Shia commander: ಶಿಯಾ ಕಮಾಂಡರ್ನಿಂದ ಸುನ್ನಿ ಯುವತಿ ಮೇಲೆ ಅತ್ಯಾಚಾರ: ಪೊಲೀಸರಿಂದ ಗುಂಡಿನ ದಾಳಿ, 36 ಜನ ದುರ್ಮರಣ
ಗುಂಡಿನ ದಾಳಿಯಲ್ಲಿ 36 ಜನ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಕಮಾಂಡರ್ ಇಬ್ರಾಹಿಂ ಖುಚಾಕಜಾಯಿ ಎಂಬಾತ 15 ವರ್ಷದ ಬಾಲಕಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರವೆಸಗಿದ್ದ.
ಇರಾನ್ನಲ್ಲಿ ಶಿಯಾ ಕಮಾಂಡರ್ನಿಂದ (Shia commander) ಸುನ್ನಿ ಯುವತಿ ಮೇಲೆ ಅತ್ಯಾಚಾರ ನಡೆದಿದ್ದು, ಅತ್ಯಾಚಾರ ಖಂಡಿಸಿ ಸುನ್ನಿ ಸಮುದಾಯ (Sunni Islam) ಬೃಹತ್ ಪ್ರತಿಭಟನೆ (mob violence) ನಡೆದಿದೆ. ಸರ್ಕಾರಿ ಕಚೇರಿ, ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರಿಂದ ಫೈರಿಂಗ್ ನಡೆದಿದೆ. ಪೊಲೀಸರ ಗುಂಡಿನ ದಾಳಿಗೆ (police firing) 36 ಜನರು ಆಹುತಿಯಾಗಿದ್ದಾರೆ.
ಗುಂಡಿನ ದಾಳಿಯಲ್ಲಿ 36 ಜನ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಕಮಾಂಡರ್ ಇಬ್ರಾಹಿಂ ಖುಚಾಕಜಾಯಿ ಎಂಬಾತ 15 ವರ್ಷದ ಬಾಲಕಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರವೆಸಗಿದ್ದ.
Published On - 4:57 pm, Sat, 1 October 22