Solomon Islands Tsunami: ಸೊಲೊಮನ್ ದ್ವೀಪಗಳಲ್ಲಿ 7.3ರ ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ ಘೋಷಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 22, 2022 | 9:45 AM

ಸೊಲೊಮನ್ ದ್ವೀಪಗಳ ಸುತ್ತಮುತ್ತಲ 300 ಕಿಮೀ ವ್ಯಾಪ್ತಿಯಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಕಾಣಿಸಿಕೊಳ್ಳಬಹುದು ಎಂದು ಶಾಂತಸಾಗರದ ಸುನಾಮಿ ಮುನ್ನೆಚ್ಚರಿಕಾ ಕೇಂದ್ರ ಎಚ್ಚರಿಕೆ ನೀಡಿದೆ.

Solomon Islands Tsunami: ಸೊಲೊಮನ್ ದ್ವೀಪಗಳಲ್ಲಿ 7.3ರ ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ ಘೋಷಣೆ
ಸಾಲೊಮನ್ ದ್ವೀಪದಲ್ಲಿ ಭೂಕಂಪ
Follow us on

ಬಾಲಿ: ಸೊಲೊಮನ್ ದ್ವೀಪಗಳಲ್ಲಿ ಮಂಗಳವಾರ (ನ 22) ಮಧ್ಯಾಹ್ನ 1 ಗಂಟೆಗೆ (ಭಾರತೀಯ ಕಾಲಮಾನ ಬೆಳಿಗ್ಗೆ 7 ಗಂಟೆ) ಪ್ರಬಲ ಭೂಕಂಪ ಸಂಭವಿಸಿದ್ದು ಸುನಾಮಿ ಎಚ್ಚರಿಕೆ ರವಾನಿಸಲಾಗಿದೆ. ಭೂ ಮೇಲ್ಮೈಯಿಂದ 15 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ ಹೇಳಿದೆ. ಸೊಲೊಮನ್ ದ್ವೀಪಗಳ ಸುತ್ತಮುತ್ತಲ 300 ಕಿಮೀ ವ್ಯಾಪ್ತಿಯಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಕಾಣಿಸಿಕೊಳ್ಳಬಹುದು ಎಂದು ಶಾಂತಸಾಗರದ ಸುನಾಮಿ ಮುನ್ನೆಚ್ಚರಿಕಾ ಕೇಂದ್ರ (Pacific Tsunami Warning Centre) ಎಚ್ಚರಿಕೆ ನೀಡಿದೆ. ಆಸ್ಟ್ರೇಲಿಯಾದ ಪೂರ್ವ ತೀರದಲ್ಲಿ 3.2 ತೀವ್ರತೆಯ ಭೂಕಂಪವು ಮಂಗಳವಾರ ನಸುಕಿನಲ್ಲಿ ವರದಿಯಾಗಿತ್ತು. ಜನಪ್ರಿಯ ಪ್ರವಾಸಿ ತಾಣವಾಗಿರುವ ಬಾಟೆಮನ್ಸ್​ ಬೇ ಸಮೀಪದ ಸಮುದ್ರ ತೀರದಲ್ಲಿ ಈ ಭೂಕಂಪನದ ಕೇಂದ್ರವಿತ್ತು ಎಂದು ಜಿಯೊಸೈನ್ಸ್ ಆಸ್ಟ್ರೇಲಿಯಾ ಹೇಳಿದೆ. ಈ ಭೂಕಂಪನದ ಕೇಂದ್ರವು ಭೂಗರ್ಭದ 10 ಕಿಮೀ ಆಳದಲ್ಲಿತ್ತು.

ಇಂಡೋನೇಷ್ಯಾದ ಪಶ್ಚಿಮ ಜಾವಾ ನಗರದಲ್ಲಿ ನಿನ್ನೆ ಸಂಭವಿಸಿದ್ದ 5.6 ತೀವ್ರತೆಯ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ. ಇತರ ನೂರಾರು ಮಂದಿ ಗಾಯಗೊಂಡಿದ್ದಾರೆ. ಹೆಚ್ಚಿನವರು ಕಟ್ಟಡಗಳ ಅವಶೇಷಗಳ ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಸಿಯಾಂಜೂರ್ ಆಡಳಿತದ ಮುಖ್ಯಸ್ಥ ಹರ್ಮನ್ ಸುಹೆರ್ಮನ್ ಹೇಳಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯು ಈ ಪ್ರದೇಶದಲ್ಲಿ ಹಲವಾರು ಮನೆಗಳು ಮತ್ತು ಇಸ್ಲಾಮಿಕ್ ವಸತಿ ಶಾಲೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದೆ. ಈ ಬಗ್ಗೆ ಒಂದು ವಿಡಿಯೊ ಸಂದೇಶವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಲಾಗಿದೆ. ಸಿಯಾಂಜೂರ್‌ನಲ್ಲಿ ಭೂಕುಸಿತದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದೆ. ಆದರೆ ಇನ್ನೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವು ಒಬ್ಬ ಮಹಿಳೆ ಮತ್ತು ಮಗುವನ್ನು ಜೀವಂತವಾಗಿ ಸ್ಥಳಾಂತರಿಸಿದ್ದೇವೆ ಎಂದು ಸಿಯಾಂಜೂರ್ ಪೊಲೀಸ್ ಮುಖ್ಯಸ್ಥ ಡೋನಿ ಹೆರ್ಮಾವಾನ್ ಬ್ರಾಡ್‌ಕಾಸ್ಟರ್ ಮೆಟ್ರೋ ಟಿವಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಭೂಕಂಪ, ಜ್ವಾಲಾಮುಖಿ, ರೈಲು ದುರಂತ, ರಾಜಕೀಯ ನಾಯಕರ ತಲೆದಂಡದ ಬಗ್ಗೆ ಕರ್ನಾಟಕದ ಖ್ಯಾತ ಜ್ಯೋತಿಷಿ ಭವಿಷ್ಯ

Published On - 9:41 am, Tue, 22 November 22