ಮಿಚಿಗನ್: ಕೊರೊನಾ ಹಾವಳಿಯಿಂದ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಿಸಿ ಹೊಗಿದೆ. ಕೊರೊನಾದಿಂದ ಬೇಸತ್ತು ಹೋಗಿರುವ ಅಮೆರಿಕನ್ನರು ಈಗ ಅದರೊಂದಿಗೆ ಜೀವಿಸುವುದನ್ನು ಕಲಿಯಲಾರಂಭಿಸಿದ್ದಾರೆ.
ಅಮೆರಿಕದ ವಿವಿಧೆಡೆಯಿಂದ ಹಲವಾರು ಜನರು ಈ ‘ಕೊರೊನಾ ಗೋ ಅವೇ’ ಸಂದೇಶದ ತೋಟವನ್ನು ನೋಡಲು ಬರುತ್ತಿದ್ದಾರೆ. ಆದ್ರೆ ಹೀಗೆ ತೋಟ ನೋಡಲು ಬರುವವರು ಮಾತ್ರ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಕೊರೊನಾದಿಂದ ಬೇಸತ್ತು ಹೋದ ರೈತ ಗೆರಾಲ್ಡ್ ಜಾನಸನ್ ಕೋವಿಡ್ ಸಂಕಷ್ಟ ಸಮಯದಲ್ಲಿ ಜನರಿಗೆ ರಿಲ್ಯಾಕ್ಸ್ ಆಗಲು ಏನಾದರು ಮಾಡಬೇಕು ಎಂದು ಯೋಚಿಸಿದಾಗ ಈ ಐಡಿಯಾ ಹೊಳೆದಿದೆ. ಹೀಗಾಗಿ ಕಂಗೆಟ್ಟ ಜನರ ಮನರಂಜನೆಗಾಗಿ ಅಂತಾ ತನ್ನ ತೋಟದಲ್ಲಿ ಈ ಸಂದೇಶದ ಕಾರ್ನ್ ಮೇಜ್ ರಚಿಸಿದ್ದಾನೆ.