AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Elon Musk: ಇತಿಹಾಸದಲ್ಲೇ ಅತಿಹೆಚ್ಚು ನಷ್ಟ; ಎಲಾನ್ ಮಸ್ಕ್ ಗಿನ್ನೆಲ್ ವಿಶ್ವ ದಾಖಲೆ

ಮಸ್ಕ್ ಅವರ ಸಂಪತ್ತಿನ ನಿವ್ವಳ ಮೌಲ್ಯ 2021ರ ನವೆಂಬರ್​​ನಲ್ಲಿ 320 ಶತಕೋಟಿ ಡಾಲರ್​ ಇದ್ದುದು 2023ರ ಜನವರಿ ವೇಳೆಗೆ 137 ಶತಕೋಟಿ ಡಾಲರ್​​ಗೆ ಇಳಿಕೆಯಾಗಿದೆ. ಟೆಸ್ಲಾದ ಷೇರುಗಳ ವಹಿವಾಟು ಕುಸಿತದಿಂದ ಸಂಪತ್ತು ನಷ್ಟವಾಗಿದೆ ಎಂದು ವರದಿಯಾಗಿದೆ.

Elon Musk: ಇತಿಹಾಸದಲ್ಲೇ ಅತಿಹೆಚ್ಚು ನಷ್ಟ; ಎಲಾನ್ ಮಸ್ಕ್ ಗಿನ್ನೆಲ್ ವಿಶ್ವ ದಾಖಲೆ
ಎಲಾನ್ ಮಸ್ಕ್Image Credit source: google image
TV9 Web
| Updated By: Ganapathi Sharma|

Updated on: Jan 10, 2023 | 6:03 PM

Share

ಟ್ವಿಟರ್​ ಖರೀದಿಸುವ ಮೂಲಕ ಇತ್ತೀಚೆಗೆ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಕೋಟ್ಯಧಿಪತಿ ಉದ್ಯಮಿ, ಟೆಸ್ಲಾ ಮಾಲೀಕ ಎಲಾನ್ ಮಸ್ಕ್ (Elon Musk) ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ವೈಯಕ್ತಿಕ ನಷ್ಟದ ಇತಿಹಾಸದಲ್ಲೇ ಅತಿಹೆಚ್ಚು ನಷ್ಟ ದಾಖಲಿಸುವ ಮೂಲಕ ಅವರು ಗಿನ್ನೆಸ್ ವಿಶ್ವ ದಾಖಲೆ (GWR) ಬರೆದಿದ್ದಾರೆ. ಈ ವಿಚಾರವಾಗಿ ಗಿನ್ನೆಸ್ ವಿಶ್ವ ದಾಖಲೆ ವಿಭಾಗ ಮಾಹಿತಿ ನೀಡಿದೆ. ಫೋರ್ಬ್ಸ್ ಅಂದಾಜಿನ ಪ್ರಕಾರ 2021ರ ನವೆಂಬರ್ ಬಳಿಕ ಮಸ್ಕ್ 182 ಶತಕೋಟಿ ಡಾಲರ್ ಸಂಪತ್ತು ಕಳೆದುಕೊಂಡಿದ್ದಾರೆ. ಇತರ ಮೂಲಗಳ ಪ್ರಕಾರ ಅವರು ಸುಮಾರು 200 ಶತಕೋಟಿ ಡಾಲರ್ ಸಂಪತ್ತು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ‘ಮಸ್ಕ್ ಅವರ ವೈಯಕ್ತಿಕ ನಷ್ಟದ ಮೊತ್ತ ಈ ಹಿಂದಿನ ದಾಖಲೆಯನ್ನು ಮೀರಿದೆ. ಈ ಹಿಂದೆ ಜಪಾನ್​​ನ ಟೆಕ್ ಹೂಡಿಕೆದಾರ ಮಸಯೋಶಿ ಅವರು 2000 ದಲ್ಲಿ 58.6 ಶತಕೋಟಿ ಡಾಲರ್ ಸಂಪತ್ತು ಕಳೆದುಕೊಂಡಿದ್ದರು’ ಎಂದು ಗಿನ್ನೆಸ್ ವಿಶ್ವ ದಾಖಲೆ ಬ್ಲಾಗ್​​ನಲ್ಲಿ ಉಲ್ಲೇಖಿಸಲಾಗಿದೆ.

