Emirates Plane: 13 ಗಂಟೆಗಳ ಕಾಲ ಹಾರಾಟ ನಡೆಸಿ ಮತ್ತೆ ಅದೇ ಏರ್​ಪೋರ್ಟ್​ಗೆ ಬಂದಿಳಿದ ಎಮಿರೇಟ್ಸ್ ವಿಮಾನ

|

Updated on: Jan 31, 2023 | 10:05 AM

ದುಬೈನಿಂದ ಪ್ರಯಾಣಿಕರನ್ನು ಹೊತ್ತು ನ್ಯೂಜಿಲೆಂಡ್​ಗೆ ಹೊರಟಿದ್ದ ಎಮಿರೇಟ್ಸ್​ ವಿಮಾನವು 13 ಗಂಟೆಗಳ ಕಾಲ ಹಾರಾಟ ನಡೆಸಿ ಮತ್ತದೇ ಏರ್​ಪೋರ್ಟ್​ಗೆ ಬಂದಿಳಿದ ಘಟನೆ ವರದಿಯಾಗಿದೆ.

Emirates Plane: 13 ಗಂಟೆಗಳ ಕಾಲ ಹಾರಾಟ ನಡೆಸಿ ಮತ್ತೆ ಅದೇ ಏರ್​ಪೋರ್ಟ್​ಗೆ ಬಂದಿಳಿದ ಎಮಿರೇಟ್ಸ್ ವಿಮಾನ
ಎಮಿರೇಟ್ಸ್​ ವಿಮಾನ
Image Credit source: NDTV
Follow us on

ದುಬೈನಿಂದ ಪ್ರಯಾಣಿಕರನ್ನು ಹೊತ್ತು ನ್ಯೂಜಿಲೆಂಡ್​ಗೆ ಹೊರಟಿದ್ದ ಎಮಿರೇಟ್ಸ್​ ವಿಮಾನವು 13 ಗಂಟೆಗಳ ಕಾಲ ಹಾರಾಟ ನಡೆಸಿ ಮತ್ತದೇ ಏರ್​ಪೋರ್ಟ್​ಗೆ ಬಂದಿಳಿದ ಘಟನೆ ವರದಿಯಾಗಿದೆ. ಫಾಕ್ಸ್ ನ್ಯೂಸ್​ ಈ ವರದಿ ಮಾಡಿದ್ದು, ಎಮಿರೇಟ್ಸ್​ ವಿಮಾನ EK448 ಸ್ಥಳೀಯ ಕಾಲಮಾನ ಸುಮಾರು 10.30ರ ಸುಮಾರಿಗೆ ಟೇಕ್​ಆಫ್ ಆಗಿತ್ತು. ಪೈಲಟ್ 9 ಸಾವಿರ ಮೈಲಿ ಕ್ರಮಿಸಿದ ನಂತರ ಅರ್ಧದಾರಿಯಲ್ಲೇ ಯೂ ಟರ್ನ್ ಮಾಡಿ, ಮತ್ತೆ ದುಬೈ ಏರ್​ಪೋರ್ಟ್​ಗೆ ಬಂದಿಳಿಯಿತು.

ಮತ್ತಷ್ಟು ಓದಿ: Air Asia: ಲಕ್ನೋದಿಂದ ಕೋಲ್ಕತ್ತಾಗೆ ಹೊರಟಿದ್ದ ಏರ್​ ಏಷ್ಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ: ವಿಮಾನ ತುರ್ತು ಭೂಸ್ಪರ್ಶ

ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿ ತೀವ್ರ ಪ್ರವಾಹ ಸಂಭವಿಸಿದ್ದು, ವಾರಾಂತ್ಯದಲ್ಲಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಏರ್​ಪೋರ್ಟ್​ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಜನವರಿ 29ರ ಬೆಳಗ್ಗೆ 5 ಗಂಟೆಯವರೆಗೆ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸಿರಲಿಲ್ಲ. ನಿಲ್ದಾಣವು ಚಲಾವೃತವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆಕ್ಲೆಂಡ್ ಶುಕ್ರವಾರ ದಾಖಲೆಯ ಮಳೆಯೊಂದಿಗೆ ಅತ್ಯಂತ ಕೆಟ್ಟ ಪ್ರವಾಹವನ್ನು ಕಂಡಿದೆ. ನ್ಯೂಜಿಲೆಂಡ್‌ನ ಅತಿದೊಡ್ಡ ನಗರದಲ್ಲಿ ತುರ್ತು ಪರಿಸ್ಥಿತಿ ಮುಂದುವರಿದಿದೆ ಏಕೆಂದರೆ ಈ ವಾರ ಹೆಚ್ಚು ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಭೀಕರ ಪ್ರವಾಹದಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ದೋಣಿಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವಾಗ ಸೊಂಟದವರೆಗೂ ಬರುವ ನೀರಿನಲ್ಲಿ ನಿವಾಸಿಗಳು ಸಿಲುಕಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