ನ್ಯಾಟೋ ಪ್ರದೇಶದ ಪ್ರತಿ ಇಂಚನ್ನೂ ನಾವು ಕಾಪಾಡಿಕೊಳ್ಳುತ್ತೇವೆ; ಪುಟಿನ್ಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಕೆ
ನ್ಯಾಟೋ ಪ್ರದೇಶದ ಪ್ರತಿಯೊಂದು ಇಂಚನ್ನೂ ರಕ್ಷಿಸಲು ಅಮೆರಿಕ ಸಂಪೂರ್ಣವಾಗಿ ಸಿದ್ಧವಾಗಿದೆ. ಪುಟಿನ್ ಅವರೇ, ನಾನು ಹೇಳುವುದನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ, ನಾವು ಪ್ರತಿ ಇಂಚನ್ನೂ ಕಾಪಾಡಿಕೊಳ್ಳುತ್ತೇವೆ ಎಂದು ಜೋ ಬಿಡೆನ್ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ: 4 ಉಕ್ರೇನಿಯನ್ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ರಷ್ಯಾ (Russia) ನಿನ್ನೆ ಘೋಷಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ (Joe Biden) ಯುನೈಟೆಡ್ ಸ್ಟೇಟ್ಸ್ ಮತ್ತು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (NATO) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರಿಗೆ ಭಯಪಡುವುದಿಲ್ಲ. ನ್ಯಾಟೋ ಒಕ್ಕೂಟವು ತನ್ನ ಪ್ರದೇಶದ ಪ್ರತಿ ಇಂಚನ್ನು ಕೂಡ ರಕ್ಷಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ರಷ್ಯಾದ ಅಧ್ಯಕ್ಷ ಪುಟಿನ್ ಅವರ ಬೇಜವಾಬ್ದಾರಿ ಭಾಷೆ ಮತ್ತು ಬೆದರಿಕೆಗಳಿಗೆ ಅಮೆರಿಕಾ ಅಥವಾ ಅದರ ಮಿತ್ರರಾಷ್ಟ್ರಗಳು ಹೆದರುವುದಿಲ್ಲ. ನಮ್ಮ NATO ಮಿತ್ರರಾಷ್ಟ್ರಗಳೊಂದಿಗೆ, ನ್ಯಾಟೋ ಪ್ರದೇಶದ ಪ್ರತಿಯೊಂದು ಇಂಚನ್ನೂ ರಕ್ಷಿಸಲು ಅಮೆರಿಕ ಸಂಪೂರ್ಣವಾಗಿ ಸಿದ್ಧವಾಗಿದೆ. ಪುಟಿನ್ ಅವರೇ, ನಾನು ಹೇಳುವುದನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ, ನಾವು ಪ್ರತಿ ಇಂಚನ್ನೂ ಕಾಪಾಡಿಕೊಳ್ಳುತ್ತೇವೆ ಎಂದು ಜೋ ಬಿಡೆನ್ ಎಚ್ಚರಿಕೆ ನೀಡಿದ್ದಾರೆ.
#WATCH | America &its allies aren’t going to be intimidated by Putin &his reckless words &threats. Putin’s actions are a sign he’s struggling… He can’t seize his neighbour’s territory & get away with it. We’ll continue to provide military equipment to Ukraine: US Pres Joe Biden pic.twitter.com/dgjDbBXHDP
— ANI (@ANI) September 30, 2022
