ಹಾರುತ್ತಿರುವ ವಿಮಾನದ ರೆಕ್ಕೆಯಲ್ಲಿ ವ್ಯಕ್ತಿಯೊಬ್ಬ ಮಲಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ನೂಗುನುಗ್ಗಲು ಮಾಡುತ್ತಿರುವ ಅಫ್ಘಾನಿಸ್ತಾನದ ಪ್ರಜೆಗಳ ವಿಡಿಯೊ ವೈರಲ್ ಆದ ಬೆನ್ನಲ್ಲೇ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ದೇಶ ತೊರೆಯುತ್ತಿರುವ ಅಫ್ಘಾನ್ ಪ್ರಜೆಯೊಬ್ಬ ವಿಮಾನದ ರೆಕ್ಕೆಯಲ್ಲಿ ಮಲಗಿ ಪ್ರಯಾಣಿಸುತ್ತಿರುವುದು ಎಂದು ಹೇಳುವ ಬರಹಗಳೊಂದಿಗೆ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದೆ.
ನ್ಯೂಸ್ 18 ಬಾಂಗ್ಲಾ ಕಳೆದ ಗುರುವಾರ ಅದೇ ವೈರಲ್ ವಿಡಿಯೊವನ್ನು ನ್ಯೂಸ್ ಬುಲೆಟಿನ್ನಲ್ಲಿ ಪ್ರಸಾರ ಮಾಡಿದ್ದು ಅಫ್ಘಾನಿಸ್ತಾನದ ಪ್ರಜೆಗಳು ವಿಮಾನದ ಟರ್ಬೈನ್ ಇಂಜಿನ್‍ಗಳಿಗೆ ಅಂಟಿಕೊಳ್ಳುವ ಹತಾಶ ಪ್ರಯತ್ನವನ್ನು ದೃಶ್ಯಗಳು ತೋರಿಸುತ್ತವೆ ಎಂದು ಹೇಳಿಕೊಂಡಿದೆ.
ಫ್ಯಾಕ್ಟ್ ಚೆಕ್
ಬೂಮ್ ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ್ದು, ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಆಗಸ್ಟ್ 24, 2020 ರಂದು ಟ್ವೀಟ್ ಮಾಡಿದ ವಿಡಿಯೊವೊಂದು ಸಿಕ್ಕಿದೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕಿಂತ ಮುಂಚೆಯೇ ಈ ವಿಡಿಯೊ ಹರಿದಾಡಿದೆ ಎಂಬುದಕ್ಕೆ ಈ ಟ್ವೀಟ್ ಸಾಕ್ಷಿ.ಅಷ್ಟೇ ಅಲ್ಲ ಈ ವಿಡಿಯೊ ಡಿಜಿಟಲ್ ಸೃಷ್ಟಿಯ ಕೆಲಸ. ಏಕೆಂದರೆ ಟರ್ಬೈನ್ ಇಂಜಿನ್‌ನಲ್ಲಿ ವ್ಯಕ್ತಿಯು ಗಾಳಿಯ ವಿರುದ್ಧ ದಿಶೆಗೆ ಮಲಗಿ ಅಷ್ಟು ಎತ್ತರದಲ್ಲಿ ಪ್ರಯಾಣಿಸಲು ಸಾಧ್ಯವೇ ಇಲ್ಲ.
مافيه الا المقعد هذا متاح ، نحجز لك؟ pic.twitter.com/ksLMNm8mIT
— ✈️ عبدالحميد الفضل (@Abdalhmedalfdel) August 23, 2020
ಸೂಕ್ಷ್ಮವಾಗಿ ಗಮನಿಸಿದಾಗ ವಿಡಿಯೊದ ಮೇಲಿನ ಎಡ ಮೂಲೆಯಲ್ಲಿ “@huyquanhoa” ಹೆಸರಿನ ಟಿಕ್‌ಟಾಕ್ ಬಳಕೆದಾರ ಐಡಿ ಸ್ಟಾಂಪ್ ಕಾಣಿಸಿತು. ” huyquanhoa ” ಹೆಸರಿನಿಂದ ಸುಳಿವು ಪಡೆದು ಯೂಟ್ಯೂಬ್‌ನಲ್ಲಿ ಹುಡುಕಿದಾಗ ” Quần Hoa TV ” ಹೆಸರಿನ ಚಾನಲ್‌ನಲ್ಲಿ ವಿಡಿಯೊವನ್ನು ಡಿಸೆಂಬರ್ 17, 2020 ರಂದು ಅಪ್‌ಲೋಡ್ ಮಾಡಲಾಗಿದೆ.
ವ್ಯಕ್ತಿಯೊಬ್ಬರು ಕುಳಿತುಕೊಂಡಿರುವ, ಮಲಗಿರುವ, ಡೆಸ್ಕ್‌ಟಾಪ್‌ನಲ್ಲಿ ಕೆಲಸ ಮಾಡುವ ಮತ್ತು ಹಾರುವ ವಿಮಾನದ ಟರ್ಬೈನ್ ಎಂಜಿನ್‌ನಲ್ಲಿ ಅಡುಗೆ ಮಾಡುವಂತಹ ವಿವಿಧ ಚಟುವಟಿಕೆಗಳನ್ನು ಮಾಡುವ ವಿಡಿಯೊ ಇಲ್ಲಿದೆ. ಯೂಟ್ಯೂಬ್ ವಿಡಿಯೊದ ಡಿಸ್ ಕ್ರಿಪ್ಶನ್ ಹುಯ್ ಕ್ಸುಯನ್ ಮಾಯ್ ಎಂಬ ಹೆಸರಿನ ವಿಡಿಯೊ ಸೃಷ್ಟಿಕರ್ತನ ಫೇಸ್‌ಬುಕ್ ಪ್ರೊಫೈಲ್‌ಗೆ ಕರೆದೊಯ್ಯಿತು. ಫೇಸ್‌ಬುಕ್‌ನಲ್ಲಿ ಆಗಸ್ಟ್ 17, 2020 ರಂದು ಅಪ್‌ಲೋಡ್ ಮಾಡಿದ ವಿಡಿಯೊ ಈತನ ಕೈಚಳಕ. ಚಾನಲ್‌ನ ಯೂಟ್ಯೂಬ್ ವಿವರಣೆಯ ಪ್ರಕಾರ, “ದೈನಂದಿನ ಜೀವನ ಮತ್ತು ಫೋಟೋಶಾಪ್‌ನಿಂದ ಅನೇಕ ಆಸಕ್ತಿದಾಯಕ ವಿಷಯಗಳ ನಡುವೆ ಆಸಕ್ತಿದಾಯಕ ವ್ಲಾಗ್ ವಿಡಿಯೊಗಳ ವಿಶೇಷವಾದ ಚಾನೆಲ್. ಇದು ನನ್ನ ಅಧಿಕೃತ ಚಾನೆಲ್, ಯಾವುದೇ ಉಪ ಚಾನೆಲ್‌ಗಳಿಲ್ಲ ಎಂದು ಮಾಯ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Fact Check: ಕೊರೊನಾ ಚಿಕಿತ್ಸೆಗೆ ಸರ್ಕಾರದಿಂದ ಯುವಜನರಿಗೆ ರೂ. 4000 ಕೊಡ್ತಾರಂತೆ! ಇದರಲ್ಲಿ ನಿಜ ಇದೆಯಾ?
(Fact Check video showing Afghan man lying on the turbine engine of an aircraft as it flies is Digital Creation)