ವಿಶ್ವದ ಚೊಚ್ಚಲ ಬಸ್​​-ಟ್ರೈನ್ ಸಂಚಾರಕ್ಕೆ ಬಿಟ್ಟ ಜಪಾನ್: ಕಾರಣ ಕೇಳಿದರೆ ಹೆಮ್ಮೆ ಎನಿಸುತ್ತದೆ!

| Updated By: ಸಾಧು ಶ್ರೀನಾಥ್​

Updated on: Dec 25, 2021 | 12:27 PM

ಹಿರಿಯರ ಬಗ್ಗೆ ಅಪಾರ ಕಾಳಜಿ ವಹಿಸುವ ಜಪಾನ್ ಸರ್ಕಾರ, ತನ್ನ ಹಿರಿಯ ಜೀವಗಳಿಗೆ ಕೊಡುವ ಗೌರವ ಇದಾಗಿದೆ. ದೂರದ ಊರುಗಳಲ್ಲಿ ಹಿರಿಯರಿಗೆ ಊರುಗೋಲು ಆಗಲು ಈ ದ್ವಿ ಸಂಚಾರಿ ವಾಹನವನ್ನು ಬಿಡುಗಡೆ ಮಾಡಿದೆ. ಊರುಗಳಿಗೂ ಬಸ್​ ರೂಪದಲ್ಲಿ ಈ ರೈಲು ಸಂಚರಿಸುತ್ತದೆ!

ವಿಶ್ವದ ಚೊಚ್ಚಲ ಬಸ್​​-ಟ್ರೈನ್ ಸಂಚಾರಕ್ಕೆ ಬಿಟ್ಟ ಜಪಾನ್: ಕಾರಣ ಕೇಳಿದರೆ ಹೆಮ್ಮೆ ಎನಿಸುತ್ತದೆ!
ವಿಶ್ವದ ಚೊಚ್ಚಲ ಬಸ್​​-ಟ್ರೈನ್ ಸಂಚಾರಕ್ಕೆ ಬಿಟ್ಟ ಜಪಾನ್: ಕಾರಣ ಕೇಳಿದರೆ ಹೆಮ್ಮೆ ಎನಿಸುತ್ತದೆ!
Follow us on

ಅನಿವಾರ್ಯವಾಗಿ, ಅತ್ಯಗತ್ಯವಾಗಿ, ಪ್ರಕೃತಿ ಸಹಜವಾಗಿ, ಪ್ರಕೃತಿಗೆ ಹತ್ತಿರವಾಗಿ ಬಾಳಿ ಬದುಕುವುದು ಜಪಾನ್​ ದೇಶದವರ ಮೈಮನಗಳಲ್ಲಿ ಹಾಸುಹೊಕ್ಕಿದೆ. ಜಪಾನ್​​ನ ಕೈಯೋ ಪಟ್ಟಣದಲ್ಲಿ ಇಂದು ವಿಶೇಷ ಸಂಭ್ರಮ ಮನೆ ಮಾಡಿದೆ. ತಾಂತ್ರಿಕವಾಗಿ ಸದಾ ಮುಂಚೂಣಿಯಲ್ಲಿರ ಬಯಸುವ ಜಪಾನೀಯರು (Japan) ಕೈಯೋ (Kaiyo) ಪಟ್ಟಣದಲ್ಲಿಂದು ವಿಶ್ವದ ಮೊಟ್ಟಮೊದಲ ಬಸ್​​-ಟ್ರೈನ್ ಅನ್ನು (Bus Train Dual-Mode Vehicle) ಸಂಚಾರಕ್ಕೆ ಬಿಡಲಿದ್ದಾರೆ.

ಈ ದ್ವಿರೂಪದ ಬಸ್​​-ಟ್ರೈನ್ ಸಾರಿಗೆ ವಾಹನ ಮಿನಿ ಬಸ್​​ ಮಾದರಿ ಇದ್ದು, ರಸ್ತೆಯಲ್ಲಿ ಸಂಚರಿಸುವಾಗ ರಬ್ಬರ್ ಟೈರ್​ ಮೇಲೆಯೇ ಸಂಚರಿಸುತ್ತದೆ. ಅದೇ ರೈಲ್ವೆ ಹಳಿಯ ಮೇಲಕ್ಕೆ ಬಂದಾಗ ರೈಲಿನಂತೆ ಸಂಚರಿಸುತ್ತದೆ. ಬಸ್​ನ ಕೆಳಗಿರುವ ಸ್ಟೀಲ್​ ಗಾಲಿಗಳು ವಾಹನದಿಂದ ಇನ್ನೂ ಕೆಳಗಿಳಿದು ಹಳಿಗಳ ಮೇಲೆ ಬರುತ್ತವೆ. ಅದಾಗ ಟ್ರೈನ್​ ಮಾದರಿ ಸಂಚರಿಸುತ್ತದೆ. ಕೈಯೋ ಅಂತಹ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಇದರ ಉದ್ದೇಶವಾಗಿದೆ.

