ಫ್ರಾನ್ಸ್​ನ 200 ನಗರಗಳಲ್ಲಿ ಮುಷ್ಕರ, ಐಫೆಲ್ ಟವರ್ ಬಂದ್, ಕಾರಣವೇನು?

ಫ್ರಾನ್ಸ್​​ನಾದ್ಯಂತ ಬೃಹತ್ ಮುಷ್ಕರಗಳು ಮತ್ತು ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರತಿಭಟನೆಯ ಸಮಯದಲ್ಲಿ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಅನ್ನು ಸಹ ಮುಚ್ಚಲಾಗಿದೆ. ಫ್ರಾನ್ಸ್‌ನಾದ್ಯಂತ 200 ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ಸಾವಿರಾರು ಕಾರ್ಮಿಕರು, ನಿವೃತ್ತರು ಮತ್ತು ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಫ್ರಾನ್ಸ್‌ನ ಪ್ರಮುಖ ಒಕ್ಕೂಟಗಳು ಈ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ಫ್ರಾನ್ಸ್​ನ 200 ನಗರಗಳಲ್ಲಿ ಮುಷ್ಕರ, ಐಫೆಲ್ ಟವರ್ ಬಂದ್, ಕಾರಣವೇನು?
ಟವರ್

Updated on: Oct 03, 2025 | 10:16 AM

ಫ್ರಾನ್ಸ್​, ಅಕ್ಟೋಬರ್ 03: ಫ್ರಾನ್ಸ್​​(France)ನಾದ್ಯಂತ ಗುರುವಾರ ಬೃಹತ್ ಮುಷ್ಕರಗಳು ಮತ್ತು ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರತಿಭಟನೆಯ ಸಮಯದಲ್ಲಿ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಅನ್ನು ಸಹ ಮುಚ್ಚಲಾಗಿದೆ. ಫ್ರಾನ್ಸ್‌ನಾದ್ಯಂತ 200 ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ಸಾವಿರಾರು ಕಾರ್ಮಿಕರು, ನಿವೃತ್ತರು ಮತ್ತು ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಫ್ರಾನ್ಸ್‌ನ ಪ್ರಮುಖ ಒಕ್ಕೂಟಗಳು ಈ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ಕಳೆದ ತಿಂಗಳಿನಿಂದ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆ ಮತ್ತು ಬಜೆಟ್ ಕುರಿತ ಚರ್ಚೆಯ ನಡುವೆ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಇದು ಇತ್ತೀಚಿನದು. ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಮೇಲಿನ ನಿರ್ಬಂಧಗಳು ಮತ್ತು ಖರ್ಚು ಕಡಿತಗಳನ್ನು ಒಳಗೊಂಡ ಹಿಂದಿನ ಪ್ರಧಾನಿಯವರ ಬಜೆಟ್ ಪ್ರಸ್ತಾಪಗಳನ್ನು ಸರ್ಕಾರ ಕೈಬಿಡಬೇಕೆಂದು ಒಕ್ಕೂಟಗಳು ಹೇಳುತ್ತವೆ.

ಇಂತಹ ಕ್ರಮಗಳು ಕಡಿಮೆ ಮತ್ತು ಮಧ್ಯಮ ಆದಾಯದ ಜನರ ಖರೀದಿ ಶಕ್ತಿಯನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ ಎಂದು ಒಕ್ಕೂಟಗಳು ಎಚ್ಚರಿಸಿವೆ. ಅವರು ಶ್ರೀಮಂತರ ಮೇಲೆ ಹೆಚ್ಚಿದ ತೆರಿಗೆಗಳನ್ನು ಒತ್ತಾಯಿಸುತ್ತಿದ್ದಾರೆ.

ಪ್ರಧಾನಿಯಾದ ಸೆಬಾಸ್ಟಿಯನ್ ಲೆಕೋರ್ನು ಅವರು ಇನ್ನೂ ತಮ್ಮ ಬಜೆಟ್ ಅನ್ನು ವಿವರಿಸಿಲ್ಲ ಅಥವಾ ತಮ್ಮ ಸಂಪುಟವನ್ನು ಘೋಷಿಸಿಲ್ಲ. ಮುಂಬರುವ ದಿನಗಳಲ್ಲಿ ಸರ್ಕಾರ ರಚನೆಯಾಗುವ ನಿರೀಕ್ಷೆಯಿದ್ದು, ವರ್ಷದ ಅಂತ್ಯದ ವೇಳೆಗೆ ಬಜೆಟ್ ಮಸೂದೆಯನ್ನು ಸಂಸತ್ತಿನಲ್ಲಿ ಚರ್ಚಿಸಲಾಗುವುದು.

