AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಒನ್ ಬಿಗ್ ಬ್ಯೂಟಿಫುಲ್ ತೆರಿಗೆ ಮಸೂದೆ ಅಂಗೀಕಾರ; ಭಾರತದ ಮೇಲಿನ ಪರಿಣಾಮವೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒನ್ ಬಿಗ್ ಬ್ಯೂಟಿಫುಲ್ ತೆರಿಗೆ ಮಸೂದೆಯು ಇಂದು ಅಂಗೀಕಾರವಾಗಿದೆ. ಯುಎಸ್ ಪ್ರತಿನಿಧಿಗಳ ಸಭೆ ಗುರುವಾರ ಡೊನಾಲ್ಡ್ ಟ್ರಂಪ್ ಅವರ ನೀತಿ ಕಾರ್ಯಸೂಚಿಯ ಬಹುಭಾಗವನ್ನು ಜಾರಿಗೆ ತರುವ ವ್ಯಾಪಕ ತೆರಿಗೆ ಮತ್ತು ಖರ್ಚು ಮಸೂದೆಯನ್ನು ಸಂಕುಚಿತವಾಗಿ ಅಂಗೀಕರಿಸಿತು. ಇದು ಸೆನೆಟ್‌ಗೆ ಹೋಗಲಿದೆ. ಭಾರತೀಯ ಮೂಲದ 32 ಲಕ್ಷ ಜನರು ಸೇರಿದಂತೆ ಅಮೆರಿಕದಲ್ಲಿರುವ 45 ಲಕ್ಷ ಭಾರತೀಯರ ಹಣಕಾಸು ಪರಿಸ್ಥಿತಿಯ ಮೇಲೆ ಇದು ಪರಿಣಾಮ ಬೀರಲಿದೆ.

ಅಮೆರಿಕದಲ್ಲಿ ಒನ್ ಬಿಗ್ ಬ್ಯೂಟಿಫುಲ್ ತೆರಿಗೆ ಮಸೂದೆ ಅಂಗೀಕಾರ; ಭಾರತದ ಮೇಲಿನ ಪರಿಣಾಮವೇನು?
Us President Donald Trump
ಸುಷ್ಮಾ ಚಕ್ರೆ
|

Updated on:May 22, 2025 | 8:46 PM

Share

ವಾಷಿಂಗ್ಟನ್, ಮೇ 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) “ಒಂದು, ದೊಡ್ಡ, ಬ್ಯೂಟಿಫುಲ್ ಮಸೂದೆ” ಎಂದು ಕರೆದಿರುವ ಬಿಲ್ 215–214 ಮತಗಳೊಂದಿಗೆ ಯುಎಸ್ ಹೌಸ್‌ನಲ್ಲಿ ಇಂದು ಅನುಮೋದನೆ ಪಡೆಯಿತು. ಎಲ್ಲಾ ಡೆಮೋಕ್ರಾಟ್‌ಗಳು ಇಬ್ಬರು ರಿಪಬ್ಲಿಕನ್ನರೊಂದಿಗೆ ಮಸೂದೆಯನ್ನು ವಿರೋಧಿಸಿದರು. ಅಲ್ಪ ಬಹುಮತದೊಂದಿಗೆ ಇದು ಅಂಗೀಕಾರವಾಯಿತು. 1,000 ಪುಟಗಳ ಪ್ಯಾಕೇಜ್ ಈಗ ಸೆನೆಟ್‌ಗೆ ಹೋಗುತ್ತಿದೆ. ಅಲ್ಲಿ ಅದು ಕಾನೂನಾಗುವ ಮೊದಲು ಅದನ್ನು ಅನುಮೋದಿಸಬೇಕು.

ಈ ಮಸೂದೆಯು 2017ರಲ್ಲಿ ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅಂಗೀಕರಿಸಲಾದ ಕಾರ್ಪೊರೇಟ್ ಮತ್ತು ವೈಯಕ್ತಿಕ ತೆರಿಗೆ ಕಡಿತಗಳನ್ನು ವಿಸ್ತರಿಸುತ್ತದೆ. ಟಿಪ್ಸ್ ಮತ್ತು ಕಾರು ಸಾಲಗಳ ಮೇಲೆ ಹೊಸ ತೆರಿಗೆ ವಿನಾಯಿತಿಗಳನ್ನು ಪರಿಚಯಿಸುತ್ತದೆ. ಇದು ಆಹಾರ ಮತ್ತು ಆರೋಗ್ಯ ರಕ್ಷಣಾ ನೆರವು ಕಾರ್ಯಕ್ರಮಗಳಿಗೆ ಅರ್ಹತೆಯನ್ನು ಬಿಗಿಗೊಳಿಸುತ್ತದೆ ಮತ್ತು ಗಡಿ ಜಾರಿಗೊಳಿಸುವಿಕೆಯನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ. ಇದರಲ್ಲಿ ಹತ್ತಾರು ಸಾವಿರ ಹೊಸ ಏಜೆಂಟ್‌ಗಳ ನೇಮಕ ಮತ್ತು ವಾರ್ಷಿಕವಾಗಿ ಒಂದು ಮಿಲಿಯನ್ ಜನರನ್ನು ಗಡೀಪಾರು ಮಾಡುವ ನಿಬಂಧನೆಗಳು ಸೇರಿವೆ. ಈ ಪ್ರಸ್ತಾವನೆಯ ಅಡಿಯಲ್ಲಿ ಮಿಲಿಟರಿ ವೆಚ್ಚವೂ ಹೆಚ್ಚಾಗುತ್ತದೆ.

