ವಿಶ್ವದ ಕೆಲವು ಅತಿ ಡೊಡ್ಡ ಕಂಪನಿಗಳನ್ನು ಮುನ್ನಡೆಸುತ್ತಿರವ ಭಾರತೀಯ ಮೂಲದ 12 ಸಿಇಒಗಳ ಪಟ್ಟಿ ಇಲ್ಲಿದೆ

ಸಿಲಿಕಾನ್ ವ್ಯಾಯಲ್ಲಿ ಕೇಳಿಬರುತ್ತಿರುವ ಟೆಕ್​ಗೀಕ್‌ಗಳಿಂದ ಹಿಡಿದು ಕೆಲವು ಅತ್ಯಂತ ಯಶಸ್ವಿ ಸಂಘಟಿತ ಸಂಸ್ಥೆಗಳ ಮುಖ್ಯಸ್ಥರಾಗಿರುವ ಉದ್ಯಮಿಗಳು ಭಾರತದವರೆ.

TV9 Web
| Updated By: ವಿವೇಕ ಬಿರಾದಾರ

Updated on: Sep 11, 2022 | 3:32 PM

ಸುಂದರ್ ಪಿಚೈ, ಆಲ್ಫಾಬೆಟ್

ಜಾಗತಿಕ ಕಂಪನಿಗಳನ್ನು ಮುನ್ನಡೆಸುತ್ತಿರುವ ಭಾರತೀಯ ಮೂಲದ ಸಿಇಒಗಳ ಪ್ರಸ್ತಾಪ ಬಂದಾಗಲೆಲ್ಲಾ ಮೊದಲಿಗೆ ನೆನಪಾಗೋದು ಸುಂದರ್ ಪಿಚೈ ಅವರ ಹೆಸರು. 
IIT ಖರಗ್‌ಪುರ ಪದವೀಧರರಾದ ಅವರು 2015 ರಲ್ಲಿ Google ನ CEO  ಆಗದರು.  2019 ರ ಡಿಸೆಂಬರ್‌ನಲ್ಲಿ Google ನ ಮೂಲ ಕಂಪನಿಯಾದ Alphabet Inc ನ CEO ಆಗಿ ನೇಮಕಗೊಂಡರು.

12 Indian-origin CEOs leading top companies across the world

1 / 12
ಸತ್ಯ ನಾಡೆಲ್ಲಾ, ಮೈಕ್ರೋಸಾಫ್ಟ್

ಸಿಲಿಕಾನ್ ವ್ಯಾಲಿಯ ಮತ್ತೊಂದು ದೊಡ್ಡ ಹೆಸರು, ಸತ್ಯ ನಾಡೆಲ್ಲಾ, ಮಣಿಪಾಲ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ವಿಸ್ಕಾನ್ಸಿನ್-ಮಿಲ್ವಾಕೀ ವಿಶ್ವವಿದ್ಯಾಲಯ ಮತ್ತು ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು.
ಸತ್ಯ ನಾಡೆಲ್ಲಾ ಅವರು 2014 ರಲ್ಲಿ ಮೈಕ್ರೋಸಾಫ್ಟ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ ಆಗಿದ್ದಾಗ ಪ್ರಭಾವಿ ಭಾರತೀಯ ಮೂಲದ ಸಿಇಒಗಳ ಪಟ್ಟಿಗೆ ಸೇರ್ಪಡೆಗೊಂಡರು.

12 Indian-origin CEOs leading top companies across the world

2 / 12
12 Indian-origin CEOs leading top companies across the world

ಪರಾಗ್ ಅಗರವಾಲ್, ಟ್ವಿಟರ್ ಪರಾಗ್ ಅಗರವಾಲ್ ಅವರು ಮುಂಬೈನ IIT ಮಹಾವಿದ್ಯಾಲಯದಲ್ಲಿ ಪದವಿ ಪಡೆದರು. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದರು. ಪರಾಗ್ ಅಗರವಾಲ್ 2021 ನವೆಂಬರ್‌ನಲ್ಲಿ ಟ್ವಿಟರ್ ಸಿಇಒ ಆಗಿ ನೇಮಕಗೊಂಡ ನಂತರ ಅದರ ಸಂಸ್ಥಾಪಕ ಜಾಕ್ ಡಾರ್ಸೆ ಅವರು ಸ್ಥಾನದಿಂದ ಕೆಳಗಿಳಿದರು.

