AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಸಿಂಧೂರದಿಂದಾಗಿ ಪಾಕಿಸ್ತಾನ ಸಂವಿಧಾನವನ್ನೇ ಬದಲಾಯಿಸಿತು; ರಕ್ಷಣಾ ಮುಖ್ಯಸ್ಥ ಟೀಕೆ

ಪಾಕಿಸ್ತಾನದ ವೈಫಲ್ಯಗಳನ್ನು ಆಪರೇಷನ್ ಸಿಂಧೂರ್ ಬಹಿರಂಗಪಡಿಸಿತು. ಹಾಗೇ, ಇದರಿಂದಾಗಿ ಪಾಕ್ ಸಂವಿಧಾನವನ್ನೇ ಬದಲಾಯಿಸುವಂತಾಯಿಸಿತು ಎಂದು ಭಾರತದ ರಕ್ಷಣಾ ಮುಖ್ಯಸ್ಥ ಹೇಳಿದ್ದಾರೆ. ಪಾಕಿಸ್ತಾನದ ಇತ್ತೀಚಿನ ಸಾಂವಿಧಾನಿಕ ತಿದ್ದುಪಡಿಗಳು ಆಪರೇಷನ್ ಸಿಂಧೂರ್ ಸಮಯದಲ್ಲಿ ಅದು ಎದುರಿಸಿದ ವೈಫಲ್ಯಗಳನ್ನು ಪ್ರತಿಬಿಂಬಿಸುತ್ತವೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ. ಪಾಕಿಸ್ತಾನದ ಸಂವಿಧಾನದ 243ನೇ ವಿಧಿಗೆ ತಿದ್ದುಪಡಿ ಮಾಡುವುದರಿಂದ ದೇಶದ ಉನ್ನತ ರಕ್ಷಣಾ ಸಂಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ.

ಆಪರೇಷನ್ ಸಿಂಧೂರದಿಂದಾಗಿ ಪಾಕಿಸ್ತಾನ ಸಂವಿಧಾನವನ್ನೇ ಬದಲಾಯಿಸಿತು; ರಕ್ಷಣಾ ಮುಖ್ಯಸ್ಥ ಟೀಕೆ
Anil Chauhan
ಸುಷ್ಮಾ ಚಕ್ರೆ
|

Updated on: Jan 10, 2026 | 3:51 PM

Share

ನವದೆಹಲಿ, ಜನವರಿ 10: ಭಾರತದ ರಕ್ಷಣಾ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಪಾಕಿಸ್ತಾನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ಇತ್ತೀಚಿನ ಸಾಂವಿಧಾನಿಕ ತಿದ್ದುಪಡಿಗಳು ಆಪರೇಷನ್ ಸಿಂಧೂರ್ (Operation Sindoor) ಸಮಯದಲ್ಲಿ ಅದರ ವೈಫಲ್ಯವನ್ನು ಪ್ರದರ್ಶಿಸುತ್ತವೆ ಎಂದು ಹೇಳಿಟೀಕಿಸಿದ್ದಾರೆ. ಪಾಕಿಸ್ತಾನ ತನ್ನ ನ್ಯೂನತೆಗಳನ್ನು ಮರೆಮಾಡಲು ಬದಲಾವಣೆಗಳನ್ನು ಆರಂಭಿಸಿತು. ಇವು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಮಯದಲ್ಲಿ ಬಹಿರಂಗಗೊಂಡವು ಎಂದು ಅವರು ಹೇಳಿದ್ದಾರೆ.

ಪುಣೆ ಸಾರ್ವಜನಿಕ ನೀತಿ ಉತ್ಸವದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಜನರಲ್ ಚೌಹಾಣ್, ಪಾಕಿಸ್ತಾನದಲ್ಲಿ ಮಾಡಲಾದ ಬದಲಾವಣೆಗಳು ಅನೇಕ ನ್ಯೂನತೆಗಳನ್ನು ಬಹಿರಂಗಪಡಿಸಿವೆ ಎಂದು ಹೇಳಿದ್ದಾರೆ. ಆತುರದಿಂದ ಮಾಡಿದ ಸಾಂವಿಧಾನಿಕ ತಿದ್ದುಪಡಿ ಸೇರಿದಂತೆ ಪಾಕಿಸ್ತಾನದಲ್ಲಿ ತರಲಾದ ಬದಲಾವಣೆಗಳು ವಾಸ್ತವವಾಗಿ ಈ ಕಾರ್ಯಾಚರಣೆಯಲ್ಲಿ ಅವರು ಅಂದುಕೊಂಡಿದ್ದು ಆಗಲಿಲ್ಲ ಎಂಬುದನ್ನು ಸಾರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಬೀಜಿಂಗ್ ಮಧ್ಯಸ್ಥಿಕೆ; ಲಜ್ಜೆಗೆಟ್ಟು ಚೀನಾದ ಬೆಂಬಲಕ್ಕೆ ನಿಂತ ಪಾಕಿಸ್ತಾನ

ಪಾಕಿಸ್ತಾನದ ಸಂವಿಧಾನದ 243ನೇ ವಿಧಿಗೆ ತಿದ್ದುಪಡಿ ಮಾಡುವ ಮೂಲಕ ದೇಶದ ಉನ್ನತ ರಕ್ಷಣಾ ಸಂಸ್ಥೆಯಲ್ಲಿ ಭಾರೀ ಬದಲಾವಣೆಗಳಾಗಿವೆ. 3 ಸೇವೆಗಳ ನಡುವೆ ಜಂಟಿ ಮುಖ್ಯಸ್ಥರ (CDF) ಹುದ್ದೆಯನ್ನು ರದ್ದುಗೊಳಿಸಲಾಗಿದೆ ಎಂದು ಜನರಲ್ ಚೌಹಾಣ್ ವಿವರಿಸಿದ್ದಾರೆ.

ಇತ್ತೀಚಿನ ಕಾರ್ಯಾಚರಣೆಗಳಿಂದ ಕಲಿತ ಪಾಠಗಳಿಂದ ಭಾರತದ ರಕ್ಷಣಾ ಯೋಜನೆ ಮತ್ತು ಉನ್ನತ ಕಮಾಂಡ್ ರಚನೆಗಳನ್ನು ಮಾರ್ಪಡಿಸಲಾಗಿದೆ. ಭಾರತವು ದೀರ್ಘಕಾಲೀನ ಮಿಲಿಟರಿ ಸಿದ್ಧತೆ ಮತ್ತು ಹೊಂದಾಣಿಕೆಯ ಕಾರ್ಯತಂತ್ರದ ಯೋಜನೆಯ ಮೇಲೆ ಕೇಂದ್ರೀಕರಿಸುತ್ತಿದೆ ಎಂದು ಜನರಲ್ ಚೌಹಾಣ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