ತಾಂತ್ರಿಕ ದೋಷದಿಂದ ಮನೆ ಮೇಲೆ ಬಿದ್ದ ವಿಮಾನ, ಯಾರೂ ಬದುಕುಳಿಯಲಿಲ್ಲ
ಕಾಂಗೋ: ನವೆಂಬರ್ 24ರಂದು ಆಫ್ರಿಕಾ ಖಂಡದ ಕಾಂಗೋದಲ್ಲಿ ಲಘು ವಿಮಾನ ಪತನಗೊಂಡು ಕನಿಷ್ಠ 23 ಮಂದಿ ಮೃತಪಟ್ಟಿದ್ದರು. ಗೋಮಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಮನೆಗಳಿಗೆ ವಿಮಾನ ಡಿಕ್ಕಿಯೊಡೆದು ಈ ಅವಘಡ ಸಂಭವಿಸಿತ್ತು. ಮೂಲಗಳ ಪ್ರಕಾರ ವಿಮಾನದಲ್ಲಿ 17 ಪ್ರಯಾಣಿಕರು ಮತ್ತು ಕೆಲ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅವಘಡದಲ್ಲಿ ವಿಮಾನ ಸಿಬ್ಬಂದಿ ಸೇರಿದಂತೆ ಯಾವ ಪ್ರಯಾಣಿಕರು ಬದುಕುಳಿದಿಲ್ಲ ಎಂದು ವರದಿಯಾಗಿದೆ. ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್ವೊಂದರಲ್ಲಿ ಸ್ಫೋಟದ […]
ಕಾಂಗೋ: ನವೆಂಬರ್ 24ರಂದು ಆಫ್ರಿಕಾ ಖಂಡದ ಕಾಂಗೋದಲ್ಲಿ ಲಘು ವಿಮಾನ ಪತನಗೊಂಡು ಕನಿಷ್ಠ 23 ಮಂದಿ ಮೃತಪಟ್ಟಿದ್ದರು. ಗೋಮಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಮನೆಗಳಿಗೆ ವಿಮಾನ ಡಿಕ್ಕಿಯೊಡೆದು ಈ ಅವಘಡ ಸಂಭವಿಸಿತ್ತು.
ಮೂಲಗಳ ಪ್ರಕಾರ ವಿಮಾನದಲ್ಲಿ 17 ಪ್ರಯಾಣಿಕರು ಮತ್ತು ಕೆಲ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅವಘಡದಲ್ಲಿ ವಿಮಾನ ಸಿಬ್ಬಂದಿ ಸೇರಿದಂತೆ ಯಾವ ಪ್ರಯಾಣಿಕರು ಬದುಕುಳಿದಿಲ್ಲ ಎಂದು ವರದಿಯಾಗಿದೆ.
ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್ವೊಂದರಲ್ಲಿ ಸ್ಫೋಟದ ಶಬ್ಧ ಕೇಳಿಸಿದೆ. ತಕ್ಷಣ ಪೈಲೆಟ್ ವಿಮಾನವನ್ನು ಆರಂಭದ ಸ್ಥಳಕ್ಕೆ ಮರುಳಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
Published On - 10:12 am, Tue, 31 December 19