ಉಕ್ರೇನ್‌ನ ಕೆಲವು ಭಾಗಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಘೋಷಿಸಿರುವ ಪುಟಿನ್ ಅವರ ಕುರಿತು ಮಾತನಾಡಿರುವ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ನ್ಯಾಟೋ ಪ್ರದೇಶಕ್ಕೆ ಯಾವುದೇ ಬೆದರಿಕೆಯನ್ನುಂಟು ಮಾಡದಂತೆ ರಷ್ಯಾಗೆ ಎಚ್ಚರಿಕೆ ನೀಡಿದ್ದಾರೆ. ನ್ಯಾಟೋ ಪ್ರದೇಶದ ಪ್ರತಿಯೊಂದು ಇಂಚನ್ನೂ ರಕ್ಷಿಸಲು ನಮ್ಮ ನ್ಯಾಟೋ ಮಿತ್ರರಾಷ್ಟ್ರಗಳೊಂದಿಗೆ ಅಮೆರಿಕವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅಮೆರಿಕಾದ ಶ್ವೇತಭವನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Ukraine war ಉಕ್ರೇನ್‌ನ 4 ಪ್ರದೇಶ ಅಧಿಕೃತವಾಗಿ ಸ್ವಾಧೀನಪಡಿಸಿಕೊಂಡ ರಷ್ಯಾ
ಪುಟಿನ್ ರಷ್ಯಾದ ಸುತ್ತಮುತ್ತಲಿನ ಪ್ರದೇಶವನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಉಕ್ರೇನ್‌ಗೆ ಮಿಲಿಟರಿ ಉಪಕರಣಗಳನ್ನು ಒದಗಿಸುವುದನ್ನು ಮುಂದುವರಿಸುತ್ತೇವೆ ಎಂದಿರುವ ಜೋ ಬಿಡೆನ್ ಉಕ್ರೇನಿಯನ್ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ರಷ್ಯಾದ ಮೋಸದ ಪ್ರಯತ್ನವನ್ನು ಖಂಡಿಸಿದ್ದಾರೆ. ರಷ್ಯಾದ ಈ ಕ್ರಮಗಳನ್ನು ಖಂಡಿಸಲು ನಾವು ಅಂತಾರಾಷ್ಟ್ರೀಯ ಸಮುದಾಯವನ್ನು ಒಟ್ಟುಗೂಡಿಸುತ್ತೇವೆ. ಉಕ್ರೇನ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಗತ್ಯವಿರುವ ಸಲಕರಣೆಗಳನ್ನು ನಾವು ಒದಗಿಸುತ್ತೇವೆ ಎಂದು ಬಿಡೆನ್ ಹೇಳಿದ್ದಾರೆ.
ಉಕ್ರೇನ್ನಿಂದ ವಶಪಡಿಸಿಕೊಂಡ 4 ಪ್ರದೇಶಗಳನ್ನು ಅಧಿಕೃತವಾಗಿ ಸ್ವಾಧೀನಪಡಿಸಿಕೊಂಡಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಘೋಷಿಸಿದ್ದರು. ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಝಪೊರಿಝಿಯಾ ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ಪಶ್ಚಿಮದಲ್ಲಿ ವ್ಯಾಪಕವಾಗಿ ಖಂಡಿಸಲಾಗಿತ್ತು.
ಇದನ್ನೂ ಓದಿ: Vladimir Putin: ಮತ್ತೆ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿಯ ಸುಳಿವು ನೀಡಿದ ರಷ್ಯಾ ಅಧ್ಯಕ್ಷ ಪುಟಿನ್
ಜಪೋರಿಝಿಯಾದಲ್ಲಿ ಶುಕ್ರವಾರ ನಡೆದ ರಷ್ಯಾದ ಕ್ಷಿಪಣಿ ದಾಳಿಯ ಸಂದರ್ಭದಲ್ಲಿ ಉಕ್ರೇನಿಯನ್ ನಾಗರಿಕರನ್ನು ಹೊತ್ತೊಯ್ಯುತ್ತಿದ್ದ ಮಾನವೀಯ ವಾಹನಗಳ ಬೆಂಗಾವಲು ಢಿಕ್ಕಿ ಹೊಡೆದು 23 ಜನರು ಸಾವನ್ನಪ್ಪಿದ್ದರು. ಇದರಲ್ಲಿ 28 ಮಂದಿ ಗಾಯಗೊಂಡಿದ್ದರು. ಉಕ್ರೇನ್‌ನೊಂದಿಗಿನ 7 ತಿಂಗಳ ಸಂಘರ್ಷದ ಸಮಯದಲ್ಲಿ 4 ಪ್ರದೇಶಗಳನ್ನು ಮಾಸ್ಕೋದ ಪಡೆಗಳು ಭಾಗಶಃ ವಶಪಡಿಸಿಕೊಂಡಿದ್ದವು. 4 ಮಾಸ್ಕೋ ಆಕ್ರಮಿತ ಉಕ್ರೇನಿಯನ್ ಪ್ರದೇಶಗಳ ಜನರು ಇನ್ನು ಮುಂದೆ ಶಾಶ್ವತವಾಗಿ ನಮ್ಮ ನಾಗರಿಕರು ಎಂದು ಪುಟಿನ್ ಹೇಳಿದ್ದರು.