ಟ್ರಂಪ್ ಸರ್ಕಾರದಲ್ಲಿ ಭಾರತ ಮೂಲದ ವಿವೇಕ್ ರಾಮಸ್ವಾಮಿ ಹಾಗೂ ಖ್ಯಾತ ಉದ್ಯಮಿ ಎಲಾನ್ಮಸ್ಕ್ಗೆ ಮಹತ್ವದ ಹುದ್ದೆ ನೀಡಲಾಗಿದೆ. ಸರ್ಕಾರದ ದಕ್ಷತೆಯ ಇಲಾಖೆ(DOGE)ಯನ್ನು ಮುನ್ನಡೆಸಲಿದ್ದಾರೆ.ಚುನಾವಣೆಗೂ ಮುನ್ನವೇ ಟ್ರಂಪ್ ಮಸ್ಕ್ ಗೆ ದೊಡ್ಡ ಜವಾಬ್ದಾರಿ ನೀಡುವ ಸುಳಿವು ನೀಡಿದ್ದರು.
ಅಗತ್ಯವಿರುವ ಅಧಿಕಾರಶಾಹಿ ಪ್ರವೃತ್ತಿಯನ್ನು ತೆಗೆದುಹಾಕಲು, ಅನಗತ್ಯ ನಿಯಮಗಳನ್ನು ಕಿತ್ತೊಗೆಯಲು, ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲು ಹಾಗೂ ಫೆಡರಲ್ ಏಜೆನ್ಸಿಗಳನ್ನು ಪುನರ್ ರಚಿಸಲು ಈ ಇಬ್ಬರು ನೆರವಾಗುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.
ರಿಪಬ್ಲಿಕನ್ ಪಕ್ಷ ಈ ಇಲಾಖೆಯ ಬಗ್ಗೆ ಬಹಳ ಸಮಯದಿಂದ ಕನಸು ಕಂಡಿದೆ. ಈ ಇಲಾಖೆಯಲ್ಲಿರುವವರು ಹೊರಗಿನಿಂದ ಸರ್ಕಾರಕ್ಕೆ ಸಲಹೆ, ಮಾರ್ಗದರ್ಶನವನ್ನು ನೀಡುತ್ತಾರೆ. ಅಮೆರಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸುಧಾರಣೆಯನ್ನು ತರಲು ಪ್ರಮುಖ ಪಾತ್ರವಹಿಸುತ್ತಾರೆ. ಎಲಾನ್ ಮತ್ತು ವಿವೇಕ್ ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದನ್ನು ನೋಡಲು ಎದುರು ನೋಡುತ್ತಿದ್ದೇನೆ ಎಂದು ಟಂಪ್ ಹೇಳಿದ್ದಾರೆ.
ಮತ್ತಷ್ಟು ಓದಿ: ಬಿಸಿನೆಸ್ ಹಿನ್ನೆಲೆಯ ಡೊನಾಲ್ಡ್ ಟ್ರಂಪ್ ಬಳಿ ಇರೋ ಆಸ್ತಿ ಎಷ್ಟು? ಇಲ್ಲಿದೆ ಡೀಟೇಲ್ಸ್
ರಾಮಸ್ವಾಮಿ ಅವರನ್ನು ವಿದೇಶಾಂಗ ಸಚಿವರನ್ನಾಗಿ ಮಾಡುವ ಸಾಧ್ಯತೆಗಳು ಮೊದಲೇ ವ್ಯಕ್ತವಾಗಿದ್ದವು. ಹೊಸ ಆರ್ಥಿಕ ಯೋಜನೆಯ ಭಾಗವಾಗಿ, ಟ್ರಂಪ್ ಸೆಪ್ಟೆಂಬರ್‌ನಲ್ಲಿ ಸರ್ಕಾರಿ ದಕ್ಷತೆ ಆಯೋಗವನ್ನು ಸ್ಥಾಪಿಸಲು ಪ್ರಸ್ತಾಪಿಸಿದ್ದರು.
ಆ ಸಮಯದಲ್ಲಿ ಮಸ್ಕ್ ರಿಪಬ್ಲಿಕನ್ ನಾಯಕ ಶ್ವೇತಭವನಕ್ಕೆ ಹಿಂತಿರುಗಿದರೆ, ಈ ಇಲಾಖೆಯನ್ನು ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದ್ದರು.
ಎಲಾನ್ ಮಸ್ಕ್ ಟೆಸ್ಲಾ ಹಾಗೂ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನ ಮಾಲೀಕರಾಗಿದ್ದರೆ, ರಾಮಸ್ವಾಮಿ ಫಾರ್ಮಾಸ್ಯುಟಿಕಲ್ ಕಂಪನಿಯ ಸ್ಥಾಪಕರಾಗಿದ್ದಾರೆ. ರಾಮಸ್ವಾಮಿ ಕಳೆದ ವರ್ಷ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ರೇಸ್‌ನಲ್ಲಿದ್ದರು. ಬಳಿಕ ಅವರು ಹಿಂದೆ ಸರಿದು ನಂತರ ಟ್ರಂಪ್ ಅನ್ನು ಬೆಂಬಲಿಸಲು ನಿರ್ಧರಿಸಿದರು.
ಟ್ರಂಪ್ ಅವರ ಚುನಾವಣಾ ಪ್ರಚಾರಕ್ಕೆ ಮಸ್ಕ್ ಅವರು ಲಕ್ಷಾಂತರ ಡಾಲರ್‌ಗಳನ್ನು ನೀಡಿದ್ದರು ಮತ್ತು ಅವರೊಂದಿಗೆ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದರು. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮಸ್ಕ್ ತಮ್ಮ ಆಡಳಿತದಲ್ಲಿ ಸರ್ಕಾರದ ದಕ್ಷತೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಟ್ರಂಪ್ ಹೇಳಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Wed, 13 November 24