ಅಮೆರಿಕ ಸರ್ಕಾರದಿಂದ ಎಲಾನ್ ಮಸ್ಕ್​ ನಿರ್ಗಮನ, ಅಧ್ಯಕ್ಷ ಟ್ರಂಪ್ ಹೇಳಿದ್ದೇನು?

ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರು.ಆದರೆ, ಈಗ ಇಬ್ಬರೂ ಬೇರೆಯಾಗಿದ್ದಾರೆ.ಮಸ್ಕ್ ಟ್ರಂಪ್ ಸರ್ಕಾರದ ಸರ್ಕಾರಿ ದಕ್ಷತೆ ಇಲಾಖೆ (DOGE) ತಂಡದಿಂದ ದೂರ ಸರಿದರು.ಇದು ಬಹುಶಃ ಟ್ರಂಪ್ ಮತ್ತು ಮಸ್ಕ್ ನಡುವಿನ ಬಿರುಕಿನ ಕಡೆಗೆ ಸೂಚಿಸುತ್ತದೆ.ಬಹು ಟ್ರಿಲಿಯನ್ ಡಾಲರ್ ತೆರಿಗೆ ವಿನಾಯಿತಿಗಳು, ರಕ್ಷಣಾ ವೆಚ್ಚದಲ್ಲಿ ಭಾರಿ ಹೆಚ್ಚಳ ಮತ್ತು ವಲಸೆ ನಿಯಂತ್ರಣ ಕ್ರಮಗಳನ್ನು ಒಳಗೊಂಡಿರುವ ಒನ್ ಬಿಗ್ ಬ್ಯೂಟಿಫುಲ್ ಬಿಲ್ ಆಕ್ಟ್ ಎಂಬ ಆರ್ಥಿಕ ಮಸೂದೆಯನ್ನು ಪರಿಚಯಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದು ಸರ್ಕಾರಿ ವೆಚ್ಚವನ್ನು ಹೆಚ್ಚಿಸುವ ಮಸೂದೆ. ಈ ಮಸೂದೆಗೆ ಸಂಬಂಧಿಸಿದಂತೆ, ಎಲಾನ್ ಮಸ್ಕ್ ಈ ಮಸೂದೆಯು ಸರ್ಕಾರದ ಕೊರತೆಯನ್ನು ಕಡಿಮೆ ಮಾಡುವುದಿಲ್ಲ ಆದರೆ ಅದನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಿದ್ದರು.

ಅಮೆರಿಕ ಸರ್ಕಾರದಿಂದ ಎಲಾನ್ ಮಸ್ಕ್​ ನಿರ್ಗಮನ, ಅಧ್ಯಕ್ಷ ಟ್ರಂಪ್ ಹೇಳಿದ್ದೇನು?
ಡೊನಾಲ್ಡ್​ ಟ್ರಂಪ್, ಮಸ್ಕ್​

Updated on: May 30, 2025 | 7:56 AM

ವಾಷಿಂಗ್ಟನ್, ಮೇ 30: ಅಮೆರಿಕ ಸರ್ಕಾರದ  ದಕ್ಷತೆ ಇಲಾಖೆ(DOGE) ಮುಖ್ಯಸ್ಥ ಸ್ಥಾನದಿಂದ ಎಲಾನ್ ಮಸ್ಕ್​ ಕೆಳಗಿಳಿದಿದ್ದಾರೆ. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಪ್ರತಿಕ್ರಿಯಿಸಿದ್ದಾರೆ. ಡೊನಾಲ್ಡ್​ ಟ್ರಂಪ್ ಮಾತನಾಡಿ‘‘ ನಮ್ಮ ಆಡಳಿತದಲ್ಲಿ ಎಲಾನ್ ಮಸ್ಕ್​ ಅವರ ಕೊನೆಯ ದಿನವಾಗಿದ್ದರೂ, ಅವರು ಯಾವಾಗಲೂ ನಮ್ಮೊಂದಿಗೆ ಇರಲಿದ್ದಾರೆ’’ ಎಂದು ಹೇಳಿದ್ದಾರೆ.

ನಾಳೆ ಮಧ್ಯಾಹ್ನ 1.30ಕ್ಕೆ ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ವ್ಯಾಪಕ ಪ್ರತಿಭಟನೆಗಳ ನಡುವೆ ಮಸ್ಕ್​ ಟ್ರಂಪ್ ಆಡಳಿತದಿಂದ ನಿರ್ಗಮಿಸಿದ್ದಾರೆ. ಸರ್ಕಾರದ ವ್ಯರ್ಥ ಖರ್ಚು ಕಡಿಮೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ಟ್ರಂಪ್ ಅವರ ಮಾರ್ಕ್ಯೂ ತೆರಿಗೆ ಮಸೂದೆಯನ್ನು ಟೀಕಿಸಿದ ಒಂದು ದಿನದ ನಂತರ ಮಸ್ಕ್ ಅವರು ನಿರ್ಗಮಿಸಿದ್ದಾರೆ. ಟ್ರಂಪ್ ಅವರ 2024 ರ ಚುನಾವಣಾ ಪ್ರಚಾರಕ್ಕೆ ಮಸ್ಕ್ ಅತಿದೊಡ್ಡ ದಾನಿಯಾಗಿದ್ದರು.

