ವಾಷಿಂಗ್ಟನ್, ಜನವರಿ 19: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಿಸಿರುವ ಡೊನಾಲ್ಡ್ ಟ್ರಂಪ್ ಅವರು ಜನವರಿ 20, ಸೋಮವಾರದಂದು ಪದಗ್ರಹಣ ಮಾಡಲಿದ್ದಾರೆ. ದೇಶ ವಿದೇಶಗಳಿಂದ ಸಾಕಷ್ಟು ಜನರು ವಾಷಿಂಗ್ಟನ್ನ ಸಂಸತ್ ಬಳಿ ಸೇರಲಿದ್ದಾರೆ. ಟ್ರಂಪ್ ಅವರು ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿದ್ದಾರೆ. 1985ರ ಬಳಿಕ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರು ಒಳಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಕಾರ್ಯಕ್ರಮ ಸ್ಥಳ ಒಳಾಂಣದಲ್ಲಿ ಯಾಕೆ ಆಗುತ್ತಿದೆ, ಯಾವ ಸಮಯದಲ್ಲಿ ಕಾರ್ಯಕ್ರಮ ನಡೆಯುತ್ತದೆ, ಯಾರೆಲ್ಲಾ ಅತಿಥಿಗಳು ಬರುತ್ತಿದ್ದಾರೆ, ಯಾವೆಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ ಎಂಬ ವಿವರ ಮುಂದಿದೆ.
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಪ್ರತಿಜ್ಞಾ ವಿಧಿ ಕಾರ್ಯಕ್ರಮವು ಯುಎಸ್ ಕ್ಯಾಪಿಟಲ್ ರೋಟಂಡಾದಲ್ಲಿ ನಡೆಯುತ್ತಿದೆ. ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವು ಕ್ಯಾಪಿಟಲ್ ಕಟ್ಟಡದ ಹೊರಗಿನ ಮೆಟ್ಟಿಲುಗಳ ಮೇಲೆ ನಡೆಯುವುದು ವಾಡಿಕೆ. ಕ್ಯಾಪಿಟಲ್ ಎಂದರೆ ಅಮೆರಿಕದ ಸಂಸತ್ ಭವನ. ಈ ಕ್ಯಾಪಿಟಲ್ ಕಟ್ಟಡದಲ್ಲಿ ರೋಟಂಡಾ ಎನ್ನುವ ಒಳಾಂಗಣ ಇದೆ.
ಈ ಸೀಸನ್ನಲ್ಲಿ ಅಮೆರಿಕದಲ್ಲಿ ವಿಪರೀತ ಚಳಿ ಇರುವುದರಿಂದ ಪ್ರತೀ ಬಾರಿ ಅಮೆರಿಕ ಅಧ್ಯಕ್ಷರ ಪ್ರಮಾಣವಚನ ಕಾರ್ಯಕ್ರಮ ನಡೆಯುವಾಗ ಪರ್ಯಾಯ ಸ್ಥಳವಾಗಿ ರೋಟಂಡಾವನ್ನು ಸಿದ್ಧ ಮಾಡಿರಲಾಗುತ್ತದೆ. 1985ರಲ್ಲಿ ರೊನಾಲ್ಡ್ ರೀಗನ್ ಅವರು ಎರಡನೇ ಬಾರಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವಾಗ ಇದೇ ರೋಟಂಡಾ ಒಳಾಂಗಣದಲ್ಲಿ ಕಾರ್ಯಕ್ರಮ ನಡೆದಿತ್ತು. ವಿಪರೀತ ಚಳಿಯು ಅದಕ್ಕೆ ಕಾರಣ. ಈ ಬಾರಿಯೂ ವಾಷಿಂಗ್ಟನ್ನಲ್ಲಿ ಮೈನಸ್ 6ರಷ್ಟು ಕೊರೆಯುವ ಚಳಿ ಇದೆ. ಹೀಗಾಗಿ, ಕ್ಯಾಪಿಟಲ್ ರೋಟಂಡಾದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲು ನಿಶ್ಚಯಿಸಲಾಗಿದೆ.
ಡೊನಾಲ್ಡ್ ಟ್ರಂಪ್ ಅವರು ಈಸ್ಟರ್ನ್ ಟೈಮ್ ಪ್ರಕಾರ ಭಾನುವಾರ (ಜ. 19) ಮಧ್ಯಾಹ್ನ 12 ಗಂಟೆಗೆ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ. ಈಸ್ಟರ್ನ್ ಟೈಮ್ ಎಂಬುದು ಅಮೆರಿಕದ ಪೂರ್ವ ಕರಾವಳಿ ಭಾಗದ ಪ್ರದೇಶಗಳು ಹೊಂದಿರುವ ಸ್ಟ್ಯಾಂಡರ್ಡ್ ಟೈಮ್ ಆಗಿದೆ. ಭಾರತೀಯ ಕಾಲಮಾನದ ಪ್ರಕಾರ, ಸೋಮವಾರ (ಜ. 20) ರಾತ್ರಿ 10:30ಕ್ಕೆ ಈ ಪದಗ್ರಹಣ ಇರುತ್ತದೆ.
