AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ‘ನೋ ಕಿಂಗ್ಸ್’ ಪ್ರತಿಭಟನೆ; ‘ಕಿರೀಟ’ ತೊಟ್ಟು ‘ಕಕ್ಕಸ್ಸು’ ಎರಚುತ್ತಿರುವ ಡೊನಾಲ್ಡ್ ಟ್ರಂಪ್

Donald Trump post AI generated Videos trolling 'No Kings' protesters: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ವಾಧಿಕಾರಿ ಧೋರಣೆಯ ನೀತಿಗಳನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿವೆ. ಅಮೆರಿಕದ ಎಲ್ಲಾ 50 ರಾಜ್ಯಗಳಲ್ಲೂ ಶನಿವಾರ ‘ನೋ ಕಿಂಗ್ಸ್’ ಪ್ರತಿಭಟನಾ ಮೆರವಣಿಗೆಗಳು ನಡೆದಿವೆ. ಪ್ರತಿಭಟನಾಕಾರರ ಮೇಲೆ ‘ಕಕ್ಕಸ್ಸು’ ಎರಚುತ್ತಿರುವ ಎಐ ಸೃಷ್ಟಿತ ವಿಡಿಯೋಗಳನ್ನು ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿ ಅಣಕಿಸಿದ್ದಾರೆ.

ಅಮೆರಿಕದಲ್ಲಿ ‘ನೋ ಕಿಂಗ್ಸ್’ ಪ್ರತಿಭಟನೆ; ‘ಕಿರೀಟ’ ತೊಟ್ಟು ‘ಕಕ್ಕಸ್ಸು’ ಎರಚುತ್ತಿರುವ ಡೊನಾಲ್ಡ್ ಟ್ರಂಪ್
ಎಐ ಸೃಷ್ಟಿತ ಇಮೇಜ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 19, 2025 | 3:59 PM

Share

ವಾಷಿಂಗ್ಟನ್, ಅಕ್ಟೋಬರ್ 19: ಅಮೆರಿಕ ದೇಶದ ಎಲ್ಲಾ 50 ರಾಜ್ಯಗಳಲ್ಲೂ ನಡೆಯುತ್ತಿರುವ ‘ನೋ ಕಿಂಗ್ಸ್’ ಪ್ರತಿಭಟನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಪಹಾಸ್ಯ ಮಾಡುವ ರೀತಿಯಲ್ಲಿ ಎಐ ಸೃಷ್ಟಿತ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಪೋಸ್ಟ್ ಮಾಡಿದ್ದಾರೆ. ನಿನ್ನೆ ಶನಿವಾರ ಅಮೆರಿಕದ ಎಲ್ಲಾ ರಾಜ್ಯಗಳಲ್ಲೂ ಭಾರೀ ಸಂಖ್ಯೆಯಲ್ಲಿ ಜನರು ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರ ಅಂದಾಜು ಪ್ರಕಾರ 70 ಲಕ್ಷ ಜನರು ದೇಶಾದ್ಯಂತದ ಪ್ರತಿಭಟನೆಯಲ್ಲಿ ಬಾಗಿಯಾಗಿದ್ದರಂತೆ.

‘ನೋ ಕಿಂಗ್ಸ್’ ಪ್ರತಿಭಟನೆ ಯಾಕೆ?

ಆಮದು ಸುಂಕ ಹೇರಿಕೆ, ವಲಸಿಗರನ್ನು ಹತ್ತಿಕ್ಕುವುದು ಇತ್ಯಾದಿ ಡೊನಾಲ್ಡ್ ಟ್ರಂಪ್ ಅವರ ವಿವಿಧ ನೀತಿಗಳನ್ನು ಜನರು ಟೀಕಿಸುತ್ತಿದ್ದಾರೆ. ಅವರ ಆಡಳಿತವು ರಾಜರ ರೀತಿಯಲ್ಲಿ ನಿರಂಕುಶ ಪ್ರಭುತ್ವವಾಗಿ ಮಾರ್ಪಾಡುಗೊಂಡಿದೆ ಎಂದು ಆರೋಪಿಸಿ ಪ್ರತಿಭಟನೆಗಳು ನಡೆದಿವೆ. ಹೀಗಾಗಿ, ‘ನೋ ಕಿಂಗ್ಸ್’ (ರಾಜ ಅಲ್ಲ) ಎಂದು ಪ್ರತಿಭಟನೆ ಮಾಡಲಾಗಿದೆ. ನ್ಯೂಯಾರ್ಕ್​ನ ಟೈಮ್ಸ್ ಸ್ಕ್ವಯರ್​ನಲ್ಲಿ ಪ್ರತಿಭಟನಾಕಾರರೇ ತುಂಬಿಹೋಗಿದ್ದರು. ಬೋಸ್ಟಾನ್, ಫಿಲಡೆಲ್ಫಿಯಾ, ಅಟ್ಲಾಂಟಾ, ಡೆನ್ವರ್, ಚಿಕಾಗೋ, ಸಿಯಾಟಲ್ ಮೊದಲಾದ ನಗರಗಳಲ್ಲೂ ಜನರು ಅಮೆರಿಕ ಅಧ್ಯಕ್ಷರ ವಿರುದ್ಧದ ಪ್ರತಿಭಟನೆಗೆ ಸ್ಪಂದಿಸಿದ್ದಾರೆ.

