ಜಪಾನ್ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ದೊಡ್ಡ ಅವಾಂತರಗಳನ್ನೇ ಸೃಷ್ಟಿಸುತ್ತಿದೆ. ಟೋಕಿಯೋದ ಅಟಾಮಿಯಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಸಾಲುಸಾಲು ಮನೆಗಳು ಧ್ವಂಸಗೊಂಡಿವೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ. ಈ ದುರಂತದ ನಂತರ ಸುಮಾರು 19 ಜನರು ಮಣ್ಣಿನಡಿ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಆಡಳಿತ ತಿಳಿಸಿದ್ದಾಗಿಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಜಪಾನ್ನ ಶಿಜೌಕಾ ಪ್ರಾಂತ್ಯದಲ್ಲಿರುವ ಅಟಾಮಿ ಪಟ್ಟಣ ಬಿಸಿನೀರಿನ ಬುಗ್ಗೆಗಳಿಗೆ ಹೆಸರುವಾಸಿ. ಅಟಾಮಿ ಎಂದರೆ ಅರ್ಥವೇ ಬಿಸಿ ಸಾಗರ ಎಂದು. ಈ ಪಟ್ಟಣ ಇಜು ಪೆನಿನ್ಸುಲಾದ ಉತ್ತರದ ತುದಿಯಲ್ಲಿರುವ ಸಗಾಮಿ ಕೊಲ್ಲಿಯಲ್ಲಿ ಭಾಗಶಃ ಮುಳುಗಿರುವ ಜ್ವಾಲಾಮುಖಿ ಕುಂಡದ ಕಡಿದಾದ ಇಳಿಜಾರಿನಲ್ಲಿದೆ. ಸ್ಥಳೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಹೇಳುವ ಪ್ರಕಾರ ಇಂದು ಮುಂಜಾನೆ ಹೊತ್ತಿಗೆ ಅಟಾಮಿಯಲ್ಲಿ ಮಣ್ಣು ಕುಸಿದಿದೆ. ಇದರಿಂದ ಧ್ವಂಸಗೊಂಡ ಮನೆಗಳ ಭಗ್ನಾವಶೇಷಗಳು, ಮಣ್ಣನ್ನು ಒಳಗೊಂಡ ಕಪ್ಪು ಬಣ್ಣದ ನೀರಿನ ಪ್ರವಾಹ ರಸ್ತೆಯ ಮೇಲೆಲ್ಲ ಭಯಂಕರವಾಗಿ ಹರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಸಹಾಯಕತೆಯಿಂದ ಈ ಭೀಕರ ದೃಶ್ಯವನ್ನು ನೋಡಿದ್ದು ಬಿಟ್ಟರೆ ಇನ್ನೇನೂ ಮಾಡಲು ಸಾಧ್ಯವಾಗಲಿಲ್ಲ. ತುಂಬ ಹೆದರಿಕೆಯಾಯಿತು ಎಂದು ಸ್ಥಳೀಯರು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಕಾಣೆಯಾದ 19 ಜನರ ಹುಡುಕಾಟ ನಡೆದಿದೆ. ಇನ್ನುಳಿದವರನ್ನು ರಕ್ಷಣೆ ಮಾಡಲಾಗಿದೆ. ಆ 19 ಮಂದಿ ಬದುಕಿದ್ದಾರೋ..ಇಲ್ಲವೋ ಎಂಬ ಬಗ್ಗೆಯೂ ಅನುಮಾನ ಎಂದು ಶಿಜೌಕಾ ಪ್ರಾಂತದ ಅಧಿಕಾರಿ ತಿಳಿಸಿದ್ದಾರೆ. ಕಳೆದ ವಾರದಿಂದಲೂ ಜಪಾನ್ ಮಳೆಗೆ ತತ್ತರಿಸುತ್ತಿದೆ. ದೇಶದ ನದಿಗಳೆಲ್ಲ ತುಂಬಿ ಹರಿಯುತ್ತಿದ್ದು, ಆತಂಕ ಸೃಷ್ಟಿಸಿವೆ. ದಿನ ಒಂದಲ್ಲ ಒಂದು ಕಡೆ ಮಣ್ಣು ಕುಸಿತದ ವರದಿಯಾಗುತ್ತಿದೆ.
— Chad (@ChadBlue83) July 3, 2021
ಇದನ್ನೂ ಓದಿ: ಚಿಲ್ಲರೆ-ಸಗಟು ವ್ಯಾಪಾರಿಗಳನ್ನು ಎಂಎಸ್ಎಂಇ ವಲಯಕ್ಕೆ ಸೇರಿಸಿದ್ದು ನಮ್ಮ ಸರ್ಕಾರದ ಮೈಲಿಗಲ್ಲು: ಪ್ರಧಾನಿ ಮೋದಿ ಟ್ವೀಟ್
Due to Heavy Rain mudslide swept away a row of houses in Atami town of Japan
Published On - 1:27 pm, Sat, 3 July 21