ದ್ವಿರೂಪದ ಬಸ್​​-ಟ್ರೈನ್ ಸಾರಿಗೆ ವಾಹನ ಸಂಚಾರಕ್ಕೆ ಬಿಡುವ ಮೂಲಕ ಹಿರಿಯ ಜೀವಗಳಿಗೂ ಜಪಾನ್​ ಮಣೆ ಹಾಕಿರುವುದು ಶ್ಲಾಘನಾರ್ಹ.

ಅದರಲ್ಲೂ ಜಪಾನ್​​ನಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ, ಸಣ್ಣಪುಟ್ಟ ಊರುಗಳಲ್ಲಿ ಜನಸಂಖ್ಯೆಯೂ ಕಡಿಮೆಯಾಗುತ್ತಿದೆ. ಹಿರಿಯರ ಬಗ್ಗೆ ಅಪಾರ ಕಾಳಜಿ ವಹಿಸುವ ಜಪಾನ್ ಸರ್ಕಾರ, ತನ್ನ ಹಿರಿಯ ಜೀವಗಳಿಗೆ ಕೊಡುವ ಗೌರವ ಇದಾಗಿದೆ. ದೂರದ ಊರುಗಳಲ್ಲಿ ಹಿರಿಯರಿಗೆ ಊರುಗೋಲು ಆಗಲು ಈ ದ್ವಿ ಸಂಚಾರಿ ವಾಹನವನ್ನು ಬಿಡುಗಡೆ ಮಾಡಿದೆ. ಊರುಗಳಿಗೂ ಬಸ್​ ರೂಪದಲ್ಲಿ ಈ ರೈಲು ಸಂಚರಿಸುತ್ತದೆ! ಜೊತೆಗೆ ರೈಲು ಮಾದರಿಯಲ್ಲಿ ಕಾರ್ಯನಿರ್ವಹಿಸಿ ಸುಸೂತ್ರ ಜನ ಸಂಚಾರಕ್ಕೆ ನೆರವಾಗಲಿದೆ. ಕರ್ನಾಟಕ-ಭಾರತ ಸೇರಿದಂತೆ ಅನೇಕ ಕಡೆ ವೃದ್ಧರು-ಅಸಹಾಯಕರು ಹಾಗಿರಲಿ, ಮಾಮೂಲಿ ಜನ ಸಂಚಾರಕ್ಕೇ ಬಸ್​​ ವ್ಯವಸ್ಥೆ ಇರುವುದಿಲ್ಲ. ಅಂತಹುದರಲ್ಲಿ ಹಿರಿಯ ಜೀವಗಳಿಗೂ ಜಪಾನ್​ ಮಣೆ ಹಾಕಿರುವುದು ಶ್ಲಾಘನಾರ್ಹ.

ಈ ಬಸ್​​-ಟ್ರೈನ್ ಸಾರಿಗೆ ವಾಹನ (Bus Train Dual-Mode Vehicle) 21 ಮಂದಿಯನ್ನು ಕರೆದೊಯ್ಯಬಲ್ಲದು. ಗಂಟೆಗೆ 60 ಕಿ ಮೀ ವೇಗದಲ್ಲಿ ಸಂಚರಿಸುತ್ತದೆ. ಉತ್ತಮವಾಗಿರುವ ರಸ್ತೆಗಳ ಮೇಲೆ 100 ಕಿ ಮೀ ವೇಗವನ್ನೂ ಕ್ರಮಿಸಬಲ್ಲದು. ಇದರಲ್ಲಿ ಡೀಸೆಲ್ ಇಂಧನ ಬಳಕೆಯಾಗಲಿದೆ. ಜಪಾನ್​ನ ದಕ್ಷಿಣ ಭಾಗದಲ್ಲಿರುವ ಶಿಕೋಕು ದ್ವೀಪ ಪ್ರದೇಶಗಳಲ್ಲಿ ಈ ವಾಹನಗಳು ಇಂದಿನಿಂದ ಸಂಚರಿಸಲಿವೆ.

CPI ಕುದುರೆ ಸವಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್|Police |TV9Kannada