ಕೂಸು ಹುಟ್ಟೋಕೆ ಮುಂಚೇನೇ ಕುಲಾವಿ ಹೊಲೆಯುವ ಕೆಲ್ಸ ನಡೆದಿದೆ. ಇನ್ನೂ ಕೊರೊನಾ ಸೋಂಕಿಗೆ ಔಷಧ ಕಂಡುಹಿಡಿಯುವುದು ಸ್ವಲ್ಪ ದೂರವೇ ಇದ್ದರೂ ಆಗಲೇ ಅದರ ಪ್ರಭಾವದ ಬಗ್ಗೆ ಚರ್ಚೆಗಳು ನಡೆದಿವೆ.
ಇದೀಗ, ಕೊರೊನಾ ಲಸಿಕೆ ಒಮ್ಮೆ ತೆಗೆದುಕೊಂಡರೇ ಸಾಕಾಗಲ್ಲ ಎಂದು ಫೈಜರ್ (Pfizer) ಫಾರ್ಮಾಸ್ಯೂಟಿಕಲ್ಸ್ ಕಂಪನಿ ಅಭಿಪ್ರಾಯಪಟ್ಟಿದೆ. ನಿರಂತರವಾಗಿ ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.
ದೇಹದಲ್ಲಿ ಕೊರೊನಾ ವಿರುದ್ಧದ ಪ್ರತಿಕಾಯಗಳು ಎಷ್ಟು ದಿನಗಳವರೆಗೆ ಇರುತ್ತವೆ ಎನ್ನುವುದು ಸ್ಪಷ್ಟವಾಗಿಲ್ಲ. ಹೀಗಾಗಿ, ಕೆಲ ವಿಜ್ಞಾನಿಗಳ ಪ್ರಕಾರ ಕೊವಿಡ್ ಲಸಿಕೆಯನ್ನ ವರ್ಷಕ್ಕೊಮ್ಮೆ ವರ್ಷಕ್ಕೊಮ್ಮೆ ತೆಗೆದುಕೊಳ್ಳುವ ಅಭ್ಯಾಸವನ್ನ ರೂಢಿಸಿಕೊಳ್ಳಬೇಕಾಗುತ್ತದೆ ಎಂದು Pfizer ಕಂಪನಿ ತಿಳಿಸಿದೆ. ಫೈಜರ್ ಕಂಪನಿ ಸಹ ಕೊವಿಡ್ ಲಸಿಕೆ ಕಂಡು ಹಿಡಿಯಲು ಯತ್ನಿಸುತ್ತಿದೆ.
Published On - 11:36 am, Sat, 1 August 20