
ವಾಷಿಂಗ್ಟನ್, ಮೇ 23: ಅಮೆರಿಕವು ವಿಶ್ವದ ದೊಡ್ಡಣ್ಣನೆನಿಸಿಕೊಂಡಿದ್ದರೂ ತೀರಾ ಸಣ್ಣತನ ತೋರುತ್ತಿದೆ. ಮೊದಲೆಲ್ಲಾ ಓವಲ್ ಕಚೇರಿಗೆ ತೆರಳಿ ಅಮೆರಿಕ ಅಧ್ಯಕ್ಷರನ್ನು ಭೇಟಿಯಾಗುವುದೇ ಸೌಭಾಗ್ಯ ಎಂದು ವಿದೇಶಿ ಗಣ್ಯರು ಭಾವಿಸುತ್ತಿದ್ದರು. ಆದರೆ ಇದೀಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅತಿಥಿಗಳ ಬಳಿ ತೀರಾ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ.
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರ ಬಳಿ ಟ್ರಂಪ್ ಕೆಟ್ಟದಾಗಿ ವರ್ತಿಸಿದ್ದಾರೆ. ಆದರೆ ಈ ರೀತಿ ಘಟನೆಗಳು ಇದೇ ಮೊದಲಲ್ಲ. ಈ ಹಿಂದೆ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಬಂದಾಗ ಕೂಡ ಇದೇ ರೀತಿ ನಡೆದುಕೊಂಡು ಅವಮಾನ ಮಾಡಿದ್ದರು. ಈಗ ರಾಮಫೋಸಾ ಸರದಿ.
ಓವಲ್ ಕಚೇರಿಯಲ್ಲಿ ನಡೆದಿದ್ದೇನು?
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಟ್ರಂಪ್ ಅವರೊಂದಿಗೆ ಸೌಹಾರ್ದ ಮಾತುಕತೆಗಾಗಿ ಶ್ವೇತಭವನಕ್ಕೆ ಆಗಮಿಸಿದ್ದರು. ಸಭೆ ಪ್ರಾರಂಭವಾಗಿ 20 ನಿಮಿಷಗಳ ಬಳಿಕ ಟ್ರಂಪ್ ಕೋಣೆಯ ದೀಪಗಳನ್ನು ಮಂದಗೊಳಿಸಿದರು. ದೊಡ್ಡ ಪರದೆಯನ್ನು ಆನ್ ಮಾಡಿದ್ದರು. ರಾಮಫೋಸಾ ಒಮ್ಮೆ ಆಘಾತಕ್ಕೊಳಗಾದರು.
ಮತ್ತಷ್ಟು ಓದಿ: ಅಮೆರಿಕದಲ್ಲಿ ಒನ್ ಬಿಗ್ ಬ್ಯೂಟಿಫುಲ್ ತೆರಿಗೆ ಮಸೂದೆ ಅಂಗೀಕಾರ; ಭಾರತದ ಮೇಲಿನ ಪರಿಣಾಮವೇನು?
ದಕ್ಷಿಣ ಆಫ್ರಿಕಾದ ವಿರೋಧ ಪಕ್ಷದ ನಾಯಕರಾದ ಜಾಕೋಬ್ ಜುಮಾ ಮತ್ತು ಜೂಲಿಯಸ್ ಮಲೆಮಾ ಅವರು ಪ್ರಚೋದನಕಾರಿ ಭಾಷಣವನ್ನು ಪರದೆಯ ಮೇಲೆ ತೋರಿಸಲಾಯಿತು.ಹಾಗೆಯೇ ಟ್ರಂಪ್ ಕೆಲವು ಡ್ರೋನ್ ದೃಶ್ಯಾವಳಿಗಳನ್ನು ತೋರಿಸಿ ಇದು ಅಲ್ಲಿ ನಡೆದ ಬಿಳಿಯರ ಸಮಾಧಿ ಎಂದರು. ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ನರಮೇಧ ಏಕೆ ನಡೆಯುತ್ತಿದೆ ಎಂದು ಪ್ರಶ್ನಿಸಿದರು.
ರಾಮಫೋಸಾ ತಾಳ್ಮೆಯ ಪ್ರತಿಕ್ರಿಯೆ
ಟ್ರಂಪ್ಗೆ ರಾಮಫೋಸಾ ತಾಳ್ಮೆಯಿಂದ ಉತ್ತರಿಸಿದರು. ಈ ಘೋಷಣೆಗಳು ಸರ್ಕಾರಿ ನೀತಿಯ ಭಾಗವಾಗಿಲ್ಲ, ದಕ್ಷಿಣ ಆಫ್ರಿಕಾವು ಬಹು-ಪಕ್ಷ ಪ್ರಜಾಪ್ರಭುತ್ವವನ್ನು ಹೊಂದಿದ್ದು, ಅಲ್ಲಿ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಮಲೆನಾ ಅವರ ಪಕ್ಷ ಚಿಕ್ಕದಾಗಿದ್ದು, ಅವರ ಮಾತುಗಳು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು. ಆದರೂ ಟ್ರಂಪ್ ಮಾತು ಮುಂದುವರೆಸಿದರು. ಇದರ ನಡುವೆ ನಿಮಗೆ ಕೊಡಲು ನನ್ನ ಬಳಿ ವಿಮಾನ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ರಾಮಫೋಸಾ ವ್ಯಂಗ್ಯವಾಡಿದ್ದಾರೆ.ಅದಕ್ಕೆ ಕೂಡಲೇ ಉತ್ತರಿಸಿದ ಟ್ರಂಪ್ ನಿಮ್ಮ ದೇಶ ನನಗೆ ವಿಮಾನ ನೀಡಿದರೆ ಅದನ್ನೂ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ಓವಲ್ ಕಚೇರಿ ವಿಡಿಯೋ
Ramaphosa looked embarrassed. 😳
President Trump just halted the meeting with the South African President to show videos of prominent South African politicians calling for genocide against white South Africans.#Trump #Ramaphosa #SouthAfrica pic.twitter.com/QJVKE3AxLa
— U R B A N S E C R E T S 🤫 (@stiwari1510) May 21, 2025
ಝೆಲೆನ್ಸ್ಕಿಯನ್ನು ಅವಮಾನಿಸಲಾಗಿತ್ತು
ಫೆಬ್ರವರಿಯಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರಿಗೂ ಓವಲ್ ಕಚೇರಿಯಲ್ಲಿ ಇದೇ ರೀತಿಯ ಅನುಭವವಾಗಿತ್ತು. ರಷ್ಯಾ ವಿರುದ್ಧ ಯುದ್ಧದಲ್ಲಿ ಅಮೆರಿಕ ಸಹಾಯ ಮಾಡಿದ್ದರೂ ಕೂಡ ಝೆಲೆನ್ಸ್ಕಿ ಕೃತಜ್ಞರಾಗಿಲ್ಲ ಎಂದು ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಆರೋಪಿಸಿದ್ದರು. ಝೆಲೆನ್ಸ್ಕಿಯವರ ಸರಳ ಉಡುಪಿನ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು.ನಂತರ ಝೆಲೆನ್ಸ್ಕಿ ಬೇಗ ಶ್ವೇತ ಭವನ ಬಿಟ್ಟು ಹೊರನಡೆದಿದ್ದರು.
