Donald Trump: ಗುಂಡಿನ ದಾಳಿಯ ನಂತರ ಕಿವಿಗೆ ಬ್ಯಾಂಡೇಜ್ ಹಾಕಿಕೊಂಡೇ ವೇದಿಕೆಯೇರಿದ ಟ್ರಂಪ್

|

Updated on: Jul 16, 2024 | 11:26 AM

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಶನಿವಾರ ಶೂಟೌಟ್ ಆಗಿತ್ತು. ಗುಂಡಿನ ದಾಳಿಯಿಂದ ಟ್ರಂಪ್ ಅವರ ಕಿವಿ ಸೀಳಿ ಹೋಗಿತ್ತು. ಇದಾದ ನಂತರ ಕಿವಿಗೆ ಬ್ಯಾಂಡೇಜ್ ಹಾಕಿಕೊಂಡೇ ಸೋಮವಾರ ಮಿಲ್ವಾಕೀಯಲ್ಲಿ ನಡೆದ ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಷನ್‌ನಲ್ಲಿ ವೇದಿಕೆಯಲ್ಲಿ ಟ್ರಂಪ್ ಕಾಣಿಸಿಕೊಂಡಿದ್ದಾರೆ.

Donald Trump: ಗುಂಡಿನ ದಾಳಿಯ ನಂತರ ಕಿವಿಗೆ ಬ್ಯಾಂಡೇಜ್ ಹಾಕಿಕೊಂಡೇ ವೇದಿಕೆಯೇರಿದ ಟ್ರಂಪ್
ಟ್ರಂಪ್
Follow us on

ಮಿಲ್ವಾಕೀ: ಕಿವಿಗೆ ಬಿಳಿ ಬ್ಯಾಂಡೇಜ್ ಧರಿಸಿ ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುಂಬಿದ ಸಭೆಯಲ್ಲಿ ಕೈ ಬೀಸಿದ್ದಾರೆ. ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ನಡೆದ ಗುಂಡಿನ ದಾಳಿಯ ಎರಡು ದಿನಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರನ್ನು ಬೆಂಬಲಿಗರು ಹರ್ಷೋದ್ಗಾರದಿಂದ ಸ್ವಾಗತಿಸಿದ್ದಾರೆ.

78 ವರ್ಷದ ಟ್ರಂಪ್ ಅವರು ಸಮಾವೇಶದಲ್ಲಿ ವೇದಿಕೆ ಏರುತ್ತಿದ್ದಂತೆ “USA! USA!” ಎಂಬ ಘೋಷಣೆಗಳು ಕೇಳಿಬಂದಿತು. ಈ ವೇಳೆ ತಮ್ಮ ಮೇಲಿನ ದಾಳಿಗೆ ಯಾರನ್ನೂ ಟೀಕೆ ಮಾಡದ ಅವರು ಅದರ ಬದಲಾಗಿ ಹೊಸದಾಗಿ ಘೋಷಿಸಲಾದ ತನ್ನ ಸಹವರ್ತಿ ಸೆನೆಟರ್ ಜೆ.ಡಿ ವ್ಯಾನ್ಸ್ ಜೊತೆಗೆ ಕಾಣಿಸಿಕೊಂಡರು.

ಡೊನಾಲ್ಡ್ ಟ್ರಂಪ್ ಕಿವಿ ಬಿಳಿ ಬ್ಯಾಂಡೇಜ್ ಧರಿಸಿ, ತುಂಬಿದ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸೋಮವಾರ ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಮಾಜಿ ಯುಎಸ್ ಅಧ್ಯಕ್ಷ ಟ್ರಂಪ್​ಗೆ ಭರ್ಜರಿ ಸ್ವಾಗತವನ್ನು ನೀಡಲಾಯಿತು.

ಇದನ್ನೂ ಓದಿ: ಮತಪೆಟ್ಟಿಗೆಯಿಂದ ವ್ಯತ್ಯಾಸ ತರಬೇಕೇ ವಿನಃ ಬಂದೂಕಿನಿಂದಲ್ಲ; ಟ್ರಂಪ್ ಹತ್ಯೆ ಪ್ರಯತ್ನದ ಬಳಿಕ ಜೋ ಬಿಡೆನ್ ಮನವಿ

ಟ್ರಂಪ್ ಗುರುವಾರ ತಮ್ಮ ಪಕ್ಷದ ನಾಮನಿರ್ದೇಶನವನ್ನು ಔಪಚಾರಿಕವಾಗಿ ಮಾಡಲಿದ್ದಾರೆ. ಮುಂಬರುವ ನವೆಂಬರ್ 5ರ ಚುನಾವಣೆಯಲ್ಲಿ ಅವರು ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರ ಎದುರು ಸ್ಪರ್ಧಿಸಲಿದ್ದಾರೆ. ಸೋಮವಾರ ನಡೆದ ಸಮಾವೇಶವು ರಿಪಬ್ಲಿಕನ್ನರಿಗೆ ತಮ್ಮ ನಾಯಕನ ಹಿಂದೆ ಒಟ್ಟುಗೂಡಿಸಲು ಮತ್ತು ಬಿಡೆನ್ ವಿರುದ್ಧ ಮುಂಬರುವ ಚುನಾವಣಾ ಯುದ್ಧಕ್ಕೆ ತಯಾರಿ ನಡೆಸಲು ವೇದಿಕೆಯಾಯಿತು.

ಇದನ್ನೂ ಓದಿ: ಟ್ರಂಪ್ ಹತ್ಯೆ ಪ್ರಯತ್ನ; ಹೆಂಡತಿ, ಮಕ್ಕಳನ್ನು ಕಾಪಾಡಲು ಗುಂಡಿಗೆ ಎದೆಯೊಡ್ಡಿದ ಅಪ್ಪ

ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಶನಿವಾರ ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಭಾಷಣ ಮಾಡುವಾಗ ಅವರನ್ನು ಕೊಲೆ ಮಾಡಲೆಂದು ಶೂಟರ್ ಒಬ್ಬ ಗುಂಡು ಹಾರಿಸಿದ್ದ. ಆ ಗುಂಡು ಕೊಂಚ ಗುರಿ ತಪ್ಪಿ ಟ್ರಂಪ್ ಕಿವಿಯನ್ನು ಸೀಳಿದ್ದರಿಂದ ಕೂದಲೆಳೆ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