Cyclone Mocha: ಮ್ಯಾನ್ಮಾರ್​ನಲ್ಲಿ ಮೋಕಾ ಚಂಡಮಾರುತದ ಅಬ್ಬರ, ಇದುವರೆಗೆ 81 ಮಂದಿ ಸಾವು

|

Updated on: May 17, 2023 | 7:46 AM

ಮ್ಯಾನ್ಮಾರ್​ನಲ್ಲಿ ಮೋಕಾ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಇಲ್ಲಿಯವರೆಗೆ 81 ಮಂದಿಯನ್ನು ಬಲಿಪಡೆದಿದೆ. ರಾಖೈನ್ ರಾಜ್ಯದ ರಾಜಧಾನಿ ಸಿಟ್ವೆಯ ಭಾಗಗಳು ಸಹ ಪ್ರವಾಹಕ್ಕೆ ಒಳಗಾಗಿವೆ ಮತ್ತು ಗಂಟೆಗೆ 130 ಮೈಲುಗಳಷ್ಟು ವೇಗವಾಗಿ ಗಾಳಿ ಬೀಸಿತ್ತು.

Cyclone Mocha: ಮ್ಯಾನ್ಮಾರ್​ನಲ್ಲಿ ಮೋಕಾ ಚಂಡಮಾರುತದ ಅಬ್ಬರ, ಇದುವರೆಗೆ 81 ಮಂದಿ ಸಾವು
ಚಂಡಮಾರುತ
Image Credit source: The Hindu
Follow us on

ಮ್ಯಾನ್ಮಾರ್​ನಲ್ಲಿ ಮೋಕಾ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಇಲ್ಲಿಯವರೆಗೆ 81 ಮಂದಿಯನ್ನು ಬಲಿಪಡೆದಿದೆ. ರಾಖೈನ್ ರಾಜ್ಯದ ರಾಜಧಾನಿ ಸಿಟ್ವೆಯ ಭಾಗಗಳು ಸಹ ಪ್ರವಾಹಕ್ಕೆ ಒಳಗಾಗಿವೆ ಮತ್ತು ಗಂಟೆಗೆ 130 ಮೈಲುಗಳಷ್ಟು ವೇಗವಾಗಿ ಗಾಳಿ ಬೀಸಿತ್ತು. ಬುಮಾ ಮತ್ತು ಸಮೀಪದ ಖೌಂಗ್ ಡೋಕ್ ಗ್ರಾಮಗಳಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ರಾಖೈನ್‌ನ ರಾಜಧಾನಿ ಸಿಟ್ವೆಯ ಉತ್ತರದಲ್ಲಿರುವ ರಾಥೆಡಾಂಗ್ ಟೌನ್‌ಶಿಪ್‌ನ ಹಳ್ಳಿಯಲ್ಲಿ ಧಾರ್ಮಿಕ ಕಟ್ಟಡವೊಂದು ಕುಸಿದು 13 ಜನರು ಸಾವನ್ನಪ್ಪಿದ್ದಾರೆ ಮತ್ತು ಪಕ್ಕದ ಹಳ್ಳಿಯಲ್ಲಿ ಕಟ್ಟಡವೊಂದು ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಸಿಟ್ವೆ ಸಮೀಪದ ಬು ಮಾ ಗ್ರಾಮದ ಮುಖ್ಯಸ್ಥ ಕಾರ್ಲೋ ಹೇಳಿದ್ದಾರೆ. ಇದೀಗ 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಮೋಕಾ ಎಂಬ ಹೆಸರು ಹೇಗೆ ಬಂತು?
ಮಧ್ಯಪ್ರಾಚ್ಯ ಏಷ್ಯಾದ ದೇಶವಾದ ಯೆಮೆನ್ ಈ ಹೆಸರನ್ನು ನೀಡಿದೆ. ಮೋಕಾ ಯೆಮೆನ್‌ನಲ್ಲಿರುವ ಒಂದು ನಗರ, ನಗರವು ಕಾಫಿ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ಮೋಕಾ ಕಾಫಿ ಎಂಬ ಹೆಸರನ್ನೂ ಇಡಲಾಗಿದೆ.

1982ರ ನಂತರ ರೂಪಗೊಂಡ ಅತಿ ದೊಡ್ಡ ಚಂಡಮಾರುತ ಇದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಬಾಂಗ್ಲಾದೇಶದಲ್ಲಿ ಆಸ್ತಿ-ಪಾಸ್ತಿಗೆ ಹಾನಿಯಾಗಿದ್ದರೂ ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.

ಮತ್ತಷ್ಟು ಓದಿ: Karnataka Rains: ರಾಜ್ಯದ ದಕ್ಷಿಣ ಒಳನಾಡಿನ 5 ಜಿಲ್ಲೆಗಳಲ್ಲಿ ಎರಡು ದಿನ ಮಳೆ

ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಮೋಕಾ ಚಂಡಮಾರುತ ಮ್ಯಾನ್ಮಾರ್ ಪಶ್ಚಿಮ ಭಾಗದ ಕರಾವಳಿ ಹಾಗೂ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದು, ಭಾರಿ ಅವಾಂತರವನ್ನೇ ಸೃಷ್ಟಿ ಮಾಡಿದೆ.

ಮತ್ತೊಂದೆಡೆ ಬಾಂಗ್ಲಾ-ಮ್ಯಾನ್ಮಾರ್​ಗೆ ಅಪ್ಪಳಿಸಿರುವ ಮೋಚಾ, ಭಾರತದ ಮಿಜೋರಾಂನಲ್ಲಿಯೂ ತೀವ್ರತರದ ಪರಿಣಾಮ ಉಂಟು ಮಾಡಿದೆ. 236ಕ್ಕೂ ಅಧಿಕ ಮನೆಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ. ನಿರಾಶ್ರಿತ ಶಿಬಿರಗಳಲ್ಲಿ ನೀರು ಆವರಿಸಿದ್ದು, ಜನರ ಪರಿಸ್ಥಿತಿ ಅತಂತ್ರವಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