ದೆಹಲಿ / ಕಠ್ಮಂಡು: ನೇಪಾಳದ ದೋಟಿ ಜಿಲ್ಲೆಯಲ್ಲಿ ಬುಧವಾರ ನಸುಕಿನಲ್ಲಿ (ನ 9) ಪ್ರಬಲ ಭೂಕಂಪ (Nepal Earthquake) ಸಂಭವಿಸಿದ್ದು, ಹಲವು ಮನೆಗಳು ಕುಸಿದಿವೆ. ಸತ್ತವರ ನಿಖರ ಸಂಖ್ಯೆ ಇನ್ನೂ ವರದಿಯಾಗಬೇಕಿದ್ದು, ಸುದ್ದಿಸಂಸ್ಥೆಗಳು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ಈವರೆಗೆ ಆರು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ನೇಪಾಳದ ಭೂಕಂಪದ ಉತ್ತರಕಂಪನಗಳು (Strong Tremors) ದೆಹಲಿ, ರಾಷ್ಟ್ರ ರಾಜಧಾನಿ ಪ್ರದೇಶ, ನೋಯ್ಡಾ ಸೇರಿದಂತೆ ಹಲವೆಡೆ ಜನರ ಅನುಭವಕ್ಕೆ ಬಂದಿವೆ. ಭೂಕಂಪದಿಂದ ಆಘಾತಕ್ಕೊಳಗಾದ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಸುಮಾರು 10 ಸೆಕೆಂಡ್ಗಳ ಕಾಲ ಭೂಕಂಪದ ಅನುಭವವಾಯಿತು ಎಂದು ವರದಿಯಾಗಿದೆ.
ನೇಪಾಳದಲ್ಲಿ ಮಂಗಳವಾರ (ನ 8) ರಾತ್ರಿ 8.52ಕ್ಕೆ ಮೊದಲ ಬಾರಿಗೆ ಭೂಮಿಯು ಕಂಪಿಸಿದ ಅನುಭವವಾಯಿತು. ಮೊದಲ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.9 ಎಂದು ದಾಖಲಾಗಿತ್ತು. ಬುಧವಾರ (ನ 9) ನಸುಕಿನ 1.57ಕ್ಕೆ ಎರಡನೇ ಬಾರಿಗೆ ಭೂಮಿಯು ಕಂಪಿಸಿತು. ಇದರ ತೀವ್ರತೆಯು 6.3ರಷ್ಟು ಇತ್ತು. ನೇಪಾಳದ ಎರಡನೇ ಭೂಕಂಪನದ ಅಲೆಗಳು ಭಾರತದ ದೆಹಲಿ, ಗಾಜಿಯಾಬಾದ್, ನೋಯ್ಡಾ, ಗುರುಗ್ರಾಮ ಮತ್ತು ಲಖನೌ ನಗರಗಳನ್ನೂ ನಡುಗಿಸಿತು.
‘ಭೂಕಂಪವು ಭೂಮಿಯ 10 ಕಿಮೀ ಆಳದಲ್ಲಿ ಸಂಭವಿಸಿದೆ. ರಾತ್ರಿಯಿಂದೀಚೆಗೆ ಯಾವುದೇ ತುರ್ತುಕರೆ ಬಂದಿಲ್ಲ. ನೇಪಾಳದಲ್ಲಿ ಭೂಕಂಪನದ ಕೇಂದ್ರವಿತ್ತು’ ಎಂದು ‘ನ್ಯಾಷನಲ್ ಸೆಂಟರ್ ಫಾರ್ ಸೆಸ್ಮೊಲಜಿ’ ಕಚೇರಿಯು ಟ್ವೀಟ್ ಮಾಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಜನರು ಭೂಕಂಪನದ ಅನುಭವವನ್ನು ಹಂಚಿಕೊಂಡಿದ್ದಾರೆ. ಭೂಕಂಪ ಸಂಭವಿಸಿದ ಕೇವಲ ಅರ್ಧಗಂಟೆಯ ಅವಧಿಯಲ್ಲಿ ಟ್ವಿಟರ್ನಲ್ಲಿ #earthquake ಹ್ಯಾಷ್ಟ್ಯಾಗ್ ಟ್ರೆಂಡ್ ಆಗಿತ್ತು. ಭಾರತದಲ್ಲಿ ಭೂಕಂಪದಿಂದ ಜೀವಹಾನಿ ಅಥವಾ ಆಸ್ತಿಹಾನಿಯಾದ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
I NEVER FELT SUCH STRONG EARTHQUAKE TREMORS. I LEGIT THOUGHT SOME UNNATURAL PRESENCE IS SHAKING MY BED 🙁 😮 STRONG EARTHQUAKE IN FARIDABAD AND DELHI NCR.
— prathimakumar (@prathimakumar30) November 8, 2022
— Umang Singla (@umangsingla) November 8, 2022
Published On - 7:15 am, Wed, 9 November 22