‘ಎಲ್ಲಾ ಡಾಟ್ ಹೆಡ್​ಗಳನ್ನು ದೇಶಬಿಟ್ಟು ಕಳುಹಿಸಿ’: ಅಮೆರಿಕದಲ್ಲಿ ದೀಪಾವಳಿ ಆಚರಿಸುತ್ತಿದ್ದ ಹಿಂದೂಗಳ ವಿರುದ್ಧ ಘೋಷಣೆ

ಅಮೆರಿಕದ ಸಿಯಾಟಲ್ ನಗರದಲ್ಲಿ ದೀಪಾವಳಿ ಆಚರಿಸುತ್ತಿದ್ದ ಹಿಂದೂಗಳ ಮೇಲೆ ಸ್ಥಳೀಯ ಬಲಪಂಥೀಯ ಕಾರ್ಯಕರ್ತರು ಜನಾಂಗೀಯ ನಿಂದನೆ ಮಾಡಿರುವ ಘಟನೆ ನಡೆದಿದೆ. ಹಿಂದೂಗಳನ್ನು ಡಾಟ್ ಹೆಡ್​ಗಳೆಂದು ಬಣ್ಣಿಸಿ, ಅವರನ್ನು ಅಮೆರಿಕ ಬಿಟ್ಟು ಹೊರಕಳುಹಿಸಬೇಕೆನ್ನುವ ಅರ್ಥದಲ್ಲಿ ಘೋಷಣಾಪತ್ರ ಬರೆದು ಪ್ರದರ್ಶನ ಮಾಡಿದ್ದಾರೆ. ಈ ಘಟನೆಯನ್ನು ಅಮೆರಿಕದ ಹಿಂದೂ ಸಮುದಾಯದವರು ಖಂಡಿಸಿದ್ದಾರೆ.

‘ಎಲ್ಲಾ ಡಾಟ್ ಹೆಡ್​ಗಳನ್ನು ದೇಶಬಿಟ್ಟು ಕಳುಹಿಸಿ’: ಅಮೆರಿಕದಲ್ಲಿ ದೀಪಾವಳಿ ಆಚರಿಸುತ್ತಿದ್ದ ಹಿಂದೂಗಳ ವಿರುದ್ಧ ಘೋಷಣೆ
ಅಮೆರಿಕ
Image Credit source: Getty Images

Updated on: Nov 08, 2026 | 6:05 PM

ವಾಷಿಂಗ್ಟನ್, ನವೆಂಬರ್ 8: ಅಮೆರಿಕದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಜನಾಂಗೀಯ ನಿಂದನೆ ಘಟನೆಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ. ಅಮೆರಿಕದ ಸಿಯಾಟಲ್​ನಲ್ಲಿ ಹಿಂದೂ ಸಮುದಾಯದ ಕೆಲ ಜನರು ಶಾಂತಿಯುತವಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾಗ ಸ್ಥಳೀಯ ಕೆಲ ವ್ಯಕ್ತಿಗಳು ಜನಾಂಗೀಯ ನಿಂದನೆ ಮಾಡಿದ್ದಾರೆ. ಕಟ್ಟರ್ ಬಲಪಂಥೀಯ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ.

ಈ ಕಾರ್ಯಕರ್ತರು ಹಿಂದೂವಿರೋಧಿ ಘೋಷಣೆಗಳಿರುವ ಪ್ಲಕಾರ್ಡ್​ಗಳನ್ನು ಇಟ್ಟು ಪ್ರತಿಭಟಿಸುತ್ತಿದ್ದರು. ‘ಎಲ್ಲಾ ಡಾಟ್ ಹೆಡ್​ಗಳನ್ನು ದೇಶದಿಂದ ಹೊರಗೆ ಕಳುಹಿಸಿ’ (Deport All Dot Heads), ‘ಕ್ರೈಸ್ತರ ಜಾಗದಲ್ಲಿ ಹಿಂದೂಗಳನ್ನು ತುಂಬಿಸುವುದನ್ನು ನಿಲ್ಲಿಸಿ’ (Stop Hindu Replacement of Christians) ಇತ್ಯಾದಿ ಘೋಷಣಾ ಪತ್ರಗಳನ್ನು ಕಾಣಬಹುದಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Loading...