ಇದನ್ನೂ ಓದಿ: ಭಾರತೀಯ ಉದ್ಯಮ ಪ್ರತಿನಿಧಿಗಳು, ಗಣ್ಯರ ಜತೆ ಎಲಾನ್ ಮಸ್ಕ್ ಸಂವಾದ: ಏನೇನು ನಡೀತು ಚರ್ಚೆ?
ಭಾರತದಲ್ಲಿ ರಾಷ್ಟ್ರಪತಿಗಳಿಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳು ಪ್ರತಿಜ್ಞಾ ವಿಧಿ ನೀಡುತ್ತಾರೆ. ಪ್ರಧಾನಿಗಳಿಗೆ ರಾಷ್ಟ್ರಪತಿಗಳಿಂದ ಪ್ರತಿಜ್ಞಾ ವಿಧಿ ನೀಡಲಾಗುತ್ತದೆ. ಅಮೆರಿಕದಲ್ಲೂ ಅಧ್ಯಕ್ಷರಿಗೆ ಅಲ್ಲಿನ ಮುಖ್ಯ ನ್ಯಾಯಮೂರ್ತಿಗಳು ಪ್ರಮಾಣ ವಚನ ಬೋಧಿಸುತ್ತಾರೆ. ಮುಖ್ಯ ನ್ಯಾಯಮೂರ್ತಿಗಳಾದ ಜಾನ್ ರಾಬರ್ಟ್ಸ್ ಅವರಿಂದ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ತಮ್ಮ ತಾಯಿ ತಮಗೆ ನೀಡಿದ್ದ ಕೌಟುಂಬಿಕ ಬೈಬಲ್ ಮೇಲೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಗೆಯೇ, 1861ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷರಾಗಿ ಅಬ್ರಹಾಂ ಲಿಂಕನ್ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದ ಬೈಬಲ್ ಮೇಲೂ ಟ್ರಂಪ್ ನಾಳೆ ಪ್ರಮಾಣ ಮಾಡಲಿದ್ದಾರೆ.
ಚೀನಾ ಅಧ್ಯಕ್ಷರು ಸೇರಿದಂತೆ ಹಲವು ಪ್ರಮುಖ ಜಾಗತಿಕ ರಾಜಕೀಯ ನಾಯಕರಿಗೆ ಡೊನಾಲ್ಡ್ ಟ್ರಂಪ್ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿದೆ. ಭಾರತದಿಂದ ವಿದೇಶಾಂಗ ಸಚಿವ ಎ ಜೈಶಂಕರ್ ಹೋಗುತ್ತಿದ್ದಾರೆ. ನರೇಂದ್ರ ಮೋದಿ ಅವರಿಗೆ ಆಹ್ವಾನ ಹೋಗಿದೆಯೋ ಇಲ್ಲವೋ ಎಂಬ ಮಾಹಿತಿ ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ಭಾರತವನ್ನು ಪ್ರತಿನಿಧಿಸಿ ಜೈಶಂಕರ್ ಅವರು ವಾಷಿಂಗ್ಟನ್ಗೆ ತೆರಳಿದ್ದಾರೆ.
ಇದನ್ನೂ ಓದಿ: ಅಮೆರಿಕದ ಶ್ವೇತಭವನದ ಮೇಲೆ ದಾಳಿಗೆ ಯತ್ನಿಸಿದ್ದ ಭಾರತ ಮೂಲದ ಯುವಕನಿಗೆ 8 ವರ್ಷ ಜೈಲು
ಇಟಲಿ ಪ್ರಧಾನಿ, ಚೀನಾ ಅಧ್ಯಕ್ಷ ಸೇರಿದಂತೆ ಹಲವು ವಿಶ್ವನಾಯಕರು ಕಾರ್ಯಕ್ರಮದಲ್ಲಿ ಇರಲಿದ್ದಾರೆ. ಇಲಾನ್ ಮಸ್ಕ್, ಮಾರ್ಕ್ ಜುಕರ್ಬರ್ಗ್, ಮುಕೇಶ್ ಅಂಬಾನಿ ಮೊದಲಾದ ದಿಗ್ಗಜ ಉದ್ಯಮಿಗಳೂ ಉಪಸ್ಥಿತರಿರಲಿದ್ದಾರೆ.
ಜನವರಿ 19, ಭಾನುವಾರ:
ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ; ರಷ್ಯಾ ಸೇನೆಯಲ್ಲಿ ಹೋರಾಡುತ್ತಿದ್ದ 12 ಭಾರತೀಯರ ಸಾವು, 16 ಜನ ನಾಪತ್ತೆ
ಜನವರಿ 21, ಮಂಗಳವಾರ: ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ವಾಷಿಂಗ್ಟನ್ ನ್ಯಾಷನಲ್ ಕೆಥೆಡ್ರಾಲ್ನಲ್ಲಿ ನಡೆಯುವ ನ್ಯಾಷನಲ್ ಪ್ರೇಯರ್ ಸರ್ವಿಸ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮದ ಸಮಾಪನೆಯಾಗುತ್ತದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