IHU Variant: ಫ್ರಾನ್ಸ್​ನಲ್ಲಿ ಪತ್ತೆಯಾಯ್ತು ಕೊವಿಡ್​ 19ನ ಮತ್ತೊಂದು ತಳಿ; ಆಫ್ರಿಕನ್​ ದೇಶದ ಪ್ರಯಾಣ ಹಿನ್ನೆಲೆ ಇರುವ 12 ಮಂದಿಯಲ್ಲಿ ಐಎಚ್​ಯು ಪತ್ತೆ

| Updated By: Digi Tech Desk

Updated on: Jan 04, 2022 | 6:03 PM

IHU Covid Variant: ಈ ಸೋಂಕು ಬೇರೆ ಯಾವುದೇ ದೇಶದಲ್ಲೂ ಪತ್ತೆಯಾಗಿಲ್ಲ. ಹೊಸ ತಳಿ ಹೇಗೆ ವರ್ತಿಸುತ್ತದೆ. ಯಾವ ಪ್ರಮಾಣದ ಸೋಂಕು ಉಂಟು ಮಾಡುತ್ತದೆ ಮತ್ತು ಲಸಿಕೆಗಳು ಈ ಸೋಂಕಿನ ವಿರುದ್ಧ ಹೇಗೆ ಹೋರಾಡುತ್ತವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ

IHU Variant: ಫ್ರಾನ್ಸ್​ನಲ್ಲಿ ಪತ್ತೆಯಾಯ್ತು ಕೊವಿಡ್​ 19ನ ಮತ್ತೊಂದು ತಳಿ; ಆಫ್ರಿಕನ್​ ದೇಶದ ಪ್ರಯಾಣ ಹಿನ್ನೆಲೆ ಇರುವ 12 ಮಂದಿಯಲ್ಲಿ ಐಎಚ್​ಯು ಪತ್ತೆ
ಪ್ರಾತಿನಿಧಿಕ ಚಿತ್ರ
Follow us on

ಸದ್ಯ ಜಗತ್ತಿನ ಅನೇಕ ದೇಶಗಳಲ್ಲಿ ಒಮಿಕ್ರಾನ್ ಸೋಂಕು ಹರಡುತ್ತಿದೆ. ನವೆಂಬರ್​ನಲ್ಲಿ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಒಮಿಕ್ರಾನ್​ ಅತ್ಯಂತ ವೇಗವಾಗಿ ಹರಡುತ್ತಿದೆ. ಇದು ಮಾರಣಾಂತಿಕವಲ್ಲದೆ ಇದ್ದರೂ, ವೇಗವಾಗಿ ಹರಡುವ ವೈರಸ್​. ಆದರೆ ಈ ಮಧ್ಯೆ ಫ್ರಾನ್ಸ್​ನ ವಿಜ್ಞಾನಿಗಳು, ಕೊವಿಡ್​ 19ನ ಇನ್ನೊಂದು ರೂಪಾಂತರಿ ತಳಿಯನ್ನು ಪತ್ತೆ ಮಾಡಿದ್ದಾರೆ.  ಆಫ್ರಿಕನ್ ದೇಶ ಕೆಮೆರೂನ್​ಗೆ ಪ್ರಯಾಣ ಮಾಡಿದ್ದವರು ಮತ್ತು ಅವರಿಗೆ ಸಂಬಂಧ ಪಟ್ಟ ಸುಮಾರು 12 ಜನರಲ್ಲಿ ಈ ಹೊಸ ತಳಿ ಕಾಣಿಸಿಕೊಂಡಿದ್ದಾಗಿ ಐಎಚ್​ಯು ಮೆಡಿಟರೇನಿ ಇನ್​ಫೆಕ್ಷನ್​ ಇನ್​ಸ್ಟಿಟ್ಯೂಟ್​​ನ ಸಂಶೋಧಕರು ಹೇಳಿದ್ದಾರೆ. B.1.640.2 ರೂಪಾಂತರವಾದ ಇದಕ್ಕೆ ಐಎಚ್​ಯು (IHU) ಎಂದೇ ಹೆಸರಿಸಲಾಗಿದೆ. ಅಂದಹಾಗೆ ಈ ಎಲ್ಲ ಪ್ರಕರಣಗಳೂ ಕೂಡ ಫ್ರಾನ್ಸ್​ನ ಮಾರ್ಸಿಲ್ಲೆಸ್ ಬಳಿ ಪತ್ತೆಯಾಗಿದೆ.

