LPG ಟ್ಯಾಂಕರ್ ಸ್ಫೋಟ: 18 ಭಾರತೀಯರ ದುರ್ಮರಣ

ಸುಡಾನ್​: ಇಲ್ಲಿನ ಸೆರಾಮಿಕ್​ ಫ್ಯಾಕ್ಟರಿಯಲ್ಲಿ ಎಲ್​ಪಿಜಿ ಟ್ಯಾಂಕರ್ ಸ್ಫೋಟಗೊಂಡು ನಡೆದ ಭೀಕರ ದುರಂತದಲ್ಲಿ 18 ಭಾರತೀಯರು ಬಲಿಯಾಗಿದ್ದರು ಹಲವು ಮಂದಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಸುಡಾನ್ ರಾಜಧಾನಿ ಖರ್ತೌಮ್​ನ ಬಹ್ರಿ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿತ್ತು. ಟ್ಯಾಂಕರ್ ಸ್ಫೋಟಗೊಂಡು ಒಟ್ಟು 23 ಮಂದಿ ಬಲಿಯಾಗಿದ್ದಾರೆ. 18 ಮಂದಿ ಭಾರತೀಯರು ಮೃತಪಟ್ಟಿರುವ ಬಗ್ಗೆ ಸರ್ಕಾರ ಖಚಿತಪಡಿಸಿದೆ. ಘಟನೆ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಮೃತಪಟ್ಟವರ ಪೈಕಿ ಮೂವರು ತಮಿಳುನಾಡು ಮೂಲದವ್ರು, ಒಬ್ಬರು ಗುಜರಾತ್, ಇಬ್ಬರು […]

LPG ಟ್ಯಾಂಕರ್ ಸ್ಫೋಟ: 18 ಭಾರತೀಯರ ದುರ್ಮರಣ

Updated on: Nov 19, 2020 | 12:07 AM

ಸುಡಾನ್​: ಇಲ್ಲಿನ ಸೆರಾಮಿಕ್​ ಫ್ಯಾಕ್ಟರಿಯಲ್ಲಿ ಎಲ್​ಪಿಜಿ ಟ್ಯಾಂಕರ್ ಸ್ಫೋಟಗೊಂಡು ನಡೆದ ಭೀಕರ ದುರಂತದಲ್ಲಿ 18 ಭಾರತೀಯರು ಬಲಿಯಾಗಿದ್ದರು ಹಲವು ಮಂದಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಸುಡಾನ್ ರಾಜಧಾನಿ ಖರ್ತೌಮ್​ನ ಬಹ್ರಿ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿತ್ತು.

ಟ್ಯಾಂಕರ್ ಸ್ಫೋಟಗೊಂಡು ಒಟ್ಟು 23 ಮಂದಿ ಬಲಿಯಾಗಿದ್ದಾರೆ. 18 ಮಂದಿ ಭಾರತೀಯರು ಮೃತಪಟ್ಟಿರುವ ಬಗ್ಗೆ ಸರ್ಕಾರ ಖಚಿತಪಡಿಸಿದೆ. ಘಟನೆ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಮೃತಪಟ್ಟವರ ಪೈಕಿ ಮೂವರು ತಮಿಳುನಾಡು ಮೂಲದವ್ರು, ಒಬ್ಬರು ಗುಜರಾತ್, ಇಬ್ಬರು ಉತ್ತರಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.

Published On - 9:25 am, Tue, 31 December 19