‘ದಿ ಹಿಲ್’ ವರದಿ ಪ್ರಕಾರ, ಮಸ್ಕ್ ಅವರ ಸಂಪತ್ತಿನ ನಿವ್ವಳ ಮೌಲ್ಯ 2021ರ ನವೆಂಬರ್​​ನಲ್ಲಿ 320 ಶತಕೋಟಿ ಡಾಲರ್​ ಇದ್ದುದು 2023ರ ಜನವರಿ ವೇಳೆಗೆ 137 ಶತಕೋಟಿ ಡಾಲರ್​​ಗೆ ಇಳಿಕೆಯಾಗಿದೆ. ಟೆಸ್ಲಾದ ಷೇರುಗಳ ವಹಿವಾಟು ಕುಸಿತದಿಂದ ಸಂಪತ್ತು ನಷ್ಟವಾಗಿದೆ. ಟ್ವಿಟರ್​ ಅನ್ನು ಖರೀದಿಸುವುದಕ್ಕಾಗಿ ಮಸ್ಕ್ ಅವರು ಟೆಸ್ಲಾದ 7 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ನವೆಂಬರ್​ನಲ್ಲಿ ಮತ್ತೆ 4 ಶತಕೋಟಿ ಡಾಲರ್ ಮೌಲ್ಯದ ಷೇರು ಮಾರಾಟ ಮಾಡಿದ್ದರು. ಕಳೆದ ತಿಂಗಳು ಅವರು 3.58 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಇದರೊಂದಿಗೆ ಏಪ್ರಿಲ್​ ತಿಂಗಳ ಬಳಿಕ 23 ಶತಕೋಟಿ ಡಾಲರ್​ಗೂ ಹೆಚ್ಚು ಮೌಲ್ಯದ ಷೇರು ಮಾರಾಟ ಮಾಡಿದಂತಾಗಿದೆ.

ಇದನ್ನೂ ಓದಿ: World’s Richest Man 2022: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ; ಎಲಾನ್ ಮಸ್ಕ್​ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್

ಸಂಪತ್ತು ನಷ್ಟದಿಂದಾಗಿ ಮಸ್ಕ್ ಇತ್ತೀಚೆಗಷ್ಟೇ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟದಿಂದ ಕೆಳಗಿಳಿಯಬೇಕಾಗಿ ಬಂದಿತ್ತು. 185.4 ಶತಕೋಟಿ ಡಾಲರ್ ವೈಯಕ್ತಿಕ ಸಂಪತ್ತು ಹೊಂದುವ ಮೂಲಕ ಎಲ್​ವಿಎಂಎಚ್​ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟಕ್ಕೆ ಪಾತ್ರರಾಗಿದ್ದರು ಎಂದು ಗಿನ್ನೆಸ್ ವಿಶ್ವದಾಖಲೆ ಬ್ಲಾಗ್ ತಿಳಿಸಿದೆ.

ಮಸ್ಕ್ ಅವರು ಟ್ವಿಟರ್ ಖರೀದಿಸಿದ ಬೆನ್ನಲ್ಲೇ ಮೈಕ್ರೋ ಬ್ಲಾಗಿಂಗ್ ತಾಣದಲ್ಲಿಯೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಉದ್ಯೋಗ ಕಡಿತ, ಆದಾಯ ಕುಸಿತ ಸೇರಿದಂತೆ ಅನೇಕ ಸಮಸ್ಯೆಗಳನ್ನು ಪ್ರಸ್ತುತ ಟ್ವಿಟರ್ ಎದುರಿಸುತ್ತಿದೆ. ಅತ್ತ ಟೆಸ್ಲಾದ ಷೇರು ಮಾರಾಟ ಮಾಡಿ ಟ್ವಿಟರ್ ಒಡೆತನ ಗಳಿಸಿರುವ ಮಸ್ಕ್ ಸಂಪತ್ತು ಇದೀಗ ಮಂಜಿನಂತೆ ಕರಗುತ್ತಿದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!