Afghanistan Earthquake: ಅಫ್ಘಾನಿಸ್ತಾನದಲ್ಲಿ 5.1 ತೀವ್ರತೆಯ ಭೂಕಂಪ ದಾಖಲು

| Updated By: ಸುಷ್ಮಾ ಚಕ್ರೆ

Updated on: Jan 01, 2022 | 8:11 PM

ಅಫ್ಘಾನಿಸ್ತಾನ-ತಜಿಕಿಸ್ತಾನ್ ಗಡಿಯಲ್ಲಿ ಇಂದು (ಶನಿವಾರ) ಸಂಜೆ 6.45ಕ್ಕೆ 5.1 ತೀವ್ರತೆಯ ಭೂಕಂಪನದ ಅನುಭವವಾಗಿದೆ.

Afghanistan Earthquake: ಅಫ್ಘಾನಿಸ್ತಾನದಲ್ಲಿ 5.1 ತೀವ್ರತೆಯ ಭೂಕಂಪ ದಾಖಲು
ಪ್ರಾತಿನಿಧಿಕ ಚಿತ್ರ
Follow us on

ಕಾಬೂಲ್: ಅಫ್ಘಾನಿಸ್ತಾನ-ತಜಕಿಸ್ತಾನ ಗಡಿಯಲ್ಲಿ ಭೂಕಂಪನವಾಗಿದೆ. ರಿಕ್ಟರ್​ ಮಾಪಕದಲ್ಲಿ ಕಂಪನದ ತೀವ್ರತೆ 5.1ರಷ್ಟು ದಾಖಲಾಗಿದೆ. ಅಫ್ಘಾನಿಸ್ತಾನ-ತಜಿಕಿಸ್ತಾನ್ ಗಡಿಯಲ್ಲಿ ಇಂದು (ಶನಿವಾರ) ಸಂಜೆ 6.45ಕ್ಕೆ 5.1 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಹಾಗೇ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ನಿಯಂತ್ರಣ ರೇಖೆಯ ಸುತ್ತಲಿನ ಇತರ ಪ್ರದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಟ್ವೀಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.

ವರದಿಗಳ ಪ್ರಕಾರ, ಭೂಕಂಪವಾಗಿದ್ದರಿಂದ ಭಯಭೀತರಾದ ಜನರು ತಮ್ಮ ಮನೆಗಳಿಂದ ಓಡಿ ಬಂದಿದ್ದಾರೆ. ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಇದನ್ನೂ ಓದಿ: Earthquake in Afghanistan: ಅಫ್ಘಾನಿಸ್ತಾನದ ಫೈಜಾಬಾದ್​ನಲ್ಲಿ 4.3 ತೀವ್ರತೆಯ ಭೂಕಂಪ

Bengaluru Earthquake: ಬೆಳಗ್ಗೆ 7 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಲವೆಡೆ ಲಘು ಭೂಕಂಪ, ಆತಂಕ ಪಡಬೇಡಿ ಎಂದು ಜಿಲ್ಲಾಧಿಕಾರಿ ಲತಾ ಅಭಯ