3 / 12
12 Indian-origin CEOs leading top companies across the world

ಲೀನಾ ನಾಯರ್, ಚಾನೆಲ್ ಕಂಪನಿ ಲೀನಾ ನಾಯರ್ ಅವರು 2021 ಡಿಸೆಂಬರ್‌ನಲ್ಲಿ ಚಾನೆಲ್‌ನ ಮೊದಲ ಮಹಿಳೆ ಮತ್ತು ಕಿರಿಯ ಸಿಇಒ ಆಗಿ ನೇಮಕಗೊಂಡರು. XLRI- ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ವಾಲ್‌ಚಂದ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಹಳೆವಿದ್ಯಾರ್ಥಿಯಾಗಿದ್ದು, ಲೀನಾ ನಾಯರ್ ಈ ಹಿಂದೆ ಯೂನಿಲಿವರ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದರು.

4 / 12
12 Indian-origin CEOs leading top companies across the world

ಶಂತನು ನಾರಾಯಣ್, ಅಡೋಬ್ ಇಂಕ್ ಹೈದರಾಬಾದ್‌ನಲ್ಲಿ ಜನಿಸಿದ ಶಾಂತನು ನಾರಾಯಣ್ ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಪೂರ್ಣಗೊಳಿಸಿದರು. ನಂತರ ಅವರು ಬೌಲಿಂಗ್ ಗ್ರೀನ್ ಸ್ಟೇಟ್ ಯೂನಿವರ್ಸಿಟಿ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಪೂರೈಸಿದರು. ಶಾಂತನು ನಾರಾಯಣ್ ಅವರು ಅಡೋಬ್ ಇಂಕ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನಂತರ ಅವರನ್ನು ಅದೇ ಕಂಪನಿಯು 2007 ಡಿಸೆಂಬರ್​ನಲ್ಲಿ CEO ಆಗಿ ನೇಮಿಸಲಾಯಿತು.

5 / 12
12 Indian-origin CEOs leading top companies across the world

ಅರವಿಂದ ಕೃಷ್ಣ, IBM ಐಐಟಿ ಕಾನ್ಪುರದ ಹಳೆ ವಿದ್ಯಾರ್ಥಿ ಅರವಿಂದ್ ಕೃಷ್ಣ ಇಲಿನಾಯ್ಸ್ ಅರ್ಬಾನಾ-ಚಾಂಪೇನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಅವರನ್ನು ಏಪ್ರಿಲ್ 2020 ರಲ್ಲಿ IBM ಕಂಪನಿಗೆ CEO ಆಗಿ ನೇಮಿಸಲಾಯಿತು. ಮುಂದೆ ಅವರು ಜನವರಿ 2021 ರಲ್ಲಿ ಇದೇ ಕಂಪನಿಗೆ ಅಧ್ಯಕ್ಷರಾಗಿ ನೇಮಕಗೊಂಡರು.

6 / 12
12 Indian-origin CEOs leading top companies across the world

ಸಂಜಯ್ ಮೆಹ್ರೋತ್ರಾ, ಮೈಕ್ರೋನ್ ಟೆಕ್ನಾಲಜಿ ಕಾನ್ಪುರದಲ್ಲಿ ಜನಿಸಿದ ಸಂಜಯ್ ಮೆಹ್ರೋತ್ರಾ ಅವರು BITS ಪಿಲಾನಿ ಕಾಲೇನಜಿನ ಹಳೆ ವಿದ್ಯಾರ್ಥಿ ಮತ್ತು UC ಬರ್ಕ್ಲಿಯಲ್ಲಿ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಸಂಜಯ್ ಮೆಹ್ರೋತ್ರಾ ಅವರು 2017 ರಲ್ಲಿ ಮೈಕ್ರಾನ್ ಟೆಕ್ನಾಲಜೀಸ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಅವರು ಸ್ಯಾಂಡಿಸ್ಕ್‌ನ ಸಹ-ಸಂಸ್ಥಾಪಕರಾಗಿದ್ದರು ಮತ್ತು 2016 ರಲ್ಲಿ ಅದರ CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

