ಅಮೆರಿಕದ ಅಲಾಸ್ಕಾದಲ್ಲಿ ಮಂಗಳವಾರ ಮಧ್ಯಾಹ್ನ 1.42ರ ಹೊತ್ತಿಗೆ ಪ್ರಬಲ ಭೂಕಂಪ (Alaska Earthquake) ಸಂಭಿವಿಸಿದೆ. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟು ದಾಖಲಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಈ ಬಾರಿ ಭೂಮೇಲ್ಮೈ ಆಳದಿಂದ 125 ಕಿಮೀ ಆಳದಲ್ಲಿ ಸಂಭವಿಸಿದೆ. ಸದ್ಯ ಯಾವುದೇ ರೀತಿಯ ಸುನಾಮೆ ಎಚ್ಚರಿಕೆ ಇಲ್ಲ ಎಂದು ಹೇಳಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಕೇಂದ್ರದ ಪ್ರಕಾರ ಇಲ್ಲಿ 5.9ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಅಂಕಾರೇಜ್ನ ನೈಋತ್ಯಕ್ಕೆ ಸುಮಾರು 138 ಮೈಲುಗಳಷ್ಟು ದೂರವಿರುವ ಇಲಿಯಾಮ್ನಾ ಜ್ವಾಲಾಮುಖಿ ಸಮೀಪವೇ ಭೂಕಂಪ ಉಂಟಾಗಿದೆ ಎಂದು ಯುಎಸ್ಜಿಎಸ್ ತಿಳಿಸಿದೆ. ಅಲಾಸ್ಕಾದ ಕೆನೈ ಪೆನಿನ್ಸುಲಾದಿಂದ ಕುಕ್ ಇನ್ಲೆಟ್ನಾದಾದ್ಯಂತ ಭೂಮಿ ಕಂಪನವಾಗಿದೆ. ಇಲ್ಲಿಂದ ದೂರವಿರುವ ಫೇರ್ಬ್ಯಾಂಕ್ಸ್, ಕೊಡಿಯಾಕ್ ಮತ್ತು ವಾಡ್ಲೆಜ್ನಲ್ಲೂ ಭೂಮಿ ನಡುಗಿದ ವರದಿಯಾಗಿದೆ. ಆದರೆ ಎಲ್ಲಿಯೂ ಯಾವುದೇ ಆಸ್ತಿಪಾಸ್ತಿ, ಮನೆಗಳಿಗೆ ಹಾನಿಯಾಗಿಲ್ಲ. ಪ್ರಾಣ ಹಾನಿಯೂ ಆಗಿಲ್ಲ ಎಂದು ವರದಿಯಾಗಿದೆ.
Thanks for your patience, everyone. The seismologist reviewed information for that earthquake is a deep (~95 miles) M5.9 event near Iliamna Volcano, across Cook Inlet from Nanilchik. https://t.co/u2kaTprHzy pic.twitter.com/nBtK3hmRhY
— Alaska Earthquake Center (@AKearthquake) December 21, 2021
ಯುಎಸ್ನ ಅಲಾಸ್ಕಾದಲ್ಲಿ ಪದೇಪದೇ ಭೂಕಂಪನ ಆಗುತ್ತಿರುತ್ತದೆ. ಜುಲೈನಲ್ಲಿ 8.2ರಷ್ಟು ತೀವ್ರತೆಯಲ್ಲಿ ಪ್ರಬಲ ಭೂಕಂಪ ಆಗಿತ್ತು. ಪೆರಿವಿಲ್ಲೆಯಿಂದ ಆಗ್ನೇಯಕ್ಕೆ 91 ಕಿಮೀ ದೂರದಲ್ಲಿ ಭೂಕಂಪ ಉಂಟಾಗಿದ್ದು, ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಸುನಾಮಿ ಮುನ್ನೆಚ್ಚರಿಕೆ ನೀಡಿತ್ತು. ಆಗ ರಸ್ತೆಗಳೆಲ್ಲ ಭರ್ಜರಿ ಸೀಳುಬಿಟ್ಟಿದ್ದವು. ಅಪಾರ ಪ್ರಮಾಣದ ಹಾನಿಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿಯೇ ಜೂನ್ನಲ್ಲಿ ಆದ ಭೂಕಂಪದ ತೀವ್ರತೆ ಅತ್ಯಂತ ಹೆಚ್ಚು ಎಂದು ವಿಶ್ಲೇಸಿಸಲಾಗಿದೆ. ಅದರ ಹೊರತಾಗಿ 2020ರ ಅಕ್ಟೋಬರ್ನಲ್ಲೂ ಕೂಡ ಅಲಾಸ್ಕಾದ ಸ್ಯಾಡ್ ಪಾಯಿಂಟ್ ಎಂಬಲ್ಲಿ 7.5 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಇದರ ತೀವ್ರತೆಗೆ ಸಾಗರದಲ್ಲಿ ಸುನಾಮಿ ಮಾದರಿಯ ಅಲೆಗಳು ಎದ್ದಿದ್ದವು. ಹಾಗೇ, 2020ರ ಜುಲೈನಲ್ಲೂ ಕೂಡ ಪೆನಿನ್ಸುಲಾದಲ್ಲಿ 7.8 ತೀವ್ರತೆಯಲ್ಲಿ ಭೂಮಿ ನಡುಗಿತ್ತು. ಒಟ್ಟಾರೆ ಈ ಪ್ರದೇಶದಲ್ಲಿ ಆಗಾಗ ಭೂಕಂಪನ ಸಂಭವಿಸುವುದು ಸಾಮಾನ್ಯವೆಂಬಂತಾಗಿದೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ; ಹುದ್ದೆ, ವೇತನ ಮೊದಲಾದ ಮಾಹಿತಿ ಇಲ್ಲಿದೆ
Published On - 8:19 am, Wed, 22 December 21