ಇದನ್ನೂ ಓದಿ: ನಿನ್ನೆ ಪ್ರಧಾನಿ ಮೋದಿ- ಟ್ರಂಪ್ ನಡುವೆ ಫೋನ್ ಮಾತುಕತೆ ನಡೆದಿಲ್ಲ; ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಭಾರತ ಸ್ಪಷ್ಟನೆ

ಕಕ್ಕಸ್ಸು ಎರಚುವ ಎಐ ಚಿತ್ರ: ಇದು ಟ್ರಂಪ್ ಉತ್ತರ

‘ನೋ ಕಿಂಗ್ಸ್’ ಪ್ರತಿಭಟನೆಗೆ ಪ್ರತಿಯಾಗಿ ಡೊನಾಲ್ಡ್ ಟ್ರಂಪ್ ಅವರು ಅಣಕಿಸುವ ವಿವಿಧ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ರಾಜನಂತೆ ಕಿರೀಟ ತೊಟ್ಟು ಫೈಟರ್ ಜೆಟ್​ನಲ್ಲಿ ಕೂತು ಮೇಲಿನಿಂದ ಕಕ್ಕಸ್ಸನ್ನು ಪ್ರತಿಭಟನಾಕಾರರ ಮೇಲೆ ಎರಚಿ ಹೋಗುವ ಎಐ ಸೃಷ್ಟಿದ ದೃಶ್ಯದ ಒಂದು ವಿಡಿಯೋ ಇದೆ. ಇದನ್ನು ಟ್ರಂಪ್ ತಮ್ಮ ಟ್​ರೂತ್ ಸೋಷಿಯಲ್ ಅಕೌಂಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರತಿಭಟನೆಯ ಪ್ರಮುಖ ಮುಖಗಳಲ್ಲಿ ಒಬ್ಬರಾಗಿರುವ ಹ್ಯಾರಿ ಸಿಸ್ಸನ್ ಮೇಲೆ ಕಕ್ಕಸ್ಸು ಬೀಳುತ್ತಿರುವ ದೃಶ್ಯ ಇದೆ.

ಡೊನಾಲ್ಡ್ ಟ್ರಂಪ್ ಅವರ ಟ್ರೂತ್ ಸೋಷಿಯಲ್​ನಲ್ಲಿ ಪೋಸ್ಟ್ ಆದ ವಿಡಿಯೋ

‘ಅವರು ನನ್ನನ್ನು ರಾಜ ಎಂದು ಕರೆಯುತ್ತಿದ್ದಾರೆ. ಆದರೆ, ನಾನು ರಾಜ ಅಲ್ಲ’ ಎಂದು ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ಈ ಪ್ರತಿಭಟನೆಗಳ ಹಿಂದಿರುವ ಡೆಮಾಕ್ರಾಟ್ ಪಕ್ಷವನ್ನೂ ಟೀಕಿಸಿದ್ದಾರೆ. ಈ ಡೆಮಾಕ್ರಾಟ್​ನವರು ಸರ್ಕಾರದಿಂದ ಖಾಯಂ ಆಗಿ ಹೊರಗುಳಿದರೆ, ಅವರ ಕಲ್ಯಾಣ ಯೋಜನೆಗಳನ್ನು ಅಡ್ಡಡ್ಡ ಕತ್ತರಿಸುತ್ತೇವೆ ಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್​​ಗೆ ನೊಬೆಲ್​​​​ ಪ್ರಶಸ್ತಿ ಗ್ಯಾರಂಟಿ, ಪಾಕ್-ಅಫ್ಘಾನ್ ನಡುವೆ ಮಧ್ಯಸ್ಥಿಕೆಗೆ ಮುಂದಾದ ಅಮೆರಿಕ ಅಧ್ಯಕ್ಷ

ಹಾಗೆಯೇ, ಮತ್ತೊಂದು ಎಐ ವಿಡಿಯೋದಲ್ಲಿ ಡೊನಾಲ್ಡ್ ಕಿರೀಟ ಧರಿಸುತ್ತಿದ್ದು, ವಿಪಕ್ಷಗಳ ಮುಖಂಡರಾದ ನ್ಯಾನ್ಸಿ ಪೆಲೋಸಿ ಮತ್ತಿತರರು ಮಂಡಿಯೂರುತ್ತಿರುವುದು ಈ ದೃಶ್ಯಗಳಿವೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!