ್ಲಿಸಿದೆ.
ಜರ್ಮನಿಯ ಕಲೋನ್‌ನಲ್ಲಿರುವ ಪಾಶ್ಚಾ ವೇಶ್ಯಾಗೃಹವು ತನ್ನ 10 ಅಂತಸ್ತಿನ ಕಟ್ಟಡ ಮತ್ತು 60 ಸಿಬ್ಬಂದಿಗಳ ಪಾಲನೆಗಾಗಿ, ಹಾಗೂ ಅವರ ಸಂಬಳ ಪಾವತಿಸುವ ಸಲುವಾಗಿ ಇಲ್ಲಿವರೆಗೂ ಕೂಡಿರಿಸಿದ್ದ ಎಲ್ಲಾ ಹಣಕಾಸು ಮೂಲಗಳನ್ನು ಬಳಸಿಕೊಂಡಿದೆ. ಆದರಿಂದ ಮುಂದಿನ ದಿನಗಳಲ್ಲಿ ವೇಶ್ಯಾಗೃಹದ ನಿರ್ವಾಹಣೆ ಕಷ್ಟವಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದೆ.
ಜರ್ಮನ್ ಸರ್ಕಾರವು ಆರಂಭದಲ್ಲಿಯೇ ಮತ್ತೆ ಕೆಲಸಗಳು ಪ್ರಾರಂಭವಾಗಬಹುದು ಎಂದು ನಮಗೆ ಭರವಸೆ ನೀಡಿದ್ದರೆ ಬ್ಯಾಂಕುಗಳ ಸಹಾಯದಿಂದ ದಿವಾಳಿತನವನ್ನು ತಪ್ಪಿಸಲು ನಮಗೆ ಸಾಧ್ಯವಾಗುತ್ತಿತ್ತು. ಆದರೆ ಜರ್ಮನ್ ಸರ್ಕಾರದ ನಿರ್ಲಕ್ಷ್ಯದಿಂದ ನಾವು ಈ ಹಂತ ತಲುಪಿದ್ದೇವೆ ಎಂದಿದ್ದಾರೆ.
COVID-19 ವ್ಯಾಪಕವಾಗಿ ಹರಡುವುದನ್ನು ತಡೆಯುವ ಪ್ರಯತ್ನವಾಗಿ, ಜರ್ಮನ್ ಆಡಳಿತ ಮಂಡಳಿ ಕಲೋನ್ನಲ್ಲಿ ಐದು ತಿಂಗಳಿಂದ ಹಿಂದೆ ವೇಶ್ಯಾವಾಟಿಕೆಯನ್ನು ನಿಷೇಧಿಸಿರುವುದೇ ದಿವಾಳಿತನಕ್ಕೆ ಕಾರಣವಾಗಿದೆ.