AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಪ್ರತಿಭಟನೆಯೊಂದಿಗೆ ಸಂಬಂಧ ಹೊಂದಿರುವ ‘ಎಕ್ಸ್​’ ಖಾತೆಗಳ ಅಮಾನತು ಆದೇಶದ ಬಗ್ಗೆ ಎಲಾನ್ ಮಸ್ಕ್​ ಅಸಮಾಧಾನ

ರೈತರ ಪ್ರತಿಭಟನೆಯೊಂದಿಗೆ ಸಂಬಂಧ ಹೊಂದಿರುವ ಎಕ್ಸ್​ ಖಾತೆಗಳ ಅಮಾನತು ಆದೇಶದ ಬಗ್ಗೆ ಎಲಾನ್ ಮಸ್ಕ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾರೆ.

ರೈತರ ಪ್ರತಿಭಟನೆಯೊಂದಿಗೆ ಸಂಬಂಧ ಹೊಂದಿರುವ ‘ಎಕ್ಸ್​’ ಖಾತೆಗಳ ಅಮಾನತು ಆದೇಶದ ಬಗ್ಗೆ ಎಲಾನ್ ಮಸ್ಕ್​ ಅಸಮಾಧಾನ
ಎಲಾನ್ ಮಸ್ಕ್​ Image Credit source: Reuters
ನಯನಾ ರಾಜೀವ್
|

Updated on: Feb 22, 2024 | 10:04 AM

Share

ರೈತರ ಪ್ರತಿಭಟನೆಯೊಂದಿಗೆ ಸಂಬಂಧ ಹೊಂದಿರುವವರ ‘ಎಕ್ಸ್​’ ಖಾತೆಗಳನ್ನು ಅಮಾನತುಗೊಳಿಸುವ ಕೇಂದ್ರ ಸರ್ಕಾರದ ಆದೇಶವನ್ನು ಸ್ಪೇಸ್​ ಎಕ್ಸ್​​ ಮುಖ್ಯಸ್ಥ ಲಾನ್ ಮಸ್ಕ್(Elon Musk)​ ಒಪ್ಪಿಕೊಂಡರೂ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮಾನತುಗೊಂಡ ಖಾತೆಗಳಲ್ಲಿ ಹಲವು ಪ್ರಮುಖ ರೈತ ಮುಖಂಡರು ಮತ್ತು ಅವರ ಬೆಂಬಲಿಗರ ಖಾತೆಗಳೂ ಇವೆ. ವಾಸ್ತವವಾಗಿ, ರೈತರ ಪ್ರತಿಭಟನೆಗೆ ಸಂಬಂಧಿಸಿದ ಖಾತೆಗಳು ಮತ್ತು ಪೋಸ್ಟ್‌ಗಳನ್ನು ಅಮಾನತುಗೊಳಿಸಲು ಭಾರತ ಸರ್ಕಾರವು ಎಕ್ಸ್‌ಗೆ ಸೂಚನೆ ನೀಡಿತ್ತು. ರೈತರ ‘ದೆಹಲಿ ಚಲೋ ಪ್ರತಿಭಟನೆ’ಗೆ ಸಂಬಂಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿತ್ತು.

ರೈತರ ಪ್ರತಿಭಟನೆಗೆ ಸಂಬಂಧಿಸಿದ ಖಾತೆಗಳು ಮತ್ತು ಪೋಸ್ಟ್‌ಗಳನ್ನು ಅಮಾನತುಗೊಳಿಸುವ ಭಾರತ ಸರ್ಕಾರದ ಆದೇಶಗಳನ್ನು ಎಕ್ಸ್​ ಒಪ್ಪಿಕೊಂಡಿತು, ಆದರೆ ಈ ಕ್ರಮವನ್ನು ತೆಗೆದುಕೊಳ್ಳುವಲ್ಲಿ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿತು. ಸರ್ಕಾರದ ಸೂಚನೆಗಳನ್ನು ಅನುಸರಿಸಿ ಕ್ರಮ ಕೈಗೊಂಡಿರುವುದಾಗಿ ಮತ್ತು ಈ ಕ್ರಮದ ಬಗ್ಗೆ ಬಳಕೆದಾರರಿಗೆ ತಿಳಿಸಲಾಗಿದೆ ಎಂದು ಎಕ್ಸ್ ಹೇಳಿದೆ.

ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಮಾತನಾಡಿರುವ ಎಲಾನ್ ಮಸ್ಕ್​, ಭಾರತ ಸರ್ಕಾರದ ನಿರ್ಧಾರವನ್ನು ನಾವು ಒಪ್ಪಿದ್ದೇವೆ ಆದರೆ ಯಾರ ಹಕ್ಕುಗಳನ್ನು ಕಸಿದುಕೊಳ್ಳಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವಾಲಯದ ಕೋರಿಕೆಯ ಮೇರೆಗೆ ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಫೆಬ್ರವರಿ 14 ಮತ್ತು 19 ರಂದು ಆದೇಶಗಳನ್ನು ಹೊರಡಿಸಿದೆ.

ಮತ್ತಷ್ಟು ಓದಿ: Farmers Protest: ದೆಹಲಿ ಚಲೋ: ರೈತ ಸಾವು, 2 ದಿನಗಳ ಕಾಲ ರೈತರ ಪ್ರತಿಭಟನೆ ತಾತ್ಕಾಲಿಕ ಸ್ಥಗಿತ

ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್, ಸ್ನ್ಯಾಪ್‌ಚಾಟ್ ಮತ್ತು ಇತರ ಕೆಲವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಖಾತೆಗಳು ಮತ್ತು ಲಿಂಕ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದೇಶದಲ್ಲಿ ರೈತರ ಆಂದೋಲನ, ಪ್ರತಿಭಟನೆಗಳು ನಡೆಯುತ್ತಿವೆ. ಫೆ.13ರಂದು ರೈತರ ಪ್ರತಿಭಟನೆ ಆರಂಭವಾಗಿದ್ದು, ಇಂದು 10ನೇ ದಿನಕ್ಕೆ ಕಾಲಿಟ್ಟ ರೈತರು ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಎಂಎಸ್‌ಪಿ ಖಾತರಿಗಾಗಿ ರೈತರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ರೈತ ಸಂಘಗಳು ಮತ್ತು ಸರ್ಕಾರಗಳ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆಯುತ್ತಿವೆ. ಹಾಗೆಯೇ ಬುಧವಾರ ಪ್ರತಿಭಟನೆಯಲ್ಲಿ ನಿರತರಾಗಿದ್ದ 21 ವರ್ಷದ ಯುವಕನೊಬ್ಬ ಬುಲೆಟ್​ ತಗುಲಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