ಟ್ರಂಪ್ ವರ್ತನೆಗೆ ಟೀಕೆ
ಡೊನಾಲ್ಡ್ ಟ್ರಂಪ್ ವರ್ತನೆಗೆ ಪ್ರಪಂಚದಾದ್ಯಂತ ಟೀಕೆಗಳು ವ್ಯಕ್ತವಾಗಿವೆ. ದಕ್ಷಿಣ ಆಫ್ರಿಕಾದ ವಕ್ತಾರ ವಿನ್ಸೆಂಟ್ ಮ್ಯಾಗ್ವೆನ್ಯಾ, ರಾಮಫೋಸಾ ಅವರನ್ನು ಕೆರಳಿಸಲು ಪ್ರಯತ್ನಿಸಲಾಯಿತು ಆದರೆ ಅವರು ಸಿಕ್ಕಿಬೀಳಲಿಲ್ಲ ಎಂದು ಹೇಳಿದರು.
ನರೇಂದ್ರ ಮೋದಿಗೆ ಕುರ್ಚಿ ಹಿಂದೆ ಸರಿಸಿ ಕೂರಲು ಸಹಾಯ ಮಾಡಿದ್ದ ಟ್ರಂಪ್
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಇಬ್ಬರ ನಡುವಿನ ಬಾಂಧವ್ಯ ಮತ್ತು ಫ್ರೆಂಡ್‌ಶಿಫ್ ಜಗತ್ತಿನ ಗಮನ ಸೆಳೆದಿತ್ತು. ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದ ವೆಸ್ಟ್ ವಿಂಗ್ ಲಾಬಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಡೊನಾಲ್ಡ್ ಟ್ರಂಪ್ ಅವರು ಅಪ್ಪುಗೆಯ ಮೂಲಕ ಸ್ವಾಗತಿಸಿದ್ದರು. ಈ ವೇಳೆ ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡೆ ಎಂದು ಮೋದಿಗೆ ಟ್ರಂಪ್ ಹೇಳಿದ್ದಾರೆ. ಅದಲ್ಲದೇ ಶ್ವೇತ ಭವನದಲ್ಲಿ ವೀಕ್ಷಕರ ಪುಸ್ತಕಕ್ಕೆ ಸಹಿ ಹಾಕುವಾಗ ಮೋದಿ ಕೂರುವ ಕುರ್ಚಿಯನ್ನು ಕೂಡ ಟ್ರಂಪ್ ಸರಿಸಿದ್ದು ಗಮನ ಸೆಳೆದಿತ್ತು.
ಓವಲ್ ಕಚೇರಿ ಎಂದರೇನು?
ಓವಲ್ ಕಚೇರಿ ಎಂಬುದು ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದ ಪಶ್ಚಿಮ ಭಾಗದಲ್ಲಿರುವ ಅಮೆರಿಕ ಅಧ್ಯಕ್ಷರ ಅಧಿಕೃತ ಕಚೇರಿ.ಅಧ್ಯಕ್ಷರು ಅಧಿಕೃತ ವ್ಯವಹಾರಗಳನ್ನು ನಡೆಸುವ ಸ್ಥಳ ಇದು, ಮಸೂದೆಗಳಿಗೆ ಸಹಿ ಹಾಕುವ ಸ್ಥಳ, ಸಿಬ್ಬಂದಿ, ರಾಷ್ಟ್ರ ಮುಖ್ಯಸ್ಥರು ಮತ್ತು ಇತರ ಗಣ್ಯರನ್ನು ಭೇಟಿ ಮಾಡುವ ಸ್ಥಳ ಮತ್ತು ಕೆಲವೊಮ್ಮೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಸ್ಥಳ ಇದು.ಓವಲ್ ಕಚೇರಿಯನ್ನು 1909 ರಲ್ಲಿ ಅಧ್ಯಕ್ಷ ವಿಲಿಯಂ ಹೊವಾರ್ಡ್ ಟಾಫ್ಟ್ ಅವರ ಆಡಳಿತದ ಸಮಯದಲ್ಲಿ ರಚಿಸಲಾಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