Ethiopia Landslide: ಇಥಿಯೋಪಿಯಾದಲ್ಲಿ ಭಾರೀ ಭೂಕುಸಿತವಾಗಿ 157 ಸಾವು; ಶವಗಳನ್ನು ತಬ್ಬಿ ಅಳುತ್ತಿರುವ ಮಕ್ಕಳು

|

Updated on: Jul 23, 2024 | 4:37 PM

ದಕ್ಷಿಣ ಇಥಿಯೋಪಿಯಾದಲ್ಲಿ ಸಂಭವಿಸಿದ ಎರಡು ಭೂಕುಸಿತದಿಂದ ಸತ್ತವರ ಸಂಖ್ಯೆ 157ಕ್ಕೆ ಏರಿಕೆಯಾಗಿದೆ. ಈ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎನ್ನಲಾಗಿದೆ. ದಕ್ಷಿಣ ಇಥಿಯೋಪಿಯಾದ ಪ್ರಾದೇಶಿಕ ರಾಜ್ಯದಲ್ಲಿನ ಗೋಫಾ ವಲಯದಲ್ಲಿ ಭೂಕುಸಿತದಿಂದ ಹಲವಾರು ಮಂದಿ ಜೀವಂತ ಸಮಾಧಿಯಾಗಿದ್ದಾರೆ.

Ethiopia Landslide: ಇಥಿಯೋಪಿಯಾದಲ್ಲಿ ಭಾರೀ ಭೂಕುಸಿತವಾಗಿ 157 ಸಾವು; ಶವಗಳನ್ನು ತಬ್ಬಿ ಅಳುತ್ತಿರುವ ಮಕ್ಕಳು
ಇಥಿಯೋಪಿಯಾದ ಭೂಕುಸಿತ
Follow us on

ಅಡಿಸ್ ಅಬಾಬಾ: ಭಾರೀ ಮಳೆಯಿಂದ ಹಾನಿಗೊಳಗಾದ ಇಥಿಯೋಪಿಯಾದ ಭಾಗದಲ್ಲಿ ಭೂ ಕುಸಿತವಾಗಿ 157 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಹಲವು ಜನರು ಮಣ್ಣಿನ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಇಂದು ತಿಳಿಸಿದ್ದಾರೆ. ದಕ್ಷಿಣ ಇಥಿಯೋಪಿಯಾದ ಕೆಂಚೋ ಶಾಚಾ ಗೊಜ್ಡಿ ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಬಲಿಯಾದವರಲ್ಲಿ ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರು ಕೂಡ ಸೇರಿದ್ದಾರೆ.

ಸೋಮವಾರ ತಡರಾತ್ರಿ ಈ ಭೂಕುಸಿತದಲ್ಲಿ 55 ಜನ ಮೃತಪಟ್ಟಿದ್ದರು. ಇಂದು ಆ ಸಾವಿನ ಸಂಖ್ಯೆ 157ಕ್ಕೆ ಏರಿದೆ. ಇನ್ನೂ ಮಣ್ಣಿನ ಅಡಿಯಲ್ಲಿ ಹಲವು ಜನರು ಸಿಲುಕಿರುವ ಸಾಧ್ಯತೆಯಿದೆ. ಆದರೆ, ಅವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಗೋಫಾ ವಲಯವು ಕೆಸರುಗದ್ದೆಗಳು ತುಂಬಿರುವ ಪ್ರದೇಶವಾಗಿದೆ.

ಇದನ್ನೂ ಓದಿ: ಗೌರಿಕುಂಡ್ ಬಳಿ ಭೂಕುಸಿತ; ಕೇದಾರನಾಥಕ್ಕೆ ಹೋಗುತ್ತಿದ್ದ ಮೂವರು ಯಾತ್ರಿಕರ ಸಾವು; ಎಂಟು ಮಂದಿಗೆ ಗಾಯ

ಗೋಫಾದಲ್ಲಿನ ಮತ್ತೊಬ್ಬ ಅಧಿಕಾರಿ ಮಾರ್ಕೋಸ್ ಮೆಲೆಸೆ, ಇತರರನ್ನು ರಕ್ಷಿಸಲು ಪ್ರಯತ್ನಿಸುವಾಗ ಮಣ್ಣಿನಿಂದ ಆವೃತವಾದ ಗುಂಪಿನಲ್ಲಿ ಅನೇಕ ಜನರು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ನಾಪತ್ತೆಯಾದವರಿಗಾಗಿ ನಾವು ಇನ್ನೂ ಹುಡುಕಾಟ ನಡೆಸುತ್ತಿದ್ದೇವೆ ಎಂದು ಗೋಫಾ ವಲಯದ ವಿಪತ್ತು ಪ್ರತಿಕ್ರಿಯೆ ಸಂಸ್ಥೆಯ ನಿರ್ದೇಶಕ ಮೆಲೆಸೆ ಹೇಳಿದ್ದಾರೆ. ಅಪಘಾತದಿಂದ ತಾಯಿ, ತಂದೆ, ಸಹೋದರ, ಸಹೋದರಿ ಸೇರಿದಂತೆ ಇಡೀ ಕುಟುಂಬವನ್ನು ಕಳೆದುಕೊಂಡು ಶವಗಳನ್ನು ತಬ್ಬಿಕೊಂಡು ಅಳುತ್ತಿರುವ ದೃಶ್ಯ ಮನಕಲಕುವಂತಿದೆ.


ಇಥಿಯೋಪಿಯಾದ ಮಳೆಗಾಲದಲ್ಲಿ ಭೂಕುಸಿತಗಳು ಸಾಮಾನ್ಯವಾಗಿದೆ. ಜುಲೈನಲ್ಲಿ ಭೂ ಕುಸಿತ ಪ್ರಾರಂಭವಾಯಿತು. ಸೆಪ್ಟೆಂಬರ್ ಮಧ್ಯದವರೆಗೆ ಈ ರೀತಿಯ ದುರಂತಗಳು ನಡೆಯುತ್ತಲೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ಓದಿ: Video: ಮಾನವೀಯತೆಗೆ ಸಾಕ್ಷಿ ಇದು, ಪ್ರವಾಹಕ್ಕೆ ಸಿಲುಕಿದ್ದ ಮುದ್ದಾದ ನಾಯಿ ಮರಿಗಳನ್ನು ರಕ್ಷಿಸಿದ 73ರ ವೃದ್ಧ

ಈ ಸ್ಥಳದಿಂದ ಕೆಂಪು ಮಣ್ಣನ್ನು ಜನರು ಕೈಯಿಂದ ಅಗೆಯುತ್ತಿರುವುದು ಕಂಡು ಬರುತ್ತಿದೆ. ಅವರ ಬಳಿ ಮಣ್ಣು ತೆಗೆಯುವ ಯಂತ್ರ ಕೂಡ ಇಲ್ಲ. ಗೋಫಾ ರಾಜಧಾನಿ ಅಡಿಸ್ ಅಬಾಬಾದಿಂದ 320 ಕಿ.ಮೀ ದೂರದಲ್ಲಿದೆ. ಪೊಲೀಸರ ಪ್ರಕಾರ, ಒಂದು ಭೂಕುಸಿತದ ನಂತರ ಮತ್ತೊಂದು ಭೂಕುಸಿತವೂ ಉಂಟಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