ಇದನ್ನೂ ಓದಿ: ಮಹಾಭಾರತದಿಂದ ಅರ್ಥಶಾಸ್ತ್ರದವರೆಗೆ: ಯುನೆಸ್ಕೋ ಪಟ್ಟಿಗೆ ಸೇರಿದ ಭಾರತದ ಮೂರು ಪ್ರಾಚೀನ ಗ್ರಂಥಗಳು

ಇಲ್ಲಿ ಡಾಟ್ ಹೆಡ್​ಗಳೆಂದರೆ ಹಣೆಗೆ ಬಿಂದಿ ಅಥವಾ ಕುಂಕುಮ ಇಡುವ ವ್ಯಕ್ತಿಗಳು. ಅಂದರೆ, ಹಿಂದೂಗಳನ್ನು ದೇಶದಿಂದ ಡೀಪೋರ್ಟ್ ಮಾಡಿ ಎಂದು ಆ ಅತಿರೇಕವಾದಿಗಳು ಆಗ್ರಹಿಸುತ್ತಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಳೆದ 10-15 ವರ್ಷಗಳಿಂದ ಗ್ರೇಟ್ ರೀಪ್ಲೇಸ್ಮೆಂಟ್ ಎನ್ನುವ ಪಿತೂರಿ ಥಿಯರಿ ಚಾಲನೆಯಲ್ಲಿದೆ. ಕ್ರೈಸ್ತರ ಜಾಗದಲ್ಲಿ ಅನ್ಯ ಧರ್ಮೀಯರು ಬಂದು ಆಕ್ರಮಿಸುತ್ತಿದ್ದಾರೆ ಎನ್ನುವ ಥಿಯರಿ. ಹೀಗಾಗಿ, ‘Stop Hindu Replacement of Christians’ ಎನ್ನುವ ಘೋಷಣೆ ಸಿಯಾಟಲ್​ನಲ್ಲಿ ಮಾರ್ದನಿಸಿದೆ.

ಕಟ್ಟರೆ ಬಲಪಂಥೀಯ ಕಾರ್ಯಕರ್ತರು ಈ ಘೋಷಣೆಗಳನ್ನು ಮಾಡಿದ್ದಕ್ಕೆ ಹಿಂದೂ ಸಮುದಾಯದವರು ತೀವ್ರವಾಗಿ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಕಳುಹಿಸಿದ್ದಾರೆ.

ಇದನ್ನೂ ಓದಿ: ಇಥಿಯೋಪಿಯಾದಿಂದ ಗ್ಯಾಂಗ್‌ಸ್ಟರ್ ಅಫ್ರಿದಿ ಭಾರತಕ್ಕೆ ವಾಪಸ್: ಅಮೆರಿಕದಲ್ಲಿ ಹ್ಯಾರಿ ಬಾಕ್ಸರ್ ಬಂಧನ

ಈ ಕಾರ್ಯಕರ್ತರಲ್ಲಿ ಜೇಕ್ ಲಾಂಗ್ ಮತ್ತು ಥಾಮಸ್ ಅಲನ್ ಎಂಬುವವರು ಇದ್ದದ್ದು ಗೊತ್ತಾಗಿದೆ. ಜೇಕ್ ಲ್ಯಾಂಗ್ ಎಂಬಾತ ಅಮೆರಿಕದ ಸೆನೇಟ್ ಚುನಾವಣೆಯಲ್ಲಿ ಫ್ಲೋರಿಡಾ ಸ್ಥಾನಕ್ಕೆ ರಿಪಬ್ಲಿಕನ್ ಅಭ್ಯರ್ಥಿಯಾಗಲು ಯತ್ನಿಸಿದ್ದರು. 2021ರ ಕುಖ್ಯಾತ ಕ್ಯಾಪಿಟಲ್ ದಾಳಿ ಘಟನೆಯಲ್ಲಿ ಇದ್ದ ಸಾವಿರಾರು ದಾಂಧಲೆಕೋರರಲ್ಲಿ ಜೇಕ್ ಲ್ಯಾಂಗ್ ಕೂಡ ಒಬ್ಬ ಎನ್ನಲಾಗಿದೆ. ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆ ದಾಂದಲೆಕೋರರನ್ನು ಮಾಫಿ ಮಾಡಿದ್ದರು.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Sun, 8 November 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us