Earth Hour 2021: ಜಾಗತಿಕವಾಗಿ ಅರ್ಥ್ ಅವರ್ ಆಚರಣೆ; ಇಂದು ರಾತ್ರಿ 8:30ಕ್ಕೆ ಲೈಟ್ ಆಫ್

|

Updated on: Mar 27, 2021 | 3:56 PM

ಯಾವಾಗಲೂ ವಿದ್ಯುದ್ದೀಪಗಳಿಂದ ಝಗಮಗನೇ ಹೊಳೆಯುತ್ತಲೇ ಇರುವ ಪ್ರಸಿದ್ಧ ಸ್ಥಳಗಳು ಸಹ ಇಂದು ಪರಿಸರದ ಮಂತ್ರ ಜಪಿಸುತ್ತವೆ.

Earth Hour 2021: ಜಾಗತಿಕವಾಗಿ ಅರ್ಥ್ ಅವರ್ ಆಚರಣೆ; ಇಂದು ರಾತ್ರಿ 8:30ಕ್ಕೆ ಲೈಟ್ ಆಫ್
2020ರ ಅರ್ಥ್ ಅವರ್​ ಆಚರಣೆ ಮಾಡಿದ್ದ ರಾಷ್ಟ್ರಪತಿ ಭವನ (ಚಿತ್ರಕೃಪೆ: ಪಿಟಿಐ)
Follow us on

ಇಂದು ರಾತ್ರಿ ಬರೋಬ್ಬರಿ 8:30ರಿಂದ 9:30ರವರೆಗೆ ನೀವು ಮನೆಯ ಲೈಟ್​ಗಳನ್ನು ಬಂದ್ ಮಾಡುವುದು ಉತ್ತಮ. ಏಕೆಂದರೆ ಇಂದು (ಮಾರ್ಚ್ 27) ಜಗತ್ತಿನಾದ್ಯಂತ ಜಾಗತಿಕವಾಗಿ ಅರ್ಥ್ ಅವರ್ ಎಂಬ ಪರಿಕಲ್ಪನೆಯನ್ನು ಆಚರಿಸಲಾಗುತ್ತಿದೆ. ಈ ಪ್ರಯುಕ್ತ ರಾತ್ರಿ 8:30ರಿಂದ 9:30ರವರೆಗೆ ಒಂದು ಗಂಟೆಗಳ ಕಾಲ ಸಾರ್ವಜನಿಕರಲ್ಲಿ ಸ್ವಯಂ ಪ್ರೇರಿತವಾಗಿ ಮನೆಯ ದೀಪಗಳನ್ನು ಆರಿಸಲು ಜಾಗೃತಿ ಮೂಡಿಸಲಾಗುತ್ತದೆ. ದಿನೇ ದಿನೇ ಕಳವಳದ ಸಂಗತಿಯಾಗುತ್ತಿರುವ ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನಗಳ ಕುರಿತು ಜಾಗೃತಿ ಮೂಡಿಉವ ಉದ್ದೇಶದಿಂದ ಅರ್ಥ್ ಅವರ್ ಎಂಬ ಆಚರಣೆ ಜಾರಿಗೆ ಬಂದಿದೆ. ಒಂದು ಗಂಟೆಗಳ ಕಾಲ ಮನೆಯ ದೀಪಗಳನ್ನು ಆರಿಸಿ ಹವಾಮಾನ ವೈಪರೀತ್ಯವನ್ನು ತಡೆಗಟ್ಟಲು ವಿಶ್ವದ 190 ದೇಶಗಳ ನಾಗರಿಕರು ಅರ್ಥ್ ಅವರ್ ಆಚರಿಸುತ್ತಾರೆ.

ಈ ವಿಶಿಷ್ಟ ಪರಿಕಲ್ಪನೆ 2007ರಲ್ಲಿ ಆರಂಭವಾಯಿತು. ಸಾಮಾಜಿಕ ಜಾಲತಾಣಗಳ ಮೂಲಕವೇ ವಿಶ್ವದ ಎಲ್ಲ ದೇಶಗಳ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಅರ್ಥ್ ಅವರ್ ಯೊಜನೆಯಡಿ ಮಾಡಲಾಗುತ್ತದೆ. ಅಂದಹಾಗೆ ಅರ್ಥ್ ಅವರ್ ಎಂಬುದು ಮೊದಲು ಆರಂಭವಾದದ್ದು ಆಸ್ಟ್ರೇಲಿಯಾದಲ್ಲಿ. ವರ್ಡ್ ವೈಲ್ಡ್​ಲೈಫ್ ಫಂಡ್ ಎಂಬ ಸಂಸ್ಥೆ ಒಂದು ಗಂಟೆಗಳ ಕಾಲ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ದೀಪ ಆರಿಸುವ ಹೊಸ ಕಲ್ಪನೆಯನ್ನು ಹುಟ್ಟುಹಾಕಿತು. 2007ರಿಂದ ಇಲ್ಲಿಯವರೆಗೂ ಸತತವಾಗಿ ಈ ಜಾಗೃತಿ ಕಾರ್ಯಕ್ರಮ ಅನೂಚಾನವಾಗಿ ಮುಂದುವರೆದಿದೆ.

ಅರ್ಥ್ ಅವರ್ ಪ್ರಯುಕ್ತ ಜಾಗತಿಕವಾಗಿ ಸುಮಾರು 2.2 ಮಿಲಿಯನ್ ಸಾರ್ವಜನಿಕರು ಒಂದು ಗಂಟೆಗಳ ಕಾಲ ದೀಪ ಆರಿಸುತ್ತಾರೆ ಎಂದು ಹೇಳಲಾಗುತ್ತದೆ. ವಿಶ್ವವಿಖ್ಯಾತ ಐಫೆಲ್ ಟವರ್​ನಂತ ಸ್ಥಳಗಳಲ್ಲಿಯೂ ಒಂದು ಗಂಟೆಗಳ ಕಾಲ ದೀಪ ಆರಿಸಲಾಗುತ್ತದೆ. ಯಾವಾಗಲೂ ವಿದ್ಯುದ್ದೀಪಗಳಿಂದ ಝಗಮಗನೇ ಹೊಳೆಯುತ್ತಲೇ ಇರುವ ಪ್ರಸಿದ್ಧ ಸ್ಥಳಗಳು ಸಹ ಪರಿಸರದ ಮಂತ್ರ ಜಪಿಸುತ್ತವೆ.

ಇದನ್ನೂ ಓದಿ: ವಿಮಾನದ ಮೇಲೆ ಸೋನು ಸೂದ್​ಗೆ ವಿಶೇಷ ಗೌರವ! ತಂದೆ-ತಾಯಿಯೇ ಇಲ್ಲ ಎಂದು ಮರುಗಿದ ನಟ

8 ಕೋಟಿ ಕೊಟ್ಟು ಹೊಸ ವಾಹನ ಖರೀದಿಸಿದ ಮಹೇಶ್​ ಬಾಬು; ಏನಿದರ ವಿಶೇಷತೆ?