ನವದೆಹಲಿ: ಕೊವಿಡ್-19 ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ವಿನಾಶವನ್ನುಂಟುಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಕಡಿಮೆಯಾಗಿದ್ದ ಕೊರೊನಾವೈರಸ್ ಪ್ರಕರಣಗಳು (Coronavirus Cases) ಮತ್ತೆ ಹೆಚ್ಚಾಗಲು ಪ್ರಾರಂಭಿಸಿವೆ. ಚೀನಾ ತನ್ನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಶಾಂಘೈ ನಗರವನ್ನು ಲಾಕ್‌ಡೌನ್ (Lockdown) ಮಾಡಿದೆ. ಕಳೆದ 24 ಗಂಟೆಗಳಲ್ಲಿ ಫ್ರಾನ್ಸ್ನಲ್ಲಿ ಕೊರೋನಾವೈರಸ್‌ನಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳ ಸಂಖ್ಯೆ 467ರಿಂದ 21,073ಕ್ಕೆ ಏರಿಕೆಯಾಗಿದೆ. ಇದು ಫೆ. 1ರಿಂದ ದೈನಂದಿನ ಅತ್ಯಧಿಕ ಏರಿಕೆಯಾಗಿದೆ. ಇಟಲಿಯಲ್ಲಿ ಸೋಮವಾರ 30,710 ಹೊಸ ಕೋವಿಡ್ -19 ಸಂಬಂಧಿತ ಪ್ರಕರಣಗಳು ದಾಖಲಾಗಿವೆ. ಇವೆಲ್ಲವೂ ಮತ್ತೆ ಆತಂಕಕ್ಕೆ ಕಾರಣವಾಗಿದ್ದು, ಕೊವಿಡ್ 4ನೇ ಅಲೆಯ ಮುನ್ನೆಚ್ಚರಿಕೆಯನ್ನು ನೀಡುತ್ತಿವೆ.
ಚೀನಾದ ಅತಿದೊಡ್ಡ ನಗರವಾದ ಶಾಂಘೈ ಕೊವಿಡ್ -19 ಲಾಕ್‌ಡೌನ್‌ನ 2ನೇ ದಿನಕ್ಕೆ ಕಾಲಿಟ್ಟಿದೆ. ಶಾಂಘೈ ಮಂಗಳವಾರ ಎರಡು ಹಂತದ ಕೊವಿಡ್ -19 ಲಾಕ್‌ಡೌನ್‌ನ ಮೊದಲ ಹಂತವನ್ನು ಮತ್ತೆ ಬಿಗಿಗೊಳಿಸಿದೆ. ದೈನಂದಿನ ಕೊವಿಡ್ ಪ್ರಕರಣಗಳ ಸಂಖ್ಯೆ 4,400ಕ್ಕಿಂತ ಹೆಚ್ಚಾದ್ದರಿಂದ ಕೆಲವು ನಿವಾಸಿಗಳನ್ನು ಪರೀಕ್ಷಿಸದ ಹೊರತು ಮನೆಯೊಳಗೆ ಇರುವಂತೆ ಕೇಳಿದೆ. 26 ಮಿಲಿಯನ್ ಜನರಿಗೆ ನೆಲೆಯಾಗಿರುವ ಚೀನಾದ ಆರ್ಥಿಕ ಕೇಂದ್ರವಾದ ಶಾಂಘೈ ಲಾಕ್‌ಡೌನ್‌ನ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಮತ್ತು ಸ್ಟೇಟ್ ಡಿಪಾರ್ಟ್ಮೆಂಟ್ ಸೋಮವಾರ ಭಾರತ ಮತ್ತು ಇತರ ಕೆಲವು ದೇಶಗಳಿಗೆ ಸರ್ಕಾರಿ ಕೋವಿಡ್ -19 ಪ್ರಯಾಣ ರೇಟಿಂಗ್‌ಗಳನ್ನು ಸರಾಗಗೊಳಿಸಿದೆ. ಸೋಮವಾರ ಫ್ರಾನ್ಸ್ನಲ್ಲಿ ಕಳೆದ 24 ಗಂಟೆಗಳಲ್ಲಿ ಕೊವಿಡ್-19ನಿಂದ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 467ರಿಂದ 21,073ಕ್ಕೆ ತಲುಪಿದೆ. ಫೆಬ್ರವರಿ 1ರಿಂದ ಇದು ಗರಿಷ್ಠ ದೈನಂದಿನ ಏರಿಕೆಯಾಗಿದೆ. ವಾರದಿಂದ ವಾರದ ಆಧಾರದ ಮೇಲೆ, ಫ್ರೆಂಚ್ ಆರೋಗ್ಯ ಅಧಿಕಾರಿಗಳು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 1.8%ರಷ್ಟು ಹೆಚ್ಚಾಗಿರುವುದನ್ನು ಕಂಡಿದ್ದಾರೆ. ವಿಶ್ವಾದ್ಯಂತ ಕೊರೊನಾ ಸೋಂಕು ಮಾರ್ಚ್ ಆರಂಭದಿಂದ ಮತ್ತೆ ಹೆಚ್ಚುತ್ತಿವ.
ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರಿಗೆ ಕೊವಿಡ್ -19 ಪಾಸಿಟಿವ್ ದೃಢಪಟ್ಟಿದೆ. ಭಾರತಕ್ಕೆ ಭೇಟಿ ನೀಡುವ ಕೆಲವು ದಿನಗಳ ಮೊದಲು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಅವರ ಭಾರತ ಪ್ರವಾಸ ಅನುಮಾನ ಎನ್ನಲಾಗುತ್ತಿದೆ. ಸದ್ಯಕ್ಕೆ ಬೆನೆಟ್ ಆರೋಗ್ಯವಾಗಿದ್ದಾರೆ ಮತ್ತು ಮನೆಯಲ್ಲಿ ಕ್ವಾರಂಟೈನ್ ಆಗಿ ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ ಎಂದು ಅವರ ಕಚೇರಿ ತಿಳಿಸಿದೆ. ಬೆನೆಟ್ ಅವರು ಏಪ್ರಿಲ್ 2ರಂದು ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿಯನ್ನು ನೀಡಲಿದ್ದಾರೆ ಎಂದು ಘೋಷಿಸಲಾಗಿದೆ.
ಮಾರ್ಚ್‌ನಲ್ಲಿ ಚೀನಾದಲ್ಲಿ 56,000ಕ್ಕೂ ಹೆಚ್ಚು ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ಈ ತಿಂಗಳು ಚೀನಾ ಇದುವರೆಗೆ 56,000ಕ್ಕೂ ಹೆಚ್ಚು ಕೊರೊನಾವೈರಸ್ ಸೋಂಕುಗಳನ್ನು ಹೊಂದಿದೆ. ಈಶಾನ್ಯ ಪ್ರಾಂತ್ಯದ ಜಿಲಿನ್‌ನಲ್ಲಿ ಏಕಾಏಕಿ ಕೊವಿಡ್ ಕೇಸುಗಳು ಹೆಚ್ಚುತ್ತಿದೆ. ಇದರಿಂದ ಭಾರತದಲ್ಲೂ ಕೊರೊನಾ ಆತಂಕ ಮತ್ತೊಮ್ಮೆ ಹೆಚ್ಚಾಗಿದೆ.
ಇದನ್ನೂ ಓದಿ: Covid-19 4th Wave: ಚೀನಾದಲ್ಲಿ ಹೆಚ್ಚಿದ ಕೊವಿಡ್ ಅಬ್ಬರ; 26 ಮಿಲಿಯನ್ ಜನಸಂಖ್ಯೆಯಿರುವ ಶಾಂಘೈ ಲಾಕ್‌ಡೌನ್
Covid 4th Wave: ಚೀನಾ, ಯುರೋಪ್ನಲ್ಲಿ ಹೆಚ್ಚಿದ ಕೊರೊನಾವೈರಸ್ ಕೇಸ್; ಭಾರತದಲ್ಲಿ ಕೊವಿಡ್ 4ನೇ ಅಲೆಯ ಭೀತಿ