Kerala Covid Cases: ಕೊವಿಡ್ ಭೀತಿ ಹೆಚ್ಚಳ; ಕೇರಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ
ಕೋವಿಡ್ -19 ಪ್ರಕರಣಗಳ ಉಲ್ಬಣದ ಬಗ್ಗೆ ಆತಂಕದ ನಡುವೆ ಕೇರಳ ಹೊರಡಿಸಲಾದ ಆದೇಶವು ಜನವರಿ 12ರಿಂದಲೇ ಜಾರಿಗೆ ಬರುವಂತೆ 30 ದಿನಗಳ ಅವಧಿಗೆ ಕೇರಳದ ಎಲ್ಲಾ ಭಾಗಗಳಲ್ಲಿ ಜಾರಿಯಲ್ಲಿರುತ್ತದೆ.
ಕೊಚ್ಚಿ: ಭಾರತದಲ್ಲಿ ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳ (Covid-19 Cases) ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಎಲ್ಲಾ ಜನರು ಎಲ್ಲಾ ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳು ಮತ್ತು ಸಭೆ-ಸಮಾರಂಭಗಳಲ್ಲಿ ಕಡ್ಡಾಯವಾಗಿ ಮಾಸ್ಕ್ (Face Mask) ಧರಿಸಬೇಕು ಎಂದು ಕೇರಳ ಸರ್ಕಾರ (Kerala Government) ಸೋಮವಾರ ಘೋಷಿಸಿದೆ.
ಕೇರಳದಲ್ಲಿ ಕೊವಿಡ್ -19 ಹರಡುವುದನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರವು ನಿರ್ದೇಶಿಸಿದೆ. ಈ ಕೊವಿಡ್ ವೈರಸ್ ದಾಳಿಯಿಂದ ಜನ ಸುರಕ್ಷತೆಯನ್ನು ಹೊಂದಲು ಕೈ ತೊಳೆಯುವ ಮತ್ತು ಸ್ಯಾನಿಟೈಸರ್‌ಗಳನ್ನು ಬಳಸುವ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲು ಅಂಗಡಿಗಳು, ಚಿತ್ರಮಂದಿರಗಳು ಮತ್ತು ವಿವಿಧ ಕಾರ್ಯಕ್ರಮಗಳ ಸಂಘಟಕರಿಗೆ ಸರ್ಕಾರ ಸೂಚಿಸಿದೆ.
ಇದನ್ನೂ ಓದಿ: Covid Alert: ಚೀನಾದಿಂದ ಬರುವ ಪ್ರಯಾಣಿಕರಿಗೆ ಅಮೆರಿಕದಲ್ಲಿ ಕೊವಿಡ್ ಪರೀಕ್ಷೆ ಕಡ್ಡಾಯ
ದೇಶಾದ್ಯಂತ ಕೋವಿಡ್ -19 ಪ್ರಕರಣಗಳ ಸಂಭವನೀಯ ಉಲ್ಬಣದ ಬಗ್ಗೆ ಆತಂಕದ ನಡುವೆ ಹೊರಡಿಸಲಾದ ಆದೇಶವು ಜನವರಿ 12ರಿಂದಲೇ ಜಾರಿಗೆ ಬರುವಂತೆ 30 ದಿನಗಳ ಅವಧಿಗೆ ಕೇರಳದ ಎಲ್ಲಾ ಭಾಗಗಳಲ್ಲಿ ಜಾರಿಯಲ್ಲಿರುತ್ತದೆ.
2022ರ ಡಿಸೆಂಬರ್ ತಿಂಗಳಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊಸ ಕೋವಿಡ್ ಅಲೆಯ ಭಯದ ನಡುವೆ ರಾಜ್ಯದ ಕೊವಿಡ್ ಸನ್ನದ್ಧತೆಯ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಭಾರತದಲ್ಲಿ ಒಟ್ಟು 4.46 ಕೋಟಿ ಕೊವಿಡ್ ಪ್ರಕರಣಗಳ ಸಂಖ್ಯೆ ದಾಖಲಾಗಿದೆ. ಸಾವಿನ ಸಂಖ್ಯೆ 5,30,726 ಆಗಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರವು ಶೇ. 98.80ಕ್ಕೆ ಏರಿದೆ ಎಂದು ಸಚಿವಾಲಯ ತಿಳಿಸಿದೆ.