‘ಅಮೆರಿಕದಲ್ಲಿ ಕೊರೊನಾ ಬಿಕ್ಕಟ್ಟು ನಿಯಂತ್ರಿಸುವಲ್ಲಿ ಟ್ರಂಪ್ ವಿಫಲ’
ವಾಷಿಂಗ್ಟನ್: ಮಹಾಮಾರಿ ಕೊರೊನಾ ಬಿಕ್ಕಟ್ಟು ನಿಯಂತ್ರಿಸುವಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಸಂಪೂರ್ಣವಾಗಿ ವಿಫಲರಾಗಿದ್ದಾರೆಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್ ಆರೋಪಿಸಿದ್ದಾರೆ. ಕೊರೊನಾ ಎದುರಿಸಲು ಯಾವುದೇ ತಯಾರಿ ಮಾಡಲಿಲ್ಲ. ಟ್ರಂಪ್ ನಿರ್ಧಾರಗಳು ಶ್ರೀಮಂತ ಕಂಪನಿಗಳ ಪರವಾಗಿವೆ ಎಂದು ಡೊನಾಲ್ಡ್ ಟ್ರಂಪ್ ವಿರುದ್ಧ ಜೋ ಬಿಡನ್ ವಾಗ್ದಾಳಿ ನಡೆಸಿದ್ದಾರೆ. ಕೊರೊನಾದಿಂದ ಏಪ್ರಿಲ್‌ನಲ್ಲಿ 2.05 ಕೋಟಿ ಜನರಿಗೆ ಉದ್ಯೋಗ ನಷ್ಟವಾಗಿದೆ. ಅಮೆರಿಕದಲ್ಲಿ ನಿರುದ್ಯೋಗ ದರ ಈಗ ಶೇ. 14.7ರಷ್ಟಿದೆ. ಮಹಾ ಆರ್ಥಿಕ ಕುಸಿತದ ನಂತರದ ಗರಿಷ್ಟ ಸಂಖ್ಯೆಯಾಗಿದೆ. ಟ್ರಂಪ್ ಆಡಳಿತದಲ್ಲಿ […]
ವಾಷಿಂಗ್ಟನ್: ಮಹಾಮಾರಿ ಕೊರೊನಾ ಬಿಕ್ಕಟ್ಟು ನಿಯಂತ್ರಿಸುವಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಸಂಪೂರ್ಣವಾಗಿ ವಿಫಲರಾಗಿದ್ದಾರೆಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್ ಆರೋಪಿಸಿದ್ದಾರೆ. ಕೊರೊನಾ ಎದುರಿಸಲು ಯಾವುದೇ ತಯಾರಿ ಮಾಡಲಿಲ್ಲ. ಟ್ರಂಪ್ ನಿರ್ಧಾರಗಳು ಶ್ರೀಮಂತ ಕಂಪನಿಗಳ ಪರವಾಗಿವೆ ಎಂದು ಡೊನಾಲ್ಡ್ ಟ್ರಂಪ್ ವಿರುದ್ಧ ಜೋ ಬಿಡನ್ ವಾಗ್ದಾಳಿ ನಡೆಸಿದ್ದಾರೆ.
ಕೊರೊನಾದಿಂದ ಏಪ್ರಿಲ್‌ನಲ್ಲಿ 2.05 ಕೋಟಿ ಜನರಿಗೆ ಉದ್ಯೋಗ ನಷ್ಟವಾಗಿದೆ. ಅಮೆರಿಕದಲ್ಲಿ ನಿರುದ್ಯೋಗ ದರ ಈಗ ಶೇ. 14.7ರಷ್ಟಿದೆ. ಮಹಾ ಆರ್ಥಿಕ ಕುಸಿತದ ನಂತರದ ಗರಿಷ್ಟ ಸಂಖ್ಯೆಯಾಗಿದೆ. ಟ್ರಂಪ್ ಆಡಳಿತದಲ್ಲಿ ಅಮೆರಿಕದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಡೊನಾಲ್ಡ್ ಟ್ರಂಪ್ ಅವರದ್ದು ವಿನಾಶಕಾರಿ ಆರ್ಥಿಕತೆ ಎಂದು ಜೋ ಬಿಡನ್ ಕಿಡಿಕಾರಿದ್ದಾರೆ.
ಅಂದಹಾಗೆ ನವೆಂಬರ್ ತಿಂಗಳಿನಲ್ಲಿ ಅಮೆರಿಕದಲ್ಲಿ ಚುನಾವಣೆ ನಡೆಯಲಿದೆ. ಮುಂಬರುವ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಜೋ ಬಿಡನ್ ಸ್ಪರ್ಧಿಸಲಿದ್ದಾರೆ.