
ವಾಷಿಂಗ್ಟನ್, ಜೂನ್ 6: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿದ್ದು, ಎಲಾನ್ ಮಸ್ಕ್ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರನ್ನು ಕೃತಜ್ಞತೆಯಿಲ್ಲದವರೆಂದು ಕರೆದಿರುವ ಎಲಾನ್ ಮಸ್ಕ್ ಅವರು ಹೇಳಿಕೆಗೆ ಪ್ರತಿಕ್ರಿಯೆಯಾಗಿ ಡೊನಾಲ್ಡ್ ಟ್ರಂಪ್ ಎಲಾನ್ ಮಸ್ಕ್ ಅವರ ಸರ್ಕಾರಿ ಒಪ್ಪಂದಗಳನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ, ಮಸ್ಕ್ ಅವರನ್ನು ವಿಶ್ವಾಸದ್ರೋಹಿ ಎಂದು ಕರೆದಿದ್ದಾರೆ.
ಡೊನಾಲ್ಡ್ ಟ್ರಂಪ್ ಮತ್ತು ಎಲಾನ್ ಮಸ್ಕ್ ನಡುವಿನ ಸಾರ್ವಜನಿಕ ಬಿಕ್ಕಟ್ಟು ತೀವ್ರವಾಗಿ ಬಿರುಕು ಮೂಡಿಸಿತು. ಡೊನಾಲ್ಡ್ ಟ್ರಂಪ್ ಒನ್ ಬಿಗ್ ಬ್ಯೂಟಿಫುಲ್ ಮಸೂದೆಯನ್ನು ಅಂಗೀಕರಿಸುತ್ತಿದ್ದಂತೆ ಎಲಾನ್ ಮಸ್ಕ್ ಸಿಡಿದೆದ್ದಿದ್ದರು. ಸ್ನೇಹಿತರಾಗಿದ್ದ ಟ್ರಂಪ್ ಮತ್ತು ಮಸ್ಕ್ ಈಗ ಶತ್ರುಗಳಾಗಿದ್ದಾರೆ. ಟ್ರಂಪ್ ಆಡಳಿತದ ಇತ್ತೀಚಿನ ತೆರಿಗೆ ಮಸೂದೆಯ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಹೆಚ್ಚುತ್ತಿರುವ ಬಿರುಕಿನ ನಂತರ, ಎಲಾನ್ ಮಸ್ಕ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹೊಸ ರಾಜಕೀಯ ಪಕ್ಷದ ರಚನೆಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ್ದಾರೆ.
ಇದನ್ನೂ ಓದಿ: ನಮ್ಮ ಜತೆ ಮಾತುಕತೆಗೆ ಭಾರತವನ್ನು ನೀವೇ ಒಪ್ಪಿಸಬೇಕು ಎಂದು ಟ್ರಂಪ್ಗೆ ಮನವಿ ಮಾಡಿದ ಪಾಕ್ ಪ್ರಧಾನಿ ಷರೀಫ್
ಈ ಬಗ್ಗೆ ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಎಲಾನ್ ಮಸ್ಕ್, “ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷವನ್ನು ರಚಿಸಲು ಇದು ಸೂಕ್ತ ಸಮಯವೇ?” ಎಂದು ಕೇಳುವ ಸಮೀಕ್ಷೆಯನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ತ್ವರಿತವಾಗಿ ವ್ಯಾಪಕ ಗಮನ ಸೆಳೆಯಿತು. ಟ್ರಂಪ್ ಅವರ ಮಾರ್ಕ್ಯೂ ಖರ್ಚು ಶಾಸನದ ಬಗ್ಗೆ ಮಸ್ಕ್ ತೀವ್ರವಾಗಿ ಟೀಕಿಸಿದ್ದಾರೆ. ಈ ಮಸೂದೆಯನ್ನು ಬೆಂಬಲಿಸಿದವರು ಸಾರ್ವಜನಿಕ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Is it time to create a new political party in America that actually represents the 80% in the middle?
— Elon Musk (@elonmusk) June 5, 2025
ಇದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಸೂದೆಯನ್ನು ಬಹಿರಂಗವಾಗಿ ಟೀಕಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಒಂದು ಭಾಗವಾಗಿದೆ. “ನಾನಿಲ್ಲದೆ ಟ್ರಂಪ್ ಚುನಾವಣೆಯಲ್ಲಿ ಸೋಲುತ್ತಿದ್ದರು” ಎಂಬುದು ಮಸ್ಕ್ ಅವರ ಅತ್ಯಂತ ಗಮನಾರ್ಹವಾದ ಕಾಮೆಂಟ್‌ಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ಎಪ್ಸ್ಟೀನ್ ಫೈಲ್ಸ್ ಎಂದರೇನು? ಟ್ರಂಪ್ ಹೆಸರಿರುವುದು ನಿಜವೇ? ಎಲಾನ್ ಮಸ್ಕ್ ಆರೋಪವೇನು?
ಇದಕ್ಕೆ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಒಂದು ಕಾಲದಲ್ಲಿ ನಿಷ್ಠಾವಂತ ಬೆಂಬಲಿಗರಾಗಿದ್ದ ಮತ್ತು ಶ್ವೇತಭವನದ ಒಳಗಿನವರೂ ಆಗಿದ್ದ ಎಲಾನ್ ಮಸ್ಕ್ ಬಗ್ಗೆ ತುಂಬಾ ನಿರಾಶೆಗೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ಟ್ರಂಪ್ ಒಂದು ಹೆಜ್ಜೆ ಮುಂದೆ ಹೋಗಿ ಮಸ್ಕ್ ಅವರ ಕಂಪನಿಗಳಿಗೆ ನೀಡಲಾದ ಯುಎಸ್ ಸರ್ಕಾರದ ಒಪ್ಪಂದಗಳು ಮತ್ತು ಸಬ್ಸಿಡಿಗಳನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Fri, 6 June 25