Covid Guidelines: ಕೊವಿಡ್ ಹೆಚ್ಚಳದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

| Updated By: ಸುಷ್ಮಾ ಚಕ್ರೆ

Updated on: Jan 18, 2023 | 8:47 AM

ಕೊವಿಡ್ ವೈರಸ್ ಹರಡುವುದನ್ನು ತಡೆಯಲು ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಮುಂದುವರಿಸಲು ಮತ್ತು ಲಸಿಕೆಯ ಬೂಸ್ಟರ್ ಡೋಸ್‌ಗಳನ್ನು ತೆಗೆದುಕೊಳ್ಳುವಂತೆ WHO ಸೂಚಿಸಿದೆ.

Covid Guidelines: ಕೊವಿಡ್ ಹೆಚ್ಚಳದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ
ಕೊವಿಡ್-19
Follow us on

ನವದೆಹಲಿ: ಕೊವಿಡ್ ಭೀತಿ (Covid-19 Scare) ಮತ್ತು ಹೊಸ ರೂಪಾಂತರಗಳ ಹರಡುವಿಕೆಯ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಕೊವಿಡ್ ಸೋಂಕಿತ ಜನರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. COVID-19 ಪಾಸಿಟಿವ್ ಹೊಂದಿದ್ದು, ಯಾವುದೇ ಕೊವಿಡ್ ರೋಗಲಕ್ಷಣಗಳನ್ನು ಹೊಂದಿರದವರಿಗೆ 5 ದಿನಗಳ ಕ್ವಾರಂಟೈನ್ ಸೂಚಿಸಲಾಗಿದೆ. ಆದರೆ, ರೋಗಲಕ್ಷಣಗಳನ್ನು ಹೊಂದಿದವರಿಗೆ 10 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ. ಕೊವಿಡ್-19 ಚಿಕಿತ್ಸೆಗಳು ಮತ್ತು ಕ್ಲಿನಿಕಲ್ ನಿರ್ವಹಣೆಯಲ್ಲಿ ಮಾಸ್ಕ್ ಧರಿಸುವುದರ ಕುರಿತು ಮಾರ್ಗಸೂಚಿಗಳನ್ನು (Covid Guidelines) ನವೀಕರಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊವಿಡ್ ವೈರಸ್ ಹರಡುವುದನ್ನು ತಡೆಯಲು ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಮುಂದುವರಿಸಲು ಮತ್ತು ಲಸಿಕೆಯ ಬೂಸ್ಟರ್ ಡೋಸ್‌ಗಳನ್ನು ತೆಗೆದುಕೊಳ್ಳುವಂತೆ WHO ಸೂಚಿಸಿದೆ. ಯಾವಾಗ ಮಾಸ್ಕ್ ಧರಿಸಬೇಕೆಂಬುದರ ಬಗ್ಗೆಯೂ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಕೊವಿಡ್ ಪಿಡುಗು ಆರಂಭವಾದ ನಂತರ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಶೂನ್ಯ ಕೊವಿಡ್

– ಯಾರಾದರೂ ಕೊವಿಡ್ ಸೋಂಕು ಹೊಂದಿರುವಾಗ.
– ಯಾರಾದರೂ ತೀವ್ರವಾದ COVID-19 ಅಪಾಯದಲ್ಲಿದ್ದಾಗ.
– ಕಿಕ್ಕಿರಿದ ಜಾಗದಲ್ಲಿ ಓಡಾಡುವಾಗ ಅಥವಾ ಸರಿಯಾಗಿ ಗಾಳಿ ಇರದ ಜಾಗದಲ್ಲಿ ನಿಮ್ಮ ಜೊತೆ ಬೇರೆ ಜನರಿದ್ದಾಗ ಮಾಸ್ಕ್ ಧರಿಸುವುದು ಕಡ್ಡಾಯ.

ಕೊವಿಡ್ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ, ಹೊಸ ಮಾರ್ಗಸೂಚಿಗಳು ರೋಗಲಕ್ಷಣದ ಪ್ರಾರಂಭದ ದಿನಾಂಕದಿಂದ 10 ದಿನಗಳ ಕ್ವಾರಂಟೈನ್ ಅನ್ನು ಸೂಚಿಸುತ್ತವೆ. ರೋಗಲಕ್ಷಣಗಳು ಕಾಣಿಸಿಕೊಂಡ 10 ದಿನಗಳ ನಂತರ ರೋಗಿಗಳನ್ನು ಡಿಸ್ಚಾರ್ಜ್ ಮಾಡಬೇಕೆಂದು ಹಿಂದೆ WHO ಆದೇಶ ನೀಡಿತ್ತು. ಜೊತೆಗೆ ಅವರ ರೋಗಲಕ್ಷಣಗಳು ಕಡಿಮೆಯಾದ ನಂತರ ಕನಿಷ್ಠ ಮೂರು ಹೆಚ್ಚುವರಿ ದಿನಗಳು ಕ್ವಾರಂಟೈನ್​ನಲ್ಲಿರಬೇಕು ಎಂದು ಸೂಚಿಸಲಾಗಿತ್ತು.

ಇದನ್ನೂ ಓದಿ: Kerala Covid Cases: ಕೊವಿಡ್ ಭೀತಿ ಹೆಚ್ಚಳ; ಕೇರಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ

COVID-19 ಪಾಸಿಟಿವ್ ಹೊಂದಿದ್ದರೂ ಯಾವುದೇ ಚಿಹ್ನೆಗಳು ಅಥವಾ ರೋಗಲಕ್ಷಣಗಳನ್ನು ಹೊಂದಿರದವರಿಗೆ ಹಿಂದಿನ 10 ದಿನಗಳಿಗೆ ಹೋಲಿಸಿದರೆ WHO ಈಗ 5 ದಿನಗಳ ಕ್ವಾರಂಟೈನ್​ನಗೆ ಆದೇಶಿಸಿದೆ.

ಗಂಭೀರವಲ್ಲದ COVID-19 ಹೊಂದಿರುವ ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ಕೊವಿಡ್​ಗೆ ಔಷಧಿಯನ್ನು ತೆಗೆದುಕೊಳ್ಳಬೇಕೆ ಎಂದು ನಿರ್ಧರಿಸಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