2002 ರ ಗುಜರಾತ್ ಗಲಭೆಯಲ್ಲಿ (2002 Gujarat riots) ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಪಾತ್ರವನ್ನು ಪರಿಶೀಲಿಸುವ ಇತ್ತೀಚಿನ BBC ಸಾಕ್ಷ್ಯಚಿತ್ರ, ” India: The Modi Question “, ಭಾರತ ಮತ್ತು ಸಾಗರೋತ್ತರದಲ್ಲಿ ಭಾರೀ ಗದ್ದಲವನ್ನು ಉಂಟುಮಾಡಿದೆ. ಭಾರತ ಸರ್ಕಾರ ಪ್ರಸ್ತುತ ಡಾಕ್ಯುಮೆಂಟರಿಯ ಪ್ರದರ್ಶನವನ್ನು ನಿಷೇಧಿಸಿ ಇದು “ಮುಂದುವರಿದ ವಸಾಹತುಶಾಹಿ ಮನಸ್ಥಿತಿಯನ್ನು” ಪ್ರತಿಬಿಂಬಿಸುತ್ತದೆ ಎಂದು ಹೇಳಿದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಸತ್ಯ ಯಾವಾಗಲೂ ಹೊರಬರುತ್ತದೆ” ಎಂದು ಸಾಕ್ಷ್ಯಚಿತ್ರವನ್ನು ಬೆಂಬಲಿಸಿದ್ದಾರೆ. ಇದೀಗ ಬಿಬಿಸಿ ಸಾಕ್ಷ್ಯಚಿತ್ರದ ನಿರ್ಮಾಪಕರ ಜೊತೆ ರಾಹುಲ್ ಗಾಂಧಿ ನಿಂತಿರುವುದು ಎಂದು ಹೇಳುವ ಫೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಚಿತ್ರದ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಇಂಡಿಯಾ ಟುಡೇ ಫೋಟೊದಲ್ಲಿ ರಾಹುಲ್ ಜತೆ ಇರುವ ವ್ಯಕ್ತಿ ಬ್ರಿಟನ್‌ನ ಮಾಜಿ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಮತ್ತು ಭಾರತೀಯ ಹೂಡಿಕೆದಾರ ಸ್ಯಾಮ್ ಪಿತ್ರೋಡಾ ಎಂದಿದೆ.
Exactly 6 months ago, Rahul Gandhi was at UK n he said “Kerosene has been poured all over India, now it just needs a spark of fire”
Congress conspiracy behind BBC documentary to instigate riots in India ?
Pappu with BBC documentary producer! pic.twitter.com/D0rw0TSG7Q
— System Innovation PL (@vasudevkutum) January 25, 2023
ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮೇ 2022 ರಿಂದ ಇದೇ ಫೋಟೊ ಇರುವ ಅನೇಕ ಮಾಧ್ಯಮ ವರದಿಗಳು ಸಿಕ್ಕಿವೆ. ಈ ವರದಿಗಳ ಪ್ರಕಾರ ಈ ಫೋಟೊ 2022 ರಲ್ಲಿ ಬ್ರಿಟನ್‌ನ ಅಂದಿನ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಮತ್ತು ಭಾರತೀಯ ಹೂಡಿಕೆದಾರ ಸ್ಯಾಮ್ ಪಿತ್ರೋಡಾ ಅವರನ್ನು ಲಂಡನ್‌ನಲ್ಲಿ ಭೇಟಿಯಾಗಿದ್ದಾಗ ತೆಗೆದ ಫೋಟೊ ಇದಾಗಿದೆ.
ಮೇ 23, 2022 ರಂದು ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಇದೇ ಫೋಟೊವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿತ್ತು.
Our chairman @sampitroda with @RahulGandhi in London ? pic.twitter.com/veyWjx1bpL
— Indian Overseas Congress (@INCOverseas) May 23, 2022
ವರದಿಗಳ ಪ್ರಕಾರ, ಕಾರ್ಬಿನ್ ಅವರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ ಆ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ನಡೆದಿತ್ತು. ಕಾರ್ಬಿನ್ ಅವರನ್ನು ಭೇಟಿ ಮಾಡಿದ್ದಕ್ಕಾಗಿ ಬಿಜೆಪಿ ಟೀಕಿಸಿದ್ದು ಇದು ಭಾರತ ವಿರೋಧಿ ಎಂದು ಹೇಳಿತು. ಈ ಹೊತ್ತಲ್ಲಿ ಕಾರ್ಬಿನ್ ಜತೆಗೆ ಪ್ರಧಾನಿ ಮೋದಿಯವರೊಂದಿಗೆ ಫೋಟೊ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ಇದಕ್ಕೆ ಉತ್ತರಿಸಿತ್ತು.
ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸೈಲೆಂಟ್ ಆದ ಶಾಸಕ ಯತ್ನಾಳ್: ಯಡಿಯೂರಪ್ಪ ಬಗ್ಗೆ ಮಾತನಾಡದಂತೆ ಸೂಚನೆ
BBC ಪ್ರಕಾರ ಈ ಸಾಕ್ಷ್ಯ ಚಿತ್ರದ ನಿರ್ಮಾಪಕ ರಿಚರ್ಡ್ ಕುಕ್ಸನ್ ಮತ್ತು ಅದರ ಕಾರ್ಯನಿರ್ವಾಹಕ ನಿರ್ಮಾಪಕ ಮೈಕ್ ರಾಡ್ಫೋರ್ಡ್. ಬಿಬಿಸಿ ಅದರ ಕಾರ್ಯನಿರ್ವಾಹಕ ಮಂಡಳಿ ಮತ್ತು ಬ್ರಿಟನ್ ಸರ್ಕಾರ-ಅನುಮೋದಿತ ನಿಯಂತ್ರಣ ಪ್ರಾಧಿಕಾರ, Ofcom ನಿಂದ ನಿಯಂತ್ರಿಸಲ್ಪಡುತ್ತದೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, BBC ಯ ಹಣದ ಪ್ರಮುಖ ಭಾಗವು ವಾರ್ಷಿಕ ದೂರದರ್ಶನ ಶುಲ್ಕದಿಂದ ಬರುತ್ತದೆ. ಬ್ರಿಟಿಷ್ ಬ್ರಾಡ್‌ಕಾಸ್ಟರ್ ತನ್ನ ವಾಣಿಜ್ಯ ಅಂಗಸಂಸ್ಥೆಗಳಾದ BBC ಸ್ಟುಡಿಯೋಸ್ ಮತ್ತು BBC ಸ್ಟುಡಿಯೋವರ್ಕ್ಸ್‌ನಿಂದ ಆದಾಯವನ್ನು ಪಡೆಯುತ್ತದೆ.
ಮೋದಿ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದೊಂದಿಗೆ ಕಾರ್ಬಿನ್ ಅವರ ಸಂಬಂಧದ ಬಗ್ಗೆ ನಮಗೆ ಯಾವುದೇ ವಿಶ್ವಾಸಾರ್ಹ ವರದಿ ಸಿಕ್ಕಿಲ್ಲ. 2019 ರಲ್ಲಿ, ಕಾರ್ಬಿನ್ ಬೆಂಬಲಿಗರು ಬಿಬಿಸಿ ಬೋರಿಸ್ ಜಾನ್ಸನ್ ಪರವಾಗಿದ್ದಾರೆ ಎಂದು ಆರೋಪಿಸಿದ್ದರು.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