ಈ ಬಗ್ಗೆ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್ “ದಿ ಒನ್, ಬಿಗ್, ಬ್ಯೂಟಿಫುಲ್ ಬಿಲ್” ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅಂಗೀಕಾರವಾಗಿದೆ. ಇದು ನಮ್ಮ ದೇಶದ ಇತಿಹಾಸದಲ್ಲಿ ಸಹಿ ಹಾಕಲಾಗುವ ಅತ್ಯಂತ ಮಹತ್ವದ ಶಾಸನವಾಗಿದೆ! ಈ ಮಸೂದೆಯಲ್ಲಿ ಬೃಹತ್ ತೆರಿಗೆ ಕಡಿತಗಳು, ಟಿಪ್ಸ್ ಮೇಲೆ ತೆರಿಗೆ ಇಲ್ಲ, ಓವರ್‌ಟೈಮ್ ಮೇಲೆ ತೆರಿಗೆ ಇಲ್ಲ, ನೀವು ಅಮೇರಿಕನ್ ನಿರ್ಮಿತ ವಾಹನವನ್ನು ಖರೀದಿಸುವಾಗ ತೆರಿಗೆ ಕಡಿತಗಳಿರುತ್ತವೆ. ಬಲವಾದ ಗಡಿ ಭದ್ರತಾ ಕ್ರಮಗಳು, ನಮ್ಮ ICE ಮತ್ತು ಬಾರ್ಡರ್ ಪೆಟ್ರೋಲ್ ಏಜೆಂಟ್‌ಗಳಿಗೆ ವೇತನ ಹೆಚ್ಚಳ, ಗೋಲ್ಡನ್ ಡೋಮ್‌ಗೆ ಹಣಕಾಸು, ನವಜಾತ ಶಿಶುಗಳಿಗೆ “ಟ್ರಂಪ್ ಉಳಿತಾಯ ಖಾತೆಗಳು” ಮುಂತಾದವು ಸೇರಿವೆ! ಈ ಐತಿಹಾಸಿಕ ಮಸೂದೆಗೆ ಬೆಂಬಲ ನೀಡಿ ಮತ ಚಲಾಯಿಸಿದ ಪ್ರತಿಯೊಬ್ಬ ರಿಪಬ್ಲಿಕನ್‌ಗೂ ಧನ್ಯವಾದಗಳು! ಈಗ, ಯುನೈಟೆಡ್ ಸ್ಟೇಟ್ಸ್ ಸೆನೆಟ್‌ನಲ್ಲಿರುವ ನಮ್ಮ ಸ್ನೇಹಿತರು ಕೆಲಸ ಮಾಡಲು ಪ್ರಾರಂಭಿಸುವ ಸಮಯ. ಈ ಬಿಲ್ ಅನ್ನು ಸಾಧ್ಯವಾದಷ್ಟು ಬೇಗ ನನ್ನ ಮೇಜಿನ ಬಳಿಗೆ ಕಳುಹಿಸುವ ಸಮಯ! ವ್ಯರ್ಥ ಮಾಡಲು ಸಮಯವಿಲ್ಲ. ಡೆಮೋಕ್ರಾಟ್‌ಗಳು ತಮ್ಮ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ ಮತ್ತು ಗುರಿಯಿಲ್ಲದೆ ಅಲೆದಾಡುತ್ತಿದ್ದಾರೆ. ಅವರು ಯಾವುದೇ ವಿಶ್ವಾಸ, ಧೈರ್ಯ ಅಥವಾ ದೃಢಸಂಕಲ್ಪವನ್ನು ತೋರಿಸುತ್ತಿಲ್ಲ. ಅವರು ಅಧ್ಯಕ್ಷೀಯ ಚುನಾವಣೆಯಲ್ಲಿನ ತಮ್ಮ ಹೀನಾಯ ಸೋಲನ್ನು ಮರೆತಿದ್ದಾರೆ ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ನಾನೇ ಮಾಡಿದ್ದು ಅಂತ ಹೇಳಲ್ಲ; ಭಾರತ-ಪಾಕ್ ಮಧ್ಯಸ್ಥಿಕೆ ಬಗ್ಗೆ ವರಸೆ ಬದಲಿಸಿದ ಟ್ರಂಪ್

