ವೈದ್ಯರ ಸಲಹೆ ಪಡೆಯದೇ ಈ ಮಾತ್ರೆ ಬಳಸಬೇಡಿ, ತಜ್ಞರ ಎಚ್ಚರಿಕೆ!

ವೈದ್ಯರ ಸಲಹೆ ಪಡೆಯದೇ ಈ ಮಾತ್ರೆ ಬಳಸಬೇಡಿ, ತಜ್ಞರ ಎಚ್ಚರಿಕೆ!

ವೈದ್ಯರ ಬಳಿ ಸಲಹೆ ಪಡೆಯದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಿದ್ರೆ ಹೃದಯಾಘಾತ ಸಂಭವಿಸಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿ, ಕೊರೊನಾ ವೈರಸ್​ಗೆ ಈ ಮಾತ್ರೆ ರಾಮಬಾಣ ಎಂದಿದ್ದರು. ಇದೀಗ ಅದು ಹುಸಿಯಾಗಿದೆ.

ಉಲ್ಟಾ ಹೊಡೆದರಾ ಅಧ್ಯಕ್ಷ ಟ್ರಂಪ್..? ದೇಹದಲ್ಲಿ ಕೊರೊನಾ ವೈರಸ್ ಸಾಯಿಸಲು ಬ್ಲೀಚ್ ಇಂಜೆಕ್ಟ್ ಮಾಡಬೇಕು ಅಂತಾ ಟ್ರಂಪ್ ಕೊಟ್ಟ ಹೇಳಿಕೆಗೆ ಸದ್ಯ ಭಾರಿ ವಿವಾದಕ್ಕೆ ಕಾರಣವಾಗಿದೆ. ಇನ್ನು ತಮ್ಮನ್ನು ಟ್ರೋಲ್ ಮಾಡುತ್ತಿರುವ ವಿಚಾರ ತಿಳಿದ ಅಮೆರಿಕ ಅಧ್ಯಕ್ಷರೀಗ, ಉಲ್ಟಾ ಹೊಡೆದಿದ್ದು ಈ ಹೇಳಿಕೆಯನ್ನ ತಮಾಷೆಗೆ ಹೇಳಿದ್ದೆ ಎಂದಿದ್ದಾರೆ.

2 ಲಕ್ಷ ದಾಟಿದ ಸಾವಿನ ಸಂಖ್ಯೆ: ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರಿದಿದ್ದು, ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅಮೆರಿಕದ ಪರಿಸ್ಥಿತಿಯಂತೂ ಮತ್ತಷ್ಟು ಗಂಭೀರವಾಗಿದ್ದು, ನಿನ್ನೆ ಕೂಡ ಒಂದೇ ದಿನಕ್ಕೆ 2000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ಈವರೆಗೆ 54 ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

Published On - 12:52 pm, Sun, 26 April 20

Click on your DTH Provider to Add TV9 Kannada