7 / 12
12 Indian-origin CEOs leading top companies across the world

ನಿಕೇಶ್ ಅರೋರಾ, ಪಾಲೋ ಆಲ್ಟೊ ನೆಟ್‌ವರ್ಕ್ಸ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, BHU ನ ಹಳೆ ವಿದ್ಯಾರ್ಥಿ ನಿಕೇಶ್ ಅರೋರಾ ಅವರು ಬೋಸ್ಟನ್ ಕಾಲೇಜು ಮತ್ತು ಈಶಾನ್ಯ ವಿಶ್ವವಿದ್ಯಾಲಯಲ್ಲಿ ಉನ್ನತ ಶಿಕ್ಷಣವನ್ನು ಊರೈಸಿದರು. ನಿಕೇಶ್ ಅರೋರಾ ಅವರನ್ನು ಜೂನ್ 2018 ರಂದು ಪಾಲೊ ಆಲ್ಟೊ ನೆಟ್‌ವರ್ಕ್‌ಗಳ CEO ಮತ್ತು ಅಧ್ಯಕ್ಷರಾಗಿ ನೇಮಿಸಲಾಯಿತು.

8 / 12
12 Indian-origin CEOs leading top companies across the world

ಜಯಶ್ರೀ ಉಳ್ಳಾಲ್, ಅರಿಸ್ಟಾ ನೆಟ್‌ವರ್ಕ್ಸ್ ಲಂಡನ್ ಮೂಲದ ಮತ್ತು ಭಾರತದಲ್ಲಿ ಬೆಳೆದ ಜಯಶ್ರೀ ಉಳ್ಳಾಲ್ ಅವರು ಸಾಂಟಾ ಕ್ಲಾರಾ ವಿಶ್ವವಿದ್ಯಾಲಯ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಅವರು ಅರಿಸ್ಟಾ ನೆಟ್‌ವರ್ಕ್ಸ್‌ನ CEO ಮತ್ತು ಅಧ್ಯಕ್ಷರಾಗಿ ಅಕ್ಟೋಬರ್ 2008 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

9 / 12
12 Indian-origin CEOs leading top companies across the world

ಅಮ್ರಪಾಲಿ ಗನ್, ಓನ್ಲಿ ಫ್ಯಾನ್ಸ್​ ಮುಂಬೈನಲ್ಲಿ ಜನಿಸಿದ ಅಮ್ರಪಾಲಿ ಗನ್ ಅವರು ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯ ಹಳೆ ವಿದ್ಯಾರ್ಥಿ. ಅವರು ಡಿಸೆಂಬರ್ 2021 ರಲ್ಲಿ ಓನ್ಲಿ ಫ್ಯಾನ್ಸ್‌ನ CEO ಆಗಿ ನೇಮಕಗೊಂಡರು ಮತ್ತು ಸಂಸ್ಥಾಪಕ ಟಿಮ್ ಸ್ಟೋಕ್ಲಿ ನಂತರ ಇವರು ಆ ಸ್ಥಾನವನ್ನು ಅಲಂಕರಿಸಿದರು.

10 / 12
12 Indian-origin CEOs leading top companies across the world

ಅಜಯ್ಪಾಲ್ ಸಿಂಗ್ ಬಂಗಾ, ಮಾಸ್ಟರ್​ಕಾರ್ಡ್ ಅಜಯ್‌ಪಾಲ್ ಸಿಂಗ್ ಬಂಗಾ ಅವರು ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಹಳೆ ವಿದ್ಯಾರ್ಥಿ. ಅವರು ಪ್ರಸ್ತುತ ಮಾಸ್ಟರ್‌ಕಾರ್ಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜುಲೈ 2010 ರಿಂದ ಡಿಸೆಂಬರ್ 31 2020 ರವರೆಗೆ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಕಾರ್ಯನಿವರ್ವಹಿಸಿದ್ದಾರೆ.

11 / 12
12 Indian-origin CEOs leading top companies across the world

ಇಂದ್ರಾ ನೂಯಿ, ಪೆಪ್ಸಿಕೋ ಚೆನ್ನೈನಲ್ಲಿ ಜನಿಸಿದ ಇಂದ್ರಾ ನೂಯಿ ಅವರು ಮದ್ರಾಸ್ ವಿಶ್ವವಿದ್ಯಾಲಯ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಯೇಲ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ. ಇಂದ್ರಾ ನೂಯಿ 2006 ರಲ್ಲಿ ಪೆಪ್ಸಿಕೊ ಕಂಪನಿಯ ಐದನೇ ಸಿಇಒ ಆದರು. ಅವರು ಸಿಇಒ ಆಗಸ್ಟ್ 2018 ರವರೆಗೆ ಕಾರ್ಯನಿವರ್ಹಿಸಿದ್ದಾರೆ.

12 / 12
Follow us
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್