ಸದ್ಯ ಈ ಸೋಂಕು ಬೇರೆ ಯಾವುದೇ ದೇಶದಲ್ಲೂ ಪತ್ತೆಯಾಗಿಲ್ಲ. ಹೊಸ ತಳಿ ಹೇಗೆ ವರ್ತಿಸುತ್ತದೆ. ಯಾವ ಪ್ರಮಾಣದ ಸೋಂಕು ಉಂಟು ಮಾಡುತ್ತದೆ ಮತ್ತು ಲಸಿಕೆಗಳು ಈ ಸೋಂಕಿನ ವಿರುದ್ಧ ಹೇಗೆ ಹೋರಾಡುತ್ತವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದೂ ಸಂಶೋಧಕರು ತಿಳಿಸಿದ್ದಾರೆ.  ಆದರೆ ಐಎಚ್​ಯು ಒಟ್ಟು 46 ರೂಪಾಂತರಿಗಳನ್ನು ಒಳಗೊಂಡಿದ್ದು, ಒಮಿಕ್ರಾನ್​ಗಿಂತಲೂ ಜಾಸ್ತಿ ಇದು ಎಂದೂ ಹೇಳಿದ್ದಾರೆ.  ಯುಎಸ್​ನ ಎಪಿಡೆಮಿಯಾಲಜಿಸ್ಟ್ ಮತ್ತು ಆರೋಗ್ಯ ಶಾಸ್ತ್ರಜ್ಞ ಎರಿಕ್​ ಫೀಗಲ್​ ಡಿಂಗ್​ ಅವರು, ಸರಣಿ ಟ್ವೀಟ್​ ಮೂಲಕ ಪ್ರಸ್ತುತ ರೂಪಾಂತರದ ಬಗ್ಗೆ ಹೇಳಿದ್ದಾರೆ.   ಕೊವಿಡ್​ 19 ಸೋಂಕಿನ ರೂಪಾಂತರಿಗಳ ಪ್ರಮಾಣ ದಿನದಿನವೂ ಹೆಚ್ಚುತ್ತಿದೆ. ಹಾಗಂದ ಮಾತ್ರಕ್ಕೆ ಯಾರೂ ಹೆದರಬೇಕಾಗಿಲ್ಲ.  ಇದೀಗ ಪತ್ತೆಯಾಗಿರುವ ತಳಿಯಲ್ಲಿ 46 ರೂಪಾಂತರಗಳು ಮತ್ತು 37 ವಿಲೋಪನಗಳು ಇರುವುದಾಗಿ ಫ್ರಾನ್ಸ್ ಸಂಶೋಧಕರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆದ ವಿನಃ ಏನೂ ಹೇಳಲಾಗದು ಎಂದು ಹೇಳಿದ್ದಾರೆ.

ಫ್ರಾನ್ಸ್ ಗಿಮಿಕ್​ ಮಾಡಿತಾ?
ಈ ಮಧ್ಯೆ ಇಲ್ಲೊಂದು ಅನುಮಾನವೂ ಕಾಡುತ್ತಿದೆ. ಫ್ರಾನ್ಸ್​ ಸಂಶೋಧಕರು ಹೇಳಿರುವ ಐಎಚ್​ಯು ವೈರಸ್​ ಜಗತ್ತಿನ ಇನ್ಯಾವುದೇ ದೇಶದಲ್ಲೂ ಕಂಡುಬಂದಿಲ್ಲ. ವಿಶ್ವಸಂಸ್ಥೆಯೂ ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೊಸ ತಳಿಯೆಂಬ ಲೇಬಲ್​ ಕೊಟ್ಟಿಲ್ಲ. ಹೀಗಾಗಿ ಫ್ರಾನ್ಸ್​ನಲ್ಲಿ ಕೊರೊನಾ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವವರನ್ನು ಲಸಿಕೆ ತೆಗೆದುಕೊಳ್ಳುವಂತೆ ಮಾಡಲು, ಹೀಗೊಂದು ಹೊಸ ತಳಿಯ ಗಿಮಿಕ್​ ಮಾಡಿರಬಹುದಾ ಎಂಬ ಅನುಮಾನವೂ ಕಾಡುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇನ್ನಷ್ಟು ಸಂಶೋಧನೆಯ ನಂತರವಷ್ಟೇ ಸ್ಪಷ್ಟತೆ ಸಿಗಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 2 ಸಾವಿರ ಗಡಿ ದಾಟಿದ ಕೊರೊನಾ ಕೇಸ್​; 24 ಗಂಟೆಯಲ್ಲಿ ಕೊವಿಡ್ ಪ್ರಕರಣಗಳು​ ದ್ವಿಗುಣ

Published On - 5:42 pm, Tue, 4 January 22