ನ್ಯೂ ಸೌತ್ ವೇಲ್ಸ್ ಕಾಡ್ಗಿಚ್ಚು: ‘ಕೋಲಾ’ಗಳ ರಕ್ಷಣೆಗೆ ಹರಸಾಹಸ
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಅರಣ್ಯ ಪ್ರದೇಶದಲ್ಲಿ ಹಬ್ಬಿರುವ ಕಾಡ್ಗಿಚ್ಚು ಮತ್ತಷ್ಟು ಪ್ರದೇಶಗಳಿಗೆ ವ್ಯಾಪಿಸಿರುವ ಬೆನ್ನಲ್ಲೇ, ‘ಕೋಲಾ’ಗಳ ರಕ್ಷಣೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ವಿಶಿಷ್ಟ ಪ್ರಬೇಧದ ಸಾವಿರಾರು ‘ಕೋಲಾ’ ಪ್ರಾಣಿಗಳು ಮೃತಪಟ್ಟಿದ್ದು, ಬದುಕುಳಿದ ‘ಕೋಲಾ’ಗಳನ್ನ ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗುತ್ತಿದೆ. ಅರಣ್ಯಾಧಿಕಾರಿಗಳು ಕಾಡ್ಗಿಚ್ಚಿನ ಮಧ್ಯೆಯೇ ಕೋಲಾಗಳ ಗುಂಪನ್ನು ರಕ್ಷಿಸಿದೆ. ಬಹಳಷ್ಟು ದಿನಗಳಿಂದ ಹಬ್ಬಿರುವ ಕಾಡ್ಗಿಚ್ಚು ಇಡೀ ಅರಣ್ಯವನ್ನು ಸುಟ್ಟಿ ಈಗ ದೇಶದ ವಿವಿಧ ಭಾಗಗಳನ್ನು ಧ್ವಂಸಗೊಳಿಸಲು ಮುಂದಾಗಿದೆ. ಬೆಂಕಿಯ ಜ್ವಾಲೆ ದಟ್ಟವಾಗಿ ಬೆಳೆದಿದ್ದ ಅರಣ್ಯವನ್ನು ಸುಟ್ಟಿ ನೆಲ […]
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಅರಣ್ಯ ಪ್ರದೇಶದಲ್ಲಿ ಹಬ್ಬಿರುವ ಕಾಡ್ಗಿಚ್ಚು ಮತ್ತಷ್ಟು ಪ್ರದೇಶಗಳಿಗೆ ವ್ಯಾಪಿಸಿರುವ ಬೆನ್ನಲ್ಲೇ, ‘ಕೋಲಾ’ಗಳ ರಕ್ಷಣೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ವಿಶಿಷ್ಟ ಪ್ರಬೇಧದ ಸಾವಿರಾರು ‘ಕೋಲಾ’ ಪ್ರಾಣಿಗಳು ಮೃತಪಟ್ಟಿದ್ದು, ಬದುಕುಳಿದ ‘ಕೋಲಾ’ಗಳನ್ನ ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗುತ್ತಿದೆ.
ಅರಣ್ಯಾಧಿಕಾರಿಗಳು ಕಾಡ್ಗಿಚ್ಚಿನ ಮಧ್ಯೆಯೇ ಕೋಲಾಗಳ ಗುಂಪನ್ನು ರಕ್ಷಿಸಿದೆ. ಬಹಳಷ್ಟು ದಿನಗಳಿಂದ ಹಬ್ಬಿರುವ ಕಾಡ್ಗಿಚ್ಚು ಇಡೀ ಅರಣ್ಯವನ್ನು ಸುಟ್ಟಿ ಈಗ ದೇಶದ ವಿವಿಧ ಭಾಗಗಳನ್ನು ಧ್ವಂಸಗೊಳಿಸಲು ಮುಂದಾಗಿದೆ. ಬೆಂಕಿಯ ಜ್ವಾಲೆ ದಟ್ಟವಾಗಿ ಬೆಳೆದಿದ್ದ ಅರಣ್ಯವನ್ನು ಸುಟ್ಟಿ ನೆಲ ಕಾಣುವಂತೆ ಮಾಡಿದೆ.
ಇದರಿಂದಾಗಿ ಅರಣ್ಯದಲ್ಲಿ ಪ್ರಾಣಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಜ್ವಾಲೆಯ ಹಭೆಗೆ ಸುಟ್ಟು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಕೆಲವು ಕೋಲಾಗಳನ್ನು ರಕ್ಷಿಸಿ, ಅವುಗಳನ್ನು ಕೋಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಕೆಲವು ಪರಿಸರ ಸ್ನೇಹಿ ಸಂಘಗಳು ಹಾಗೂ ಸ್ಥಳೀಯರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಸ್ತೆಯಲ್ಲಿ ತೆರಳುವಾಗ ಜಾಗೃತೆ ಇರಲ್ಲಿ. ಅರಣ್ಯದಿಂದ ಓಡಿ ಬರುವ ಅಥವಾ ನಿಮ್ಮ ಕಣ್ಣಿಗೆ ಕಾಣುವ ಪ್ರಾಣಿಗಳನ್ನು ರಕ್ಷಿಸಿ. ನಿಮ್ಮ ಸಾಕು ಪ್ರಾಣಿಗಳಿಂದ ರಕ್ಷಿಸಿ. ಮನೆಯ ಮುಂದೆ ನೀರು ತುಂಬಿ ಇಡಿ ಎಂದು ಸಂದೇಶ ರವಾನಿಸಿದ್ದಾರೆ.
Published On - 12:47 pm, Mon, 23 December 19