Watch ದೊಡ್ಡ ರಂಧ್ರವಿದ್ದರೂ ದುಬೈನಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ ಎಮಿರೇಟ್ಸ್ ವಿಮಾನ

ವಿಮಾನ ಟೇಕಾಫ್ ಆಗಿ 45 ನಿಮಿಷಗಳಲ್ಲಿ ದೊಡ್ಡದಾದ ಸದ್ದು ಕೇಳಿಸಿತು ಎಂದು ವಿಮಾನ ಪ್ರಯಾಣಿಕ ಪಾಟ್ರಿಕ್ ಹೇಳಿರುವುದಾಗಿ ಆಸ್ಟ್ರೇಲಿಯಾದ ಕೊರಿಯರ್ ಮೇಲ್ ವರದಿ ಮಾಡಿದೆ .

Watch ದೊಡ್ಡ ರಂಧ್ರವಿದ್ದರೂ ದುಬೈನಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ ಎಮಿರೇಟ್ಸ್  ವಿಮಾನ
ಎಮಿರೇಟ್ಸ್ ವಿಮಾನ
Updated By: ರಶ್ಮಿ ಕಲ್ಲಕಟ್ಟ

Updated on: Jul 06, 2022 | 1:51 PM

ದೆಹಲಿ: ವಿಮಾನದಲ್ಲಿ ದೊಡ್ಡ ರಂಧ್ರವಿದ್ದರೂ ಎಮಿರೇಟ್ಸ್ ವಿಮಾನ(Emirates Plane) ದುಬೈನಿಂದ (Dubai) ಆಸ್ಟ್ರೇಲಿಯಾಕ್ಕೆ (Australia) 14 ಗಂಟೆಗಳ ಕಾಲ ಪ್ರಮಾಣಿಸಿ ಬ್ರಿಸ್ಪೇನ್ ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದೆ. ಜುಲೈ 1ರಂದು ದುಬೈನಿಂದ ಹೊರಟ EK450 ವಿಮಾನದಲ್ಲಿ ಈ ರಂಧ್ರ ಕಾಣಿಸಿಕೊಂಡಿದೆ. ವಿಮಾನ ಟೇಕಾಫ್ ಆದ ಕೂಡಲೇ ವಿಮಾನದ ಟೈರ್ ಸ್ಫೋಟಗೊಂಡ ಪರಿಣಾಮ ವಿಮಾನದಲ್ಲಿ ರಂಧ್ರವುಂಟಾಗಿದೆ ಎಂದು ಯುರೊ ನ್ಯೂಸ್ ವರದಿ ಮಾಡಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಇದು ಸಾವಿರದಲ್ಲಿ ಒಂದು ಪ್ರಕರಣ ಎಂದು ಮಾಜಿ ಕಮರ್ಷಿಯಲ್ ಪೈಲಟ್ ಮತ್ತು ಲಂಡನ್​​ನ ಕಿಂಗ್​​ಸ್ಟನ್ ವಿಶ್ವ ವಿದ್ಯಾಲಯದಲ್ಲಿ ಏವಿಯೇಷನ್ ಸ್ಟಡೀಸ್ ಹಿರಿಯ ಉಪನ್ಯಾಸಕ ಡಾ ಜೊಹಾನೆಸ್ ಬೊರಾಹ್ ಹೇಳಿದ್ದಾರೆ. ಇದು ನಾವು ಸಾಮಾನ್ಯವಾಗಿ ನೋಡುವ ದೃಶ್ಯವಲ್ಲ ಎಂದು ಬೊರಾಹ್ ಹೇಳಿದ್ದಾರೆ. ವಿಮಾನ ಟೇಕಾಫ್ ಆಗಿ 45 ನಿಮಿಷಗಳಲ್ಲಿ ದೊಡ್ಡದಾದ ಸದ್ದು ಕೇಳಿಸಿತು ಎಂದು ವಿಮಾನ ಪ್ರಯಾಣಿಕ ಪಾಟ್ರಿಕ್ ಹೇಳಿರುವುದಾಗಿ ಆಸ್ಟ್ರೇಲಿಯಾದ ಕೊರಿಯರ್ ಮೇಲ್ ವರದಿ ಮಾಡಿದೆ .


ವಿಮಾನದ ಸಿಬ್ಬಂದಿ ಸಂಯಮದಿಂದ ಇದ್ದರು. ಆಹಾರ ವಿತರಣೆ ನಿಲ್ಲಿಸಿ ವಿಮಾನದ ರೆಕ್ಕೆ ಮತ್ತು ಎಂಜಿನ್ ಪರಿಶೀಲಿಸಿದರು ಎಂದು ಪಾಟ್ರಿಕ್ ಹೇಳಿದ್ದಾರೆ. ವಿಮಾನದ 22 ಟೈರ್ ಸ್ಫೋಟವಾಗಮಿದ್ದು ವಿಮಾನದ ಹೊರಭಾಗದಲ್ಲಿ ರಂಧ್ರವನ್ನುಂಟು ಮಾಡಿತು ಎಂದು ವಿಮಾನಸಂಸ್ಥೆ ಹೇಳಿದೆ.