ಎಚ್ಚರ! ಚಿಕ್ಕ ಮಕ್ಕಳ ಮೂಗಿನಲ್ಲಿ 3 ವಾರ ಜೀವಿಸುತ್ತೆ ಕೊರೊನಾ ಮಾರಿ
ಕೊರೊನಾ ಹೆಮ್ಮಾರಿ ಈಗ ವಿಶ್ವಾದ್ಯಂತ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಕೊರೊನಾ ಹಾವಳಿಯಿಂದ ತತ್ತರಿಸಿದ್ದಾರೆ. ಆದ್ರೆ ದಕ್ಷಿಣ ಕೋರಿಯಾದಲ್ಲಿ ನಡೆದ ವಿಶೇಷ ಸ್ಟಡಿಯೊಂದು ಮಕ್ಕಳ ಮೂಗಿನಲ್ಲಿ ಕೊರೊನಾ ವೈರಸ್ ಸುಮಾರು ಮೂರು ವಾರಗಳ ಕಾಲ ಜೀವಿಸಿರುತ್ತೆ ಎಂದು ತಿಳಿಸಿದೆ. ಇದುವರೆಗಿನ ಅಧ್ಯಯನದಲ್ಲಿ ಚಿಕ್ಕಮಕ್ಕಳು ಮತ್ತು ವಯಸ್ಸಾದವರು ಕೊರೊನಾದಿಂದ ಹೆಚ್ಚು ತೊಂದರೆಗೊಳಗಾಗುತ್ತಾರೆ ಎನ್ನಲಾಗುತ್ತಿತ್ತು. ಆದ್ರೆ ಬ್ರಿಟಿಷ್ ರಾಯಲ್ ಕಾಲೇಜ್ ಆಫ್ ಪೀಡಿಯಾಟ್ರಿಕ್ಸ್ ಌಂಡ್ ಚೈಲ್ಡ್ ಹೆಲ್ತ್ ಅಧ್ಯಯನದ ಪ್ರಕಾರ ಚಿಕ್ಕಮಕ್ಕಳಿಗಿಂತ ಹಿರಿಯರಿಂದಲೇ ಕೊರೊನಾ ಹಬ್ಬುತ್ತೆ. ಚಿಕ್ಕ ಮಕ್ಕಳು […]
ಕೊರೊನಾ ಹೆಮ್ಮಾರಿ ಈಗ ವಿಶ್ವಾದ್ಯಂತ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಕೊರೊನಾ ಹಾವಳಿಯಿಂದ ತತ್ತರಿಸಿದ್ದಾರೆ. ಆದ್ರೆ ದಕ್ಷಿಣ ಕೋರಿಯಾದಲ್ಲಿ ನಡೆದ ವಿಶೇಷ ಸ್ಟಡಿಯೊಂದು ಮಕ್ಕಳ ಮೂಗಿನಲ್ಲಿ ಕೊರೊನಾ ವೈರಸ್ ಸುಮಾರು ಮೂರು ವಾರಗಳ ಕಾಲ ಜೀವಿಸಿರುತ್ತೆ ಎಂದು ತಿಳಿಸಿದೆ.
ಇದುವರೆಗಿನ ಅಧ್ಯಯನದಲ್ಲಿ ಚಿಕ್ಕಮಕ್ಕಳು ಮತ್ತು ವಯಸ್ಸಾದವರು ಕೊರೊನಾದಿಂದ ಹೆಚ್ಚು ತೊಂದರೆಗೊಳಗಾಗುತ್ತಾರೆ ಎನ್ನಲಾಗುತ್ತಿತ್ತು. ಆದ್ರೆ ಬ್ರಿಟಿಷ್ ರಾಯಲ್ ಕಾಲೇಜ್ ಆಫ್ ಪೀಡಿಯಾಟ್ರಿಕ್ಸ್ ಌಂಡ್ ಚೈಲ್ಡ್ ಹೆಲ್ತ್ ಅಧ್ಯಯನದ ಪ್ರಕಾರ ಚಿಕ್ಕಮಕ್ಕಳಿಗಿಂತ ಹಿರಿಯರಿಂದಲೇ ಕೊರೊನಾ ಹಬ್ಬುತ್ತೆ. ಚಿಕ್ಕ ಮಕ್ಕಳು ಅಷ್ಟೇನು ಹೆಚ್ಚಾಗಿ ಕೊರೊನಾ ವೈರಸ್ ಅನ್ನು ಹಂಚುವುದಿಲ್ಲ ಎಂದಿತ್ತು.
ಆದ್ರೆ ಈಗ ದಕ್ಷಿಣ ಕೋರಿಯಾದಲ್ಲಿ ನಡೆದ ಅಧ್ಯಯನ ಇದಕ್ಕೆ ಅಪವಾದ ಎನ್ನುವಂತಹ ಫಲಿತಾಂಶ ನೀಡಿದೆ. ದಕ್ಷಿಣ ಕೋರಿಯಾದಲ್ಲಿ ಕೊರೊನಾ ಸೋಂಕಿತರನ್ನು ವ್ಯವಸ್ಥಿತವಾಗಿ ಉಪಚರಿಸಲಾಗುತ್ತಿದೆ. ಪ್ರತಿಯೊಂದು ದಿನದ ಹಾಗೂ ಪ್ರತಿಯೊಂದು ಹಂತದ ಬೆಳವಣಿಗೆ ಮತ್ತು ಅಂಕಿ ಅಂಶಗಳನ್ನು ದಾಖಲಿಸಲಾಗಿದೆ.
ಈ ಅಂಕಿ ಅಂಶಗಳನ್ನು ಅಭ್ಯಸಿಸಿದ ನಂತರ ಚಿಕ್ಕಮಕ್ಕಳು ಅಸಿಂಪ್ಟಮ್ಯಾಟಿಕ್ ಆಗಿದ್ದರೂ, ಅವರ ಮೂಗಿನಲ್ಲಿ ಅಥವಾ ಅವರ ಸಿಂಬಳದಲ್ಲಿ ಸುಮಾರು ಮೂರು ವಾರಗಳ ಕೊರೊನಾ ವೈರಸ್ ಜೀವಿಸಿರುತ್ತೆ ಎಂದು ತಿಳಿದು ಬಂದಿದೆ.