Russi Ukraine War: ಕತ್ತಲಲ್ಲಿ ಮುಳುಗಿದ ಉಕ್ರೇನ್; ರಷ್ಯಾದ ಭಯೋತ್ಪಾದಕರು ಕಾರಣ ಎಂದ ಝೆಲೆನ್​​ಸ್ಕಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 12, 2022 | 8:01 AM

Ukriane Blackout: ದಿನಗಟ್ಟಲೆ ವಿದ್ಯುತ್ ಇಲ್ಲದೆ ಜನಜೀವನ ಅಸ್ತವ್ಯಸ್ತಗೊಂಡಿದೆ.

Russi Ukraine War: ಕತ್ತಲಲ್ಲಿ ಮುಳುಗಿದ ಉಕ್ರೇನ್; ರಷ್ಯಾದ ಭಯೋತ್ಪಾದಕರು ಕಾರಣ ಎಂದ ಝೆಲೆನ್​​ಸ್ಕಿ
ಉಕ್ರೇನ್​ನಲ್ಲಿ ಕ್ಷಿಪಣಿ ದಾಳಿ
Image Credit source: AP
Follow us on

ಕೀವ್: ಸುಲಭವಾಗಿ ಗೆಲ್ಲಬಹುದು ಎಂದು ಉಕ್ರೇನ್​ ಮೇಲೆ ದಂಡೆತ್ತಿ ಬಂದಿದ್ದ ರಷ್ಯಾ ಸೇನೆ (Russia Ukraine Conflict) ಒಂದಾದ ಮೇಲೆ ಒಂದರಂತೆ ಹಿನ್ನಡೆ ಅನುಭವಿಸುತ್ತಿದೆ. 200ನೇ ದಿನಕ್ಕೆ ಕಾಲಿಟ್ಟಿರುವ ಯುದ್ಧದಲ್ಲಿ ಸತತ ಸೋಲುಗಳಿಂದ ಹತಾಶವಾಗಿರುವ ರಷ್ಯಾ ಇದೀಗ ಪರೋಕ್ಷವಾಗಿ ಒತ್ತಡ ಹೇರುವ ತಂತ್ರಗಳಿಗೆ ಮೊರೆ ಹೋಗಿದೆ. ಉಕ್ರೇನ್​ನ ಪೂರ್ವ ಭಾಗದ ಹಲವು ಪ್ರಾಂತ್ಯಗಳಲ್ಲಿ ಸಾರಾಸಗಟಾಗಿ ವಿದ್ಯುತ್ ಸರಬರಾಜು ಕಡಿತಗೊಳಿಸಿದೆ. ದಿನಗಟ್ಟಲೆ ವಿದ್ಯುತ್ ಇಲ್ಲದೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಖಾರ್ಕಿವ್ ಮತ್ತು ಡೊನೆಟ್​ಸ್ಕ್​ ಪ್ರಾಂತ್ಯಗಳು ಕತ್ತಲಲ್ಲಿ ಮುಳುಗಲು ರಷ್ಯಾದ ಭಯೋತ್ಪಾದಕರು ಕಾರಣ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ ಆರೋಪಿಸಿದ್ದಾರೆ. ಝಪೊರಿಖ್​ಖಿಯಾ, ಡ್ನಿಪ್ರೊಪೆಟ್ರೊವ್​​ಕ್​ ಮತ್ತು ಸುಮಿ ಪ್ರಾಂತ್ಯಗಳ ಕೆಲವೆಡೆ ಮಾತ್ರ ವಿದ್ಯುತ್ ಪೂರೈಕೆ ಸಾಧ್ಯವಾಗಿದೆ ಎಂದು ಝೆಲೆನ್​ಸ್ಕಿ ಹೇಳಿದ್ದಾರೆ.

ಈ ಪ್ರದೇಶಗಳಲ್ಲಿ ಸೇನಾ ನೆಲೆಗಳು ಇಲ್ಲ. ಆದರೆ ಜನರಿಗೆ ಬೆಳಕು ಮತ್ತು ಶಾಖ ಸಿಗದಂತೆ ಮಾಡುವ ಉದ್ದೇಶದಿಂದ ರಷ್ಯಾ ಇಂಥ ಕೆಟ್ಟ ಕ್ರಮಕ್ಕೆ ಮುಂದಾಗಿದೆ. ಸುಮಾರು 90 ಲಕ್ಷ ಜನರು ಇದರಿಂದ ಸಂಕಷ್ಟ ಅನುಭವಿಸುವಂತಾಗಿದೆ. ಪೂರ್ವ ಉಕ್ರೇನ್​ನ ಹಲವು ಹಳ್ಳಿ ಮತ್ತು ಪಟ್ಟಣಗಳಿಂದ ರಷ್ಯಾ ಸೇನಾಪಡೆಗಳನ್ನು ಉಕ್ರೇನ್ ಹಿಮ್ಮೆಟ್ಟಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಉಕ್ರೇನ್​ನ ರೈಲ್ವೆ ಜಾಲವನ್ನೂ ರಷ್ಯಾ ಹಾಳುಗೆಡವುತ್ತಿದೆ. ಖಾರ್ಕಿವ್ ಸೇರಿದಂತೆ ವಿವಿಧ ನಗರಗಳಿಗೆ ರೈಲು ಸಂಪರ್ಕ ಅಸ್ತವ್ಯಸ್ತಗೊಂಡಿದೆ.

ಉಕ್ರೇನ್ ಪ್ರತಿದಾಳಿ; ಹಿಮ್ಮೆಟ್ಟುತ್ತಿರುವ ರಷ್ಯಾ

ಉಕ್ರೇನ್ ಪಡೆಗಳು ಭಾನುವಾರ (ಸೆ 11) ರಷ್ಯಾ ಗಡಿ ಸಮೀಪದ ಪೂರ್ವ ಪ್ರಾಂತ್ಯಗಳಲ್ಲಿ ಸಂಘಟಿತ ಪ್ರತಿದಾಳಿ ನಡೆಸಿವೆ. ಇದು ಯುದ್ಧದ ಫಲಿತಾಂಶದ ಮೇಲೆ ಪರಿಣಾಮ ಬೀರುವಷ್ಟು ಯಶಸ್ವಿಯಾಗಿದ್ದು, ಈಶಾನ್ಯ ಖಾರ್ಕಿವ್ (Kharkiv) ಪ್ರದೇಶದಲ್ಲಿ ರಷ್ಯಾ-ಆಕ್ರಮಿತ ಪ್ರದೇಶಗಳನ್ನು ಉಕ್ರೇನ್ ಮತ್ತೆ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ರಷ್ಯಾದ ಯೋಧರು ತಮ್ಮ ಯುದ್ಧಸಾಮಗ್ರಿಗಳು ಮತ್ತು ಯುದ್ಧೋಪಕರಣಗಳನ್ನು ಬಂಕರ್​ಗಳಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಉಕ್ರೇನ್​ನ ರಾಷ್ಟ್ರೀಯ ವಾಹಿನಿ ಈ ಸಂಬಂಧ ಸುದ್ದಿ ಪ್ರಸಾರ ಮಾಡಿದೆ. ಯುದ್ಧಭೂಮಿಯಿಂದ ರಷ್ಯಾ ಹಿಂದೆ ಸರಿದಿದ್ದನ್ನು ಉಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ ಲೇವಡಿ ಮಾಡಿದ್ದಾರೆ.

Published On - 8:01 am, Mon, 12 September 22