ಎಲಾನ್ ಮಸ್ಕ್ ಅವರು ಅಮೆರಿಕ ಸರ್ಕಾರದಿಂದ ನಿರ್ಗಮಿಸಿದ ಹಿಂದಿನ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ತೆರಿಗೆ ಬಿಲ್‌ಗೆ ಸಂಬಂಧಿಸಿ ಉಂಟಾಗಿರುವ ಭಿನ್ನಾಭಿಪ್ರಾಯದಿಂದ ಟ್ರಂಪ್ ಆಡಳಿತವನ್ನು ತೊರೆಯಲು ಮಸ್ಕ್ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಯಕ್ಕಿಂತ ಖರ್ಚು ಹೆಚ್ಚುವುದು ಡಿಒಜಿಇ ದಕ್ಷತೆಯ ಮೇಲೆ ಪರಿಣಾಮ ಬೀರಲಿದ್ದು, ದುರ್ಬಲಗೊಳಿಸಲಿದೆ ಎಂದು ಟ್ರಂಪ್ ತೀರ್ಮಾನದ ವಿರುದ್ಧ ಮಸ್ಕ್ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

DOGE (ಸರ್ಕಾರಿ ದಕ್ಷತೆ ಇಲಾಖೆ) ಎಲಾನ್ ಮಸ್ಕ್ ನೇತೃತ್ವದ ಇಲಾಖೆಯಾಗಿದ್ದು, ಅದು ಸರ್ಕಾರಿ ವೆಚ್ಚವನ್ನು ನಿಯಂತ್ರಿಸುತ್ತಿತ್ತು. ಇದು ನಿಷ್ಪರಿಣಾಮಕಾರಿ ಯೋಜನೆಗಳನ್ನು ಕಡಿತಗೊಳಿಸುವುದು, ವಿದೇಶಿ ನೆರವನ್ನು ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಪ್ರಸಾರ ನಿಧಿಯನ್ನು ಸಮತೋಲನಗೊಳಿಸುವ ಗುರಿಯನ್ನು ಹೊಂದಿತ್ತು. ಆದಾಗ್ಯೂ, ಟ್ರಂಪ್‌ರ ಒನ್ ಬಿಗ್ ಬ್ಯೂಟಿಫುಲ್ ಬಿಲ್ ಆಕ್ಟ್ DOGE ನಿರ್ದೇಶನಕ್ಕೆ ವಿರುದ್ಧವಾಗಿದೆ ಎಂಬುದು ಮಸ್ಕ್​ ವಾದ.

ಎರಡನೇ ಅವಧಿಗೆ ಅಮೆರಿಕದ ಚುಕ್ಕಾಣಿ ಹಿಡಿದ ಡೊನಾಲ್ಡ್ ಟ್ರಂಪ್, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ್ದ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಅವರನ್ನು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ (ಡಿಒಜಿಇ)ಯ ಉಸ್ತುವಾರಿಯಾಗಿ ನೇಮಿಸಿದ್ದರು. ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವುದು ಈ ಇಲಾಖೆಯ ಉದ್ದೇಶವಾಗಿತ್ತು.

ಮತ್ತಷ್ಟು ಓದಿ: Elon Musk: ಡೊನಾಲ್ಡ್​ ಟ್ರಂಪ್ ಆಡಳಿತದಿಂದ ಹೊರ ಬರಲು ಎಲಾನ್ ಮಸ್ಕ್​ ನಿರ್ಧಾರ, ಸ್ನೇಹದಲ್ಲಿ ಬಿರುಕು ಮೂಡಿದ್ದೇಕೆ?

ಸರ್ಕಾರಿ ಇಲಾಖೆಗಳಲ್ಲಿ ವ್ಯರ್ಥ ವೆಚ್ಚವನ್ನು ಕಡಿತಗೊಳಿಸುವುದು, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಮತ್ತು ಫೆಡರಲ್ ಸಂಸ್ಥೆಗಳನ್ನು ಪುನಾರಚಿಸುವುದು DOGE ಮಾಡಬೇಕಾದ ಕೆಲಸಗಳು. ಇದರ ಭಾಗವಾಗಿ, ಸರ್ಕಾರಿ ಇಲಾಖೆಗಳಲ್ಲಿ ಭಾರಿ ಉದ್ಯೋಗ ಕಡಿತಗಳನ್ನು ತೆಗೆದುಕೊಳ್ಳಲಾಗಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರು ಎಲಾನ್​ ಮಸ್ಕ್ ಅವರನ್ನು ತಮ್ಮ ಆಡಳಿತ ವರ್ಗಕ್ಕೆ ಸೇರಿಸಿಕೊಳ್ಳುವುದಾಗಿ ಘೋಷಿಸಿದ್ದರು. ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಮಸ್ಕ್ ಅವರನ್ನು ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥರನ್ನಾಗಿ ನೇಮಿಸಿದರು. ಆ ಸಮಯದಲ್ಲಿ DOGE ಇಲಾಖೆಯು ಯುಎಸ್ ಸರ್ಕಾರಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಲು ಮತ್ತು ಸರ್ಕಾರದ ದಕ್ಷತೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ ಎಂದು ಟ್ರಂಪ್ ಘೋಷಿಸಿದರು.

ತಮ್ಮ ಅಧಿಕಾರದ ಅವಧಿಯಲ್ಲಿ ಮಸ್ಕ್ ಅವರ ನಡವಳಿಕೆ ಶೈಲಿಯು ಡೆಮೋಕ್ರಾಟ್‌ಗಳಿಂದ ಮಾತ್ರವಲ್ಲದೆ ರಿಪಬ್ಲಿಕನ್ನರಿಂದಲೂ ತೀವ್ರ ಟೀಕೆಗೆ ಗುರಿಯಾಯಿತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