ಮತ್ತಷ್ಟು ಓದಿ: ಟ್ರಂಪ್​ಗಾಗಿ ಫ್ರೆಂಚ್ ಅಧ್ಯಕ್ಷರನ್ನೇ ನಡುರಸ್ತೆಯಲ್ಲಿ ನಿಲ್ಲಿಸಿದ ನ್ಯೂಯಾರ್ಕ್​ ಪೊಲೀಸರು

ಇತ್ತೀಚಿನ ದಿನಗಳಲ್ಲಿ ನೇಪಾಳದಲ್ಲಿ ಭೀಕರ ಗದ್ದಲ ನಡೆಯುತ್ತಿದೆ. ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರು ಗದ್ದಲ ಎಬ್ಬಿಸಿದ್ದಾರೆ, ಇದರಿಂದಾಗಿ ಸರ್ಕಾರ ಪತನಗೊಂಡಿದೆ. ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಬೇಕಾಯಿತು. ಆದರೀಗ ನೇಪಾಳದಲ್ಲಿ ನಡೆದ ಪ್ರತಿಭಟನೆಗಳ ನಂತರ, ಮತ್ತೊಂದು ದೇಶದಲ್ಲಿ ಗದ್ದಲ ನಡೆಯುತ್ತಿದೆ.

ಈ ದೇಶದ ಹೆಸರು ಫ್ರಾನ್ಸ್. ಇತ್ತೀಚಿನ ದಿನಗಳಲ್ಲಿ ಫ್ರಾನ್ಸ್ ಬೀದಿಗಳಲ್ಲಿ ಅವ್ಯವಸ್ಥೆ ಮತ್ತು ಸಂಸತ್ತಿನಲ್ಲಿ ಅಸ್ಥಿರತೆ ಎರಡನ್ನೂ ಎದುರಿಸುತ್ತಿದೆ. ಕಳೆದ ತಿಂಗಳು ರಾಜಧಾನಿ ಪ್ಯಾರಿಸ್ ಮತ್ತು ಅನೇಕ ದೊಡ್ಡ ನಗರಗಳಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಘರ್ಷಣೆ ನಡೆದಿತ್ತು. ‘ಬ್ಲಾಕ್ ಎವ್ರಿಥಿಂಗ್’ ಎಂಬ ಹೆಸರಿನೊಂದಿಗೆ ಪ್ರಾರಂಭವಾದ ಈ ಅಭಿಯಾನವು ಇಡೀ ದೇಶದಲ್ಲಿ ಸಾರಿಗೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿತ್ತು.

ಅಮರಿಕದಲ್ಲಿ ಮತ್ತೊಂದು ರೀತಿಯ ಪರಿಸ್ಥಿತಿ
ಆರೋಗ್ಯ ಸೇವೆ ವೆಚ್ಚಕ್ಕೆ ಸಂಬಂಧಿಸಿ ಆಡಳಿತಾರೂಢ ರಿಪಬ್ಲಿಕನ್ಸ್‌ ಮತ್ತು ಪ್ರತಿಪಕ್ಷ ಡೆಮಾಕ್ರಟಿಕ್‌ ಪಕ್ಷದ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಇದರ ಪರಿಣಾಮ ಅಮೆರಿಕದಲ್ಲಿ ಸರ್ಕಾರಿ ಸೇವೆಗಳು ನಿನ್ನೆಯಿಂದಲೇ ಜಾರಿಗೆ ಬರುವಂತೆ ಸ್ಥಗಿತ (ಶಟ್‌ಡೌನ್‌)ಗೊಂಡಿವೆ. ವಿದೇಶಗಳ ಮೇಲಿನ ದಾಳಿ ಬಳಿಕ ಇದೀಗ ಸ್ವದೇಶದಲ್ಲೇ ವಿಪಕ್ಷಗಳ ಮೇಲೆ ಟ್ರಂಪ್‌ ಸಾರಿರುವ ಈ ತೆರಿಗೆ ಸಮರದಿಂದಾಗಿ ಅಮೆರಿಕ ಹೊಸ ಬಿಕ್ಕಟ್ಟಿಗೆ ಸಿಕ್ಕಿಬಿದ್ದಂತಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