ಟ್ರಂಪ್ ತೆರಿಗೆ ಮಸೂದೆಯು ಸದನದಲ್ಲಿ ಅಂಗೀಕಾರಗೊಂಡು ರಿಪಬ್ಲಿಕನ್ನರ ಗೆಲುವಿನೊಂದಿಗೆ ಸೆನೆಟ್‌ಗೆ ಮುನ್ನಡೆಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಇದು ಬ್ಯೂಟಿಫುಲ್ ಮಸೂದೆ. ಆದರೆ, ಭಾರತದ ಪಾಲಿಗೆ ಇದು ಸುಂದರವಾದ ಮಸೂದೆಯಲ್ಲ. ಈ ಮಸೂದೆ ಭಾರತದ ಮೇಲೆ ಭಾರೀ ಪರಿಣಾಮ ಬೀರಬಹುದು ಎಂದು ತೆರಿಗೆ ತಜ್ಞರು ಹೇಳಿದ್ದಾರೆ. ಭಾರತ ಅಮೆರಿಕದಿಂದ ಬರುವ ಹಣದ ಅತಿದೊಡ್ಡ ಫಲಾನುಭವಿ ದೇಶದಲ್ಲಿ ಒಂದಾಗಿರುವುದರಿಂದ ಈ ಮಸೂದೆಯಿಂದ ಭಾರತಕ್ಕೆ ಸಂಕಷ್ಟ ಎದುರಾಗಲಿದೆ.

ಭಾರತದ ಮೇಲಾಗುವ ಪರಿಣಾಮವೇನು?:

ಭಾರತಕ್ಕೆ ಹಣ ಕಳುಹಿಸುವ ವಲಸೆ ರಹಿತ ವೀಸಾ ಹೊಂದಿರುವವರು(H-1B ವೀಸಾಗಳಂತೆ) ಸೇರಿದಂತೆ ನಾಗರಿಕರಲ್ಲದವರು ಮಾಡುವ ಅಂತಾರಾಷ್ಟ್ರೀಯ ಹಣ ವರ್ಗಾವಣೆಯ ಮೇಲೆ ಶೇ.5 ರಷ್ಟು ತೆರಿಗೆ ವಿಧಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ವಿದೇಶಗಳಿಂದ ಭಾರತಕ್ಕೆ ಒಳಬರುವ ಒಟ್ಟು ಹಣ ರವಾನೆಯಲ್ಲಿ ಅಮೆರಿಕದಿಂದ ಬರುವ ಹಣವು 2023-24ರಲ್ಲಿ ಶೇ.27.7 ರಷ್ಟು ಇದ್ದು, ಇದು ಅತಿ ದೊಡ್ಡ ಹಣ ರವಾನೆಯಾಗಿದೆ. ಇದು 2020-21ರಲ್ಲಿ ಶೇ.23.4ರಷ್ಟಿತ್ತು.

ಇದನ್ನೂ ಓದಿ: ಪುಟಿನ್​ಗೆ ಉಕ್ರೇನ್ ಜೊತೆಗಿನ ಯುದ್ಧ ಮುಗಿಸುವುದು ಇಷ್ಟವಿಲ್ಲ; ಯುರೋಪಿಯನ್ ನಾಯಕರ ಜೊತೆ ಟ್ರಂಪ್ ಮಾತುಕತೆ

ಈ ಮಸೂದೆ ಜಾರಿಯಾಗುವುದರಿಂದ ಅಮೆರಿಕದಿಂದ ವರ್ಗಾವಣೆಯಾಗುವ ಪ್ರತಿ ಡಾಲರ್‌ಗೂ ತೆರಿಗೆ ಕಟ್ಟಬೇಕಾಗುತ್ತದೆ. ಅಮೆರಿಕದಲ್ಲಿ ಸುಮಾರು ಶೇ. 78ರಷ್ಟು ಭಾರತೀಯ ವಲಸಿಗರು ನಿರ್ವಹಣೆ, ವ್ಯವಹಾರ ಮತ್ತು ವಿಜ್ಞಾನದಂತಹ ಹೆಚ್ಚಿನ ಆದಾಯ ಗಳಿಸುವ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಭಾರತದ ಹಣ ರವಾನೆ 2010-11ರಲ್ಲಿ 55.6 ಬಿಲಿಯನ್‌ ಡಾಲರ್ ನಿಂದ 2023-24ರಲ್ಲಿ 118.7 ಬಿಲಿಯನ್‌ ಡಾಲರ್ ಗೆ ದುಪ್ಪಟ್ಟಾಗಿದೆ. ಅಂದರೆ ಸುಮಾರು 33 ಬಿಲಿಯನ್ ಡಾಲರ್ ಅಮೆರಿಕದಿಂದ ಬಂದಿದೆ. ಈ ಮಸೂದೆ ಜಾರಿಗೆ ಬಂದರೆ, ಭಾರತ 1.65 ಬಿಲಿಯನ್ ಡಾಲರ್ ಹಣ ರವಾನೆಯನ್ನು ತ್ಯಜಿಸಬೇಕಾಗಬಹುದು. ಭಾರತೀಯ ಮೂಲದ 32 ಲಕ್ಷ ಜನರು ಸೇರಿದಂತೆ ಅಮೆರಿಕದಲ್ಲಿರುವ 45 ಲಕ್ಷ ಭಾರತೀಯರ ಹಣಕಾಸು ಪರಿಸ್ಥಿತಿಯ ಮೇಲೆ ಇದು ಪರಿಣಾಮ ಬೀರಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Thu, 22 May 25

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್