ಟ್ರಂಪ್ ಹತ್ಯೆ ಯತ್ನ ಪ್ರಕರಣ: ಅಮೆರಿಕ ರಹಸ್ಯ ಸೇವೆಯ ನಿರ್ದೇಶಕಿ ಕಿಂಬರ್ಲಿ ಚೀಟಲ್ ರಾಜೀನಾಮೆ
ಸೋಮವಾರ ಕಾಂಗ್ರೆಸ್ ಸಮಿತಿಯ ಮುಂದೆ ಹಾಜರಾಗಿದ್ದು ಟ್ರಂಪ್ ಅವರ ಬಲ ಕಿವಿಗೆ ಗಾಯವಾದ ಘಟನೆ ರಹಸ್ಯ ಸೇವೆಯ ವೈಫಲ್ಯವನ್ನು ಪ್ರತಿನಿಧಿಸುತ್ತದೆ. ಇದು"ದಶಕಗಳಲ್ಲಿ ರಹಸ್ಯ ಸೇವೆಯ ಅತ್ಯಂತ ಮಹತ್ವದ ಕಾರ್ಯಾಚರಣೆಯ ವೈಫಲ್ಯ" ಎಂದಿದ್ದಾರೆ ಚೀಟಲ್. ಟ್ರಂಪ್ ಮೇಲಿನ ದಾಳಿ ನಂತರ ರಿಪಬ್ಲಿಕನ್ ಮತ್ತು ಡೆಮೋಕ್ರಾಟ್ ಇಬ್ಬರೂ ಚೀಟಲ್ ರಾಜೀನಾಮೆಗೆ ಕರೆ ನೀಡಿದ್ದರು.
ವಾಷಿಂಗ್ಟನ್ ಜುಲೈ 23: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹತ್ಯೆ ಯತ್ನವನ್ನು ತಡೆಯುವ ಕಾರ್ಯಾಚರಣೆಯಲ್ಲಿ ತನ್ನ ಸಂಸ್ಥೆ ವಿಫಲವಾಗಿದೆ ಎಂದು ಒಪ್ಪಿಕೊಂಡ ಒಂದು ದಿನದ ನಂತರ ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್(US Secret Service Director ) ಕಿಂಬರ್ಲಿ ಚೀಟಲ್ (Kimberly Cheatle) ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಜುಲೈ 13 ರಂದು ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ 20 ವರ್ಷದ ಬಂದೂಕುಧಾರಿ ಮಾಜಿ ರಿಪಬ್ಲಿಕನ್ ಅಧ್ಯಕ್ಷ ಮತ್ತು ಪ್ರಸ್ತುತ ಶ್ವೇತಭವನದ ಅಭ್ಯರ್ಥಿಯನ್ನು ಗಾಯಗೊಳಿಸಿದ ನಂತರ ಚೀಟಲ್ ರಾಜೀನಾಮೆ ನೀಡಬೇಕು ಎಂದು ರಾಜಕೀಯ ಪಕ್ಷಗಳು ಒತ್ತಾಯಿಸುತ್ತಲೇ ಇದ್ದವು.
ಸಮಯ ಮೀರಿದೆ. ಅವರು ಇದನ್ನು ಕನಿಷ್ಠ ಒಂದು ವಾರದ ಹಿಂದೆ ಮಾಡಬೇಕಾಗಿತ್ತು. ಅವರು ರಿಪಬ್ಲಿಕನ್ ಮತ್ತು ಡೆಮೋಕ್ರಾಟ್‌ಗಳ ಕರೆಗೆ ಓಗೊಟ್ಟಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ರಿಪಬ್ಲಿಕನ್ ಸ್ಪೀಕರ್ ಮೈಕ್ ಜಾನ್ಸನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೋಮವಾರ ಕಾಂಗ್ರೆಸ್ ಸಮಿತಿಯ ಮುಂದೆ ಹಾಜರಾಗಿದ್ದು ಟ್ರಂಪ್ ಅವರ ಬಲ ಕಿವಿಗೆ ಗಾಯವಾದ ಘಟನೆ ರಹಸ್ಯ ಸೇವೆಯ ವೈಫಲ್ಯವನ್ನು ಪ್ರತಿನಿಧಿಸುತ್ತದೆ . ಇದು”ದಶಕಗಳಲ್ಲಿ ರಹಸ್ಯ ಸೇವೆಯ ಅತ್ಯಂತ ಮಹತ್ವದ ಕಾರ್ಯಾಚರಣೆಯ ವೈಫಲ್ಯ” ಎಂದಿದ್ದಾರೆ ಚೀಟಲ್. ಘಟನೆ ನಂತರ ರಿಪಬ್ಲಿಕನ್ ಮತ್ತು ಡೆಮೋಕ್ರಾಟ್ ಇಬ್ಬರೂ ಚೀಟಲ್ ರಾಜೀನಾಮೆಗೆ ಕರೆ ನೀಡಿದ್ದರು.
ಟ್ರಂಪ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಗನ್ ಮ್ಯಾನ್ ಎಆರ್ ಶೈಲಿಯ ಅಸಾಲ್ಟ್ ರೈಫಲ್ ನಿಂದ ಟ್ರಂಪ್ ಮೇಲೆ ಗುಂಡು ಹಾರಿಸಿದ್ದು, ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ನಂತರ ‘ಎಲ್ಲಿದ್ದಿಯಪ್ಪಾ ಜೋ’ ಅಂತ ಕೇಳುತ್ತಿದ್ದಾರೆ ನೆಟ್ಟಿಗರು
ಭದ್ರತಾ ಲೋಪದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಚೀಟಲ್ ಮಂಗಳವಾರ ಸಿಬ್ಬಂದಿಗೆ ಇಮೇಲ್‌ನಲ್ಲಿ ತಿಳಿಸಿದ್ದಾರೆ. “ಇತ್ತೀಚಿನ ಘಟನೆಗಳಿಂದಾಗಿ ನಿಮ್ಮ ನಿರ್ದೇಶಕ ಸ್ಥಾನದಿಂದ ಕೆಳಗಿಳಿಯುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:59 pm, Tue, 23 July 24