Earthquake: ಪಪುವಾ ನ್ಯೂ ಗಿನಿಯಾ ದ್ವೀಪ ರಾಷ್ಟ್ರದಲ್ಲಿ 6.5ರಷ್ಟು ತೀರ್ವತೆಯಲ್ಲಿ ಕಂಪಿಸಿದ ಭೂಮಿ

|

Updated on: Feb 26, 2023 | 7:56 AM

ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ಬರುವ ದ್ವೀಪ 'ಪಪುವಾ ನ್ಯೂ ಗಿನಿಯಾ' ದ್ವೀಪ ರಾಷ್ಟ್ರದಲ್ಲಿ ಇಂದು (ಫೆ.26) ಬೆಳಗಿನ ಜಾವ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ ಕಂಪನದ ತೀವ್ರತೆ 6.5 ದಾಖಲಾಗಿದೆ.

Earthquake: ಪಪುವಾ ನ್ಯೂ ಗಿನಿಯಾ ದ್ವೀಪ ರಾಷ್ಟ್ರದಲ್ಲಿ 6.5ರಷ್ಟು ತೀರ್ವತೆಯಲ್ಲಿ ಕಂಪಿಸಿದ ಭೂಮಿ
ಭೂಕಂಪ
Follow us on

ನ್ಯೂ ಬ್ರಿಟನ್​: ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ಬರುವ ದ್ವೀಪ ‘ಪಪುವಾ ನ್ಯೂ ಗಿನಿಯಾ’ (Papua New Guinea) ದ್ವೀಪ ರಾಷ್ಟ್ರದಲ್ಲಿ ಇಂದು (ಫೆ.26) ಬೆಳಗಿನ ಜಾವ ಪ್ರಬಲ ಭೂಕಂಪ (Earthquake) ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ ಕಂಪನದ ತೀವ್ರತೆ 6.5 ದಾಖಲಾಗಿದೆ. ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಇದರಿಂದ ಸುನಾಮಿಯ ಆತಂಕವಿಲ್ಲ ಎಂದು ಹೇಳಿದೆ. ಪಶ್ಚಿಮ ಬ್ರಿಟನ್​ನಲ್ಲಿ​ ಭೂಕಂಪನ ಸಂಭಿವಿಸಿದ್ದು, ಭೂಮಿಯ 38 ಕಿ ಮೀ ಆಳದಲ್ಲಿ ಸಂಭವಿಸಿದೆ.

ಅಫ್ಘಾನಿಸ್ಥಾನದಲ್ಲಿ 4.3 ತೀರ್ವತೆಯಲ್ಲಿ ಕಂಪಿಸಿದ ಭೂಮಿ

ಅಫ್ಘಾನಿಸ್ಥಾನ: ಅಫ್ಘಾನಿಸ್ಥಾನದಲ್ಲೂ ಕೂಡ ಭೂಕಂಪನ ಸಂಭಿವಿಸಿದ್ದು, ರಿಕ್ಟರ್​ ಮಾಪಕದಲ್ಲಿ ಕಂಪನದ ತೀವ್ರತೆ 4.3 ದಾಖಲಾಗಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಫಯಾಜಾಬಾದನಿಂದ 273 ಕಿ ಮೀ ದೂರದಲ್ಲಿ ಭೂಮಿ ಕಂಪಿಸಿದೆ. ಭೂಮಿಯ 180 ಕಿಮೀ ಆಳದಲ್ಲಿ ಭೂಕಂಪನವಾಗಿದೆ.

ಮತ್ತಷ್ಟು ಅಂತರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:14 am, Sun, 26 February 23