‘ಲಸಿಕೆ ತೆಗೆದುಕೊಂಡರೆ ಮಹಿಳೆಯರಿಗೆ ಗಡ್ಡ ಬರಬಹುದು.. ನೀವು ಮೊಸಳೆಯಾಗಬಹುದು’ -ಯಾರಪ್ಪಾ ಹೀಗಂದಿದ್ದು!

|

Updated on: Dec 19, 2020 | 4:23 PM

ಲಸಿಕೆಯ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸದ ಬ್ರೆಜಿಲ್​ ಅಧ್ಯಕ್ಷ, ತಮ್ಮ ರಾಷ್ಟ್ರದಲ್ಲಿ ಲಸಿಕೆ ಉಚಿತ ಆದರೆ ಕಡ್ಡಾಯವಲ್ಲ ಎಂದಿದ್ದಾರೆ..ಆದರೆ ಅಲ್ಲಿನ ಸುಪ್ರೀಂಕೋರ್ಟ್​, ಜನರಿಗೆ ಲಸಿಕೆಯನ್ನು ತೆಗೆದುಕೊಳ್ಳಲು ಬಲವಂತ ಮಾಡಬಾರದು..ಆದರೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದಿದೆ.

‘ಲಸಿಕೆ ತೆಗೆದುಕೊಂಡರೆ ಮಹಿಳೆಯರಿಗೆ ಗಡ್ಡ ಬರಬಹುದು.. ನೀವು ಮೊಸಳೆಯಾಗಬಹುದು’ -ಯಾರಪ್ಪಾ ಹೀಗಂದಿದ್ದು!
ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ
Follow us on

ಬ್ರೆಸಿಲಿಯಾ: ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನಾರೊ ಕೊರೊನಾ ಲಸಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊವಿಡ್​-19 ಒಂದು ಸಣ್ಣ ಜ್ವರ ಎಂದು ಈ ಹಿಂದೆಯೇ ಹೇಳಿಕೆ ನೀಡಿದ್ದ ಜೈರ್​ ಬೊಲ್ಸನಾರೋ, ನಾನಂತೂ ಯಾವ ಕಾರಣಕ್ಕೂ ಕೊರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ಇತ್ತೀಚೆಗಷ್ಟೇ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಲಸಿಕೆ ತಯಾರಕರ ವಿರುದ್ಧವೂ ವ್ಯಂಗ್ಯವಾಡಿದ್ದಾರೆ.

ಸದ್ಯ ಅಮೆರಿಕದಲ್ಲಿ ಬಳಕೆಯಾಗುತ್ತಿರುವ, ಬ್ರೆಜಿಲ್​ನಲ್ಲಿ ಪರೀಕ್ಷಾ ಹಂತದಲ್ಲಿರುವ ಫಿಜರ್​ ಲಸಿಕೆಯ ಬಗ್ಗೆ ಮಾತನಾಡಿದ ಅಧ್ಯಕ್ಷ, ಫಿಜರ್​ ಕಾಂಟ್ರಾಕ್ಟ್​ನಲ್ಲಿಯೇ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಆದರೂ ನಾವು ಜವಾಬ್ದಾರರು ಅಲ್ಲವೆಂದು.. ಅಂದರೆ ಲಸಿಕೆ ತೆಗೆದುಕೊಂಡ ಬಳಿಕ ನೀವು ಮೊಸಳೆಯಾಗಬಹುದು.. ಸೂಪರ್​ ಶಕ್ತಿಯುಳ್ಳ ಮನುಷ್ಯರಾಗಬಹುದು, ಮಹಿಳೆಯರಿಗೆ ಗಡ್ಡ ಬೆಳೆಯಬಹುದು.. ಹಾಗೇ ಪುರುಷರು  ಮಹಿಳೆಯರ ಧ್ವನಿಯಲ್ಲಿ ಮಾತನಾಡುವಂತೆ ಆಗಬಹುದು.. ಆದರೆ ಏನೇ ಆದರೂ ಲಸಿಕೆ ತಯಾರಕ ಕಂಪನಿ ಜವಾಬ್ದಾರಿ ಆಗುವುದಿಲ್ಲ ಎಂದು ಬೊಲ್ಸನಾರೋ ಹೇಳಿದ್ದಾರೆ.

ಲಸಿಕೆಯ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸದ ಬ್ರೆಜಿಲ್​ ಅಧ್ಯಕ್ಷ, ತಮ್ಮ ರಾಷ್ಟ್ರದಲ್ಲಿ ಲಸಿಕೆ ಉಚಿತ ಆದರೆ ಕಡ್ಡಾಯವಲ್ಲ ಎಂದಿದ್ದಾರೆ..ಆದರೆ ಅಲ್ಲಿನ ಸುಪ್ರೀಂಕೋರ್ಟ್​, ಜನರಿಗೆ ಲಸಿಕೆಯನ್ನು ತೆಗೆದುಕೊಳ್ಳಲು ಬಲವಂತ ಮಾಡಬಾರದು..ಆದರೆ ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಮಾಡಬೇಕು  ಎಂದಿದೆ. ಅಂದರೆ ಯಾರು ಲಸಿಕೆ ತೆಗೆದುಕೊಂಡಿಲ್ಲವೋ ಅವರಿಗೆ ಆಯ್ದ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನೀಡಬಾರದು ಎಂಬ ಸೂಚನೆಯನ್ನು ಕೋರ್ಟ್​ ನೀಡಿದೆ.

ಬ್ರೆಜಿಲ್​ನಲ್ಲಿ ಈವರೆಗೆ 71 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿದ್ದು, 185,000 ಮಂದಿ ಮೃತಪಟ್ಟಿದ್ದಾರೆ.

Published On - 4:17 pm, Sat, 19 December 